Tomato health tips : ಅತಿಯಾದ್ರೆ ಅಮೃತವೂ ವಿಷ ಎನ್ನುವ ಗಾದೆ ಮಾತಿನಂತೆ ಯಾವುದೇ ಆಹಾರ ಪದಾರ್ಥವನ್ನು ಇಷ್ಟ ಅಂತ ಹೆಚ್ಚಾಗಿ ತಿಂದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಟೊಮೆಟೊ ಸಹ ಹೊರತಾಗಿಲ್ಲ. ಆಹಾರ ಪರಿಮಳ ಮತ್ತು ರುಚಿಗಾಗಿ ಬಳಸುವ ಈ ತರಕಾರಿಯನ್ನು ಹೆಚ್ಚಾಗಿ ಸೇವಿಸುವುದು ಸಹ ಅಪಾಯ.
Tomato side effects : ಅಮೃತ ಅತಿಯಾಗಿ ಸೇವಿಸಿದ್ರೂ ಅಪಾಯ ಅಂತಾರಲ್ಲ, ಹಾಗೆ ಯಾವುದೇ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆಹಾರದಲ್ಲಿ ಟೊಮೆಟೊವನ್ನು ಹೆಚ್ಚು ಸೇರಿಸುವ ಅಭ್ಯಾಸವಿದೆಯೇ? ಹಾಗಿದ್ದರೆ, ಅಡ್ಡಪರಿಣಾಮಗಳು ಮತ್ತು ಅಪಾಯಗಳ ಬಗ್ಗೆ ನೀವು ತಿಳಿದಿರಲೇಬೇಕು.
ಟೊಮೆಟೊಗಳನ್ನು ಆಹಾರದ ಪರಿಮಳ ಹೆಚ್ಚಿಸಲು ಬಳಸಲಾಗುತ್ತದೆ. ಇದರಲ್ಲಿರುವ ಹುಳಿ ಅಂಶ ಬೇಯಿಸಿದ ಆಹಾರಕ್ಕೆ ತಾಜಾ ಹುಳಿ ರುಚಿಯನ್ನು ನೀಡುತ್ತದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಅಧಿಕವಾದ್ರೆ, ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಟೊಮೆಟೊದಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಹೇರಳವಾಗಿದ್ದರೂ, ಅವು ಅಧಿಕವಾಗಿದರೆ ಜೀರ್ಣವಾಗದೆ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆ ಇದೆ.
ಹೆಚ್ಚು ಟೊಮ್ಯಾಟೊ ತಿನ್ನುವುದರಿಂದ ಎದೆಯುರಿ ಅಥವಾ ಆಮ್ಲೀಯತೆ ಉಂಟಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ವಿಶೇಷವಾಗಿ ಜಾಗರೂಕರಾಗಿರಬೇಕು.
ಕೀಲು ನೋವಿನ ಸಮಸ್ಯೆ ಇದ್ದರೆ ಟೊಮೆಟೊ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಏಕೆಂದರೆ ಟೊಮೇಟೊದಲ್ಲಿರುವ ಸೊಲನೈನ್ ಎಂಬ ಆಲ್ಕಲಾಯ್ಡ್ ಕೀಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡುತ್ತದೆ.
ಹಲವಾರು ಟೊಮೆಟೊಗಳು ಚರ್ಮದ ದದ್ದು, ಕೆಮ್ಮು, ಸೀನುವಿಕೆ ಮತ್ತು ಗಂಟಲಿನ ತುರಿಕೆ ಮುಂತಾದ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಅಲರ್ಜಿ ಇರುವವರು ಆರೋಗ್ಯ ಕಾಪಾಡಿಕೊಳ್ಳಲು ಟೊಮೆಟೊದಿಂದ ದೂರವಿರುವುದು ಉತ್ತಮ.