Mango Peel Health Benefits: ನೀವೂ ಮಾವಿನ ಹಣ್ಣನ್ನು ತಿಂದು ಸಿಪ್ಪೆಯನ್ನು ಕಸದ ತೊಟ್ಟಿಗೆ ಎಸೆಯುತ್ತೀರಾ? ಈ ಲೇಖನ ಓದಿ!

Health Benefits Mango Peel: ಸಾಮಾನ್ಯವಾಗಿ ಮಾವಿನ ಹಣ್ಣಿನ ಸೇವನೆಯ ಬಳಿಕ ನಾವು ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಅದರ ಸೇವನೆಯಿಂದಾಗುವ ಲಾಭ ಕೇಳಿದರೆ, ನೀವು ನಿಮ್ಮ ತಪ್ಪನ್ನು ಎಂದಿಗೂ ಕೂಡ ಪುನರಾವರ್ತಿಸುವುದಿಲ್ಲ. ಮಾವಿನ ಹಣ್ಣಿನ ಸಿಪ್ಪೆ ಹೇಗೆ ಲಾಭಕಾರಿಯಾಗಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Apr 14, 2023, 11:17 PM IST
  • ಸಿಹಿ ಮತ್ತು ರಸಭರಿತ ಹಣ್ಣಾದ 'ಮಾವು'ವನ್ನು ಸೇವಿಸುವಾಗ,
  • ಹೆಚ್ಚಿನ ಜನರು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆಯುತ್ತಾರೆ.
  • ಅದನ್ನು ತಿಂದರೆ ಮಾವಿನಹಣ್ಣಿನ ರುಚಿ ಕೆಡುತ್ತದೆ ಎಂಬುದು ಕೆಲವರ ಅನಿಸಿಕೆ
Mango Peel Health Benefits: ನೀವೂ ಮಾವಿನ ಹಣ್ಣನ್ನು ತಿಂದು ಸಿಪ್ಪೆಯನ್ನು ಕಸದ ತೊಟ್ಟಿಗೆ ಎಸೆಯುತ್ತೀರಾ? ಈ ಲೇಖನ ಓದಿ! title=
ಮಾವಿನ ಸಿಪ್ಪೆಯ ಆರೋಗ್ಯ ಲಾಭಗಳು!

Health Benefits Mango Peel: ಬೇಸಿಗೆಯ ಕಾಲ ಬಂತೆಂದರೆ ಮಾರುಕಟ್ಟೆಗೆ ಮಾವಿನ ಹಣ್ಣಿನ ಆಗಮನವಾಗುತ್ತದೆ. ಪ್ರತಿಯೊಬ್ಬರೂ ಈ ಹಣ್ಣನ್ನು ಬಹಳ ಉತ್ಸಾಹದಿಂದ ಸೇವಿಸುತ್ತಾರೆ, ಆದರೆ ಅದರ ಸಿಪ್ಪೆ ಕೂಡ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ನೀವೂ ಕೂಡ ಮಾವಿನಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕುತ್ತಿದ್ದರೆ, ಈ ತಪ್ಪನ್ನು ಎಂದಿಗೂ ಪುನರಾವರ್ತಿಸಬೇಡಿ. ಹಾಗಾದರೆ ಮಾವಿನ ಸಿಪ್ಪೆ ನಮಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಮಾವಿನ ಹಣ್ಣಿನ ಸಿಪ್ಪೆಯನ್ನು ತಿನ್ನಬಹುದೇ?
ಸಿಹಿ ಮತ್ತು ರಸಭರಿತ ಹಣ್ಣಾದ 'ಮಾವು'ವನ್ನು ಸೇವಿಸುವಾಗ, ಹೆಚ್ಚಿನ ಜನರು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಅದನ್ನು ತಿಂದರೆ ಮಾವಿನಹಣ್ಣಿನ ರುಚಿ ಕೆಡುತ್ತದೆ ಎಂಬುದು ಕೆಲವರ ಅನಿಸಿಕೆಯಾದರೆ, ಅದನ್ನೂ ಸೇವಿಸಬಹುದೇ ಎಂಬ ಪ್ರಶ್ನೆ ಕೆಲವರದ್ದಾಗಿರುತ್ತದೆ. ಹೌದು, ಅದನ್ನು ನೀವು ಸೇವಿಸಬಹುದು ಅದನ್ನು ತಿನ್ನುವುದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ.

ಈ ರೋಗಗಳಲ್ಲಿ ಲಾಭಕಾರಿಯಾಗಿದೆ
ವರದಿಯ ಪ್ರಕಾರ, ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಇರುತ್ತವೆ, ಇದು ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುತ್ತದೆ, ಮಾವಿನ ಸಿಪ್ಪೆಯು ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ನಿಂದ ರಕ್ಷಿಸಲು ಸಹ ಉಪಯುಕ್ತವಾಗಿದೆ. ಮಾವಿನ ಸಿಪ್ಪೆಯು ಸಸ್ಯಗಳಲ್ಲಿ ಕಂಡುಬರುವ ಫೈಟೊನ್ಯೂಟ್ರಿಯೆಂಟ್ಸ್ ಗಳಿಂದ  ಸಮೃದ್ಧವಾಗಿದೆ.

ಇದನ್ನೂ ಓದಿ-Diabetic Sugar: ನಿಮ್ಮ ಆಹಾರದಲ್ಲಿ ಈ ಸಕ್ಕರೆಯನ್ನು ಬಳಸಿ, ಮಧುಮೇಹದಿಂದ ದೂರ ಉಳಿಯಿರಿ!

ಮಾವಿನ ಸಿಪ್ಪೆಯು ತೂಕ ಇಳಿಕೆಗೆ ಸಹಕಾರಿಯಾಗಿದೆ
ಇದಲ್ಲದೆ, ನೀವು ತೂಕ ಇಳಿಸಿಕೊಳ್ಳಲು ಬಯಸುವವರು ಕೂಡ ಮಾವಿನ ಸಿಪ್ಪೆಯನ್ನು ಸೇವಿಸಬಹುದು. ಇದರ ಸಿಪ್ಪೆ ಇಳಿಕೆ ಮಾಡಲು ಸಹ ತುಂಬಾ ಉಪಯುಕ್ತ ಸಾಬೀತಾಗುತ್ತವೆ.ಅದೇನೆಂದರೆ, ತೂಕವನ್ನು ಕಳೆದುಕೊಳ್ಳುವ ಬಯಸುವವರು ಮಾವಿನ ಸಿಪ್ಪೆಯನ್ನು ಎಸೆಯಬಾರದು. ಏಕೆಂದರೆ ಇದು ನಿಮ್ಮ ಹೆಚ್ಚಿದ ತೂಕವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Giloy Health Benefits: ಪುರುಷರ ಹಲವು ಲೈಂಗಿಕ ಸಮಸ್ಯೆಗಳಿಗೆ ರಾಮಬಾಣ ಈ ಬಳ್ಳಿ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ- 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News