ಕಿನ್ನೌರ್‌ನಲ್ಲಿ ಭೂಕುಸಿತ; ಹಿಮಾಚಲ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-5 ರಲ್ಲಿ ಸಂಚಾರ ಸ್ಥಗಿತ

ಕಳೆದ ಐದು ದಿನಗಳಿಂದ ನಿರಂತರ ಹಿಮಪಾತ ಮತ್ತು ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ.

Last Updated : Feb 12, 2019, 01:46 PM IST
ಕಿನ್ನೌರ್‌ನಲ್ಲಿ ಭೂಕುಸಿತ; ಹಿಮಾಚಲ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-5 ರಲ್ಲಿ ಸಂಚಾರ ಸ್ಥಗಿತ  title=
Pic Courtesy: ANI

ಕಿನ್ನೌರ್‌(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಮಂಗಳವಾರ ಭೂಕುಸಿತ ಸಂಭವಿಸಿದ್ದು, ನಂತರ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಕಳೆದ ಐದು ದಿನಗಳಿಂದ ನಿರಂತರ ಹಿಮಪಾತ ಮತ್ತು ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ ಎನ್ನಲಾಗುತ್ತಿದ್ದು, ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಈವರೆಗೂ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ.

ಹಿಮ ಮತ್ತು ಹಿಮಪಾತದ ಅಧ್ಯಯನ ವಿಭಾಗ(SASE) ಮೊದಲೇ ಕುಲು, ಚಂಬ, ಲಹೌಲ್, ಸ್ಪಿತಿ, ಶಿಮ್ಲಾ, ಕಂಗ್ರಾ ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಭಾರೀ ಹಿಮಪಾತದ ಬಗ್ಗೆ ಎಚ್ಚರಿಕೆ ನೀಡಿತ್ತು.

 

(With ANI inputs)

 

Trending News