Women's Premier League 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್’ನ ದೊಡ್ಡ ಕ್ರಿಕೆಟ್ ಫ್ರಾಂಚೈಸ್ ಆಗಿದೆ, ಈ ತಂಡಕ್ಕಿರುವ ಅಭಿಮಾನಿ ಬಳಗ ಕೊಂಚವಲ್ಲ. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಅಥವಾ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಕೂಡ ಈ ಅಭಿಮಾನಕ್ಕೆ ಪ್ರಮುಖ ಕಾರಣ.
ಇದನ್ನೂ ಓದಿ: ಪುರುಷ-ಮಹಿಳಾ IPLನಲ್ಲಿ RCBಗಿಲ್ವಾ ಲಕ್? ದೇಶೀಯರ ಬಿಟ್ಟು ವಿದೇಶಿಯರಿಗೇ ಮಣೆಹಾಕುತ್ತಿದ್ಯಾ ತಂಡ!
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 8 ಸ್ಥಾಪಕ ಸದಸ್ಯರಲ್ಲಿ ಒಂದಾಗಿದೆ, ಇಂಡಿಯನ್ ಪ್ರೀಮಿಯರ್ ಲೀಗ್ ಎಂಬುದು ಪ್ರಸ್ತುತ ವಿಶ್ವದ ಅತಿದೊಡ್ಡ T20 ಕ್ರಿಕೆಟ್ ಲೀಗ್ ಮತ್ತು ವಿಶ್ವದ ಅತಿದೊಡ್ಡ ಕ್ರೀಡಾ ಲೀಗ್ಗಳಲ್ಲಿ ಒಂದಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಭಾಗವಾಗಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಇತಿಹಾಸದಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಫೈನಲ್ ಹಂತ ತಲುಪಿದ್ದರೂ ಕೂಡ ಪಂದ್ಯಾವಳಿಯನ್ನು ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಇನ್ನು ಪ್ರಸ್ತುತ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಿದೆ. ಪುರುಷರ ತಂಡದಂತೆಯೇ ಲೀಗ್’ನಲ್ಲಿ ಹೀನಾಯ ಸೋಲು ಕಾಣುತ್ತಿದೆ. ಇದಕ್ಕೆ ಕಾರಣ ಏನು ಎಂಬುದೇ ಅರಿವಿಗೆ ಬರುತ್ತಿಲ್ಲ.
ಪ್ರಸ್ತುತ ಪಾಯಿಂಟ್ಸ್ ಟೇಬಲ್’ನಲ್ಲಿ ಕೆಳಭಾಗದಲ್ಲಿ ರಾಯಲ್ ಚಾಲೆಂಜಿಂಗ್ ಬೆಂಗಳೂರು ಮಹಿಳಾ ತಂಡ ಸ್ಥಾನ ಪಡೆದಿದೆ. ಆಡಿದ 5 ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದೆ ಶೂನ್ಯ ಅಂಕ ಪಡೆದಿದೆ. ಇವರ ರನ್ ರೇಟ್ -2.109 ಆಗಿದೆ. ಇದನ್ನು ಕಂಡರೆ ಮಹಿಳಾ ಪ್ರೀಮಿಯರ್ ಲೀಗ್’ನ (ಡಬ್ಲ್ಯೂಪಿಎಲ್) ಪ್ಲೇಆಫ್ಗಳಿಗೆ ಆರ್ ಸಿಬಿ ಪ್ರವೇಶ ಮಾಡುವುದು ಕೂಡ ಕಷ್ಟವಾಗುವಂತಿದೆ. ಆದರೆ ಅವರಿಗೆ ಇನ್ನೂ ಒಂದು ಅವಕಾಶವಿದೆ.
ಮುಂಬರುವ 3 ಪಂದ್ಯಗಳಲ್ಲಿ ಅದ್ಭುತ ಸ್ಕೋರ್ ಕಲೆಹಾಕಿ ಗೆದ್ದರೆ, WPL 2023 ಪ್ಲೇಆಫ್ಗಳಿಗೆ ಹೋಗಬಹುದು. ಪಂದ್ಯಾವಳಿಯ ಸ್ವರೂಪಗಳ ಪ್ರಕಾರ, ಪಾಯಿಂಟ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ಮಾರ್ಚ್ 26 ರಂದು ನಡೆಯಲಿರುವ WPL 2023 ಫೈನಲ್ಗೆ ನೇರವಾಗಿ ಅರ್ಹತೆ ಪಡೆಯುತ್ತದೆ. ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ನಲ್ಲಿ ಪರಸ್ಪರ ಸೆಣಸಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅರ್ಹತೆ ಪಡೆಯಲು, ಗರಿಷ್ಠ ಅಂಕಪಟ್ಟಿಯಲ್ಲಿ 3 ನೇ ಸ್ಥಾನವನ್ನು ತಲುಪಬಹುದು. ಈಗ, ಆರ್ಸಿಬಿ ಯುಪಿ ವಾರಿಯರ್ಜ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧ ಉಳಿದಿರುವ ಎಲ್ಲಾ 3 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಈ ಮೂಲಕ 6 ಅಂಕಗಳನ್ನು ಪಡೆಯಬಹುದು.
ಇದನ್ನು ಹೊರತುಪಡಿಸಿದರೆ, ಯುಪಿ ವಾರಿಯರ್ಜ್ ಉಳಿದ ಎಲ್ಲಾ ಪಂದ್ಯಗಳಲ್ಲಿ ಸೋಲು ಅನುಭವಿಸಿ, ಗುಜರಾತ್ ಜೈಂಟ್ಸ್ 1 ಪಂದ್ಯಕ್ಕಿಂತ ಹೆಚ್ಚು ಗೆಲ್ಲದಿದ್ದರೆ ಅವರುಗಳ ರನ್ ರೇಟ್ ಕುಸಿಯುತ್ತದೆ. ಹೀಗಾದರೆ ಆರ್ ಸಿ ಬಿ ಪ್ಲೇ ಆಫ್ ಗೆ ಪ್ರವೇಶ ಪಡೆಯುತ್ತದೆ.
ಇದನ್ನೂ ಓದಿ: Virat Kohli: 40 ತಿಂಗಳ ಬಳಿಕ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಬಂತು ಈ ವಿಶೇಷ ಕ್ಷಣ…! ಏನದು ಗೊತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಈ ಸೀಸನ್ ಕೊಂಚ ಕಷ್ಟಕರವಾಗಿ ಪಡಿಣಮಿಸಿದೆ. ಅಷ್ಟೇ ಅಲ್ಲ ನಾಯಕಿ ಸ್ಮೃತಿ ಮಂಧಾನ ಕೂಡ ಪ್ರಭಾವಶಾಲಿ ಆಟವಾಡುವಲ್ಲಿ ವಿಫಲರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.