Viral video : ಸೀರೆ ಉಟ್ಕೊಂಡು ಸರಿಯಾಗಿ ಓಡುವುದಕ್ಕೂ ಅಗಲ್ಲ. ಅದನ್ನ ಮೆಂಟೈನ್ ಮಾಡುವುದಂತೂ ಅಷ್ಟು ಸರಳವಲ್ಲ. ಅಂತಹುದರಲ್ಲಿ ಯುವತಿಯೊಬ್ಬಳು ಸೀರೆಯುಟ್ಟು ಜಿಮ್ನಲ್ಲಿ ಸಖತ್ ವರ್ಕೌಟ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರನ್ನು ಬೆರಗುಗೊಳಿಸುತ್ತಿದೆ. ನೀವು ಒಮ್ಮೆ ಆ ವಿಡಿಯೋ ನೋಡಿಕೊಂಡು ಬನ್ನಿ.
ರೀನಾ ಎಂಬುವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಸುಂದರವಾದ ಸೀರೆಯನ್ನು ಧರಿಸಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ರೀನಾ ತನ್ನ ವ್ಯಾಯಾಮದ ಭಾಗವಾಗಿ ಸ್ಟ್ರೆಚಿಂಗ್ ಮತ್ತು ಸ್ಕ್ವಾಟ್ಗಳನ್ನು ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ, ಲೆಗ್ ಸ್ಟ್ರೆಚಿಂಗ್ ವೇಲೆ ಆಕೆಯ ಮೇಲೆ ಇಬ್ಬರು ಯುವತಿಯರು ಕುಳಿತಿದ್ದನ್ನು ನೀವು ಕಾಣಬಹುದು.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಏಪ್ರಿಲ್ 5 ರವರೆಗೆ ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ
ಈ ವಿಡಿಯೋನ್ನು ಸುಮಾರು 50,000 ಜನರು ವೀಕ್ಷಣೆ ಮಾಡಿದ್ದಾರೆ. ಹಲವು ನೆಟ್ಟಿಗುರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ರೀನಾ ಅವರ ಫಿಟ್ನೆಸ್ ಎಲ್ಲರನ್ನು ಬೆರಗುಗೊಳಿಸಿತು. ಸೀರೆ ಉಟ್ಟುಕೊಂಡು ಎಷ್ಟು ಚೆನ್ನಾಗಿ ವರ್ಕ್ ಔಟ್ ಮಾಡುತ್ತಾಳೆ ಎಂದು ಅನೇಕರು ಹೊಗಳಿದ್ದಾರೆ. ಅಲ್ಲದೆ, ಸೀರೆ ಉಟ್ಟು ಇದೇಲ್ಲಾ ಹೇಗೆ ಮಾಡುತ್ತೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಕೆಲವರು ಇದು ತುಂಬಾ ಕಷ್ಟ ಅಂತ ಪ್ರತಿಕ್ರಿಯಿಸಿದ್ದಾರೆ. ಇದೇ ರೀತಿಯ ಹಲವಾರು ವಿಡಿಯೋಗಳನ್ನು ರೀನಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಣಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.