ತುರಿಕೆ, ರಿಂಗ್‌ವರ್ಮ್, ಹುಳುಕಡ್ಡಿಯಂತಹ ಸಮಸ್ಯೆಗಳು ದೇಹದ ಯಾವುದೇ ಭಾಗದ ಮೇಲೆ ಸುಲಭವಾಗಿ ದಾಳಿ ಮಾಡಬಹುದು. ದೇಹದಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಸಾಧ್ಯವಾದಷ್ಟು ಬೇಗ ಇದಕ್ಕೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ.
ತುರಿಕೆ, ರಿಂಗ್‌ವರ್ಮ್, ಹುಳುಕಡ್ಡಿಯಂತಹ ಸಮಸ್ಯೆಗಳು ಒಬ್ಬರಿಂದ ಒಬ್ಬರಿಗೆ ಹರಡುವ ಭೀತಿ ಇದ್ದೆ ಇರುತ್ತದೆ. ಚರ್ಮದ ಈ ಸಮಸ್ಯೆಗಳು ದೇಹದ ಯಾವುದೇ ಭಾಗದ ಮೇಲೆ ಸುಲಭವಾಗಿ ದಾಳಿ ಮಾಡಬಹುದು. ದೇಹದಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಸಾಧ್ಯವಾದಷ್ಟು ಬೇಗ ಇದಕ್ಕೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ನಮ್ಮ ಮನೆಯಲ್ಲಿಯೇ ಲಭ್ಯವಿರುವ ಕೆಲವು ವಸ್ತುಗಳಿಂದ ಸುಲಭವಾಗಿ ಇಬುಗಳನ್ನು ನಿವಾರಿಸಬಹುದು. ಅಂತಹ ಮನೆಮದ್ದುಗಳ ಬಗ್ಗೆ ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಆರೋಗ್ಯಕರ ಕೂದಲಿಗೆ ಕೊಬ್ಬರಿ ಎಣ್ಣೆಯ ಮಹತ್ವ ಎಲ್ಲರಿಗೂ ತಿಳಿದಿದೆ. ಕೆಲವು ಪ್ರದೇಶಗಳಲ್ಲಿ ಅಡುಗೆಗೂ ಕೂಡ ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ. ಆದರೆ, ಹುಳುಕಡ್ಡಿಯಂತಹ ಸಮಸ್ಯೆಗೂ ಇದು ಪರಿಹಾರ ಎಂದು ನಿಮಗೆ ತಿಳಿದಿದೆಯೇ? ಕೊಬ್ಬರಿ ಎಣ್ಣೆಯನ್ನು ಲೆಮನ್ ಗ್ರಾಸ್, ಎಳ್ಳೆಣ್ಣೆ ಜೊತೆ ಬೆರೆಸಿ ಪೇಸ್ಟ್ ತಯಾರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಬಳಸಲ್ಪಡುವ ಚೆಂಡು ಹೂ ಅಂದರೆ ಮಾರಿಗೋಲ್ಡ್ ಹೂಗಳು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇವು ಕೂಡ ತುರಿಕೆ ಸಮಸ್ಯೆಗೆ ಪರಿಹಾರ ನೀಡುತ್ತವೆ.
ಆಯುರ್ವೇದದಲ್ಲಿ ಬೇವಿನ ಪ್ರತಿ ಭಾಗವೂ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಎಂದು ಬಣ್ಣಿಸಲಾಗಿದೆ. ತುರಿಕೆ ಸಮಸ್ಯೆಗೂ ಕೂಡ ಬೇವು ರಾಮಬಾಣವಿದ್ದಂತೆ. ಇದಕ್ಕಾಗಿ, ಬೇವಿನ ಎಲೆಗಳನ್ನು ರುಬ್ಬಿ ಅದರ ಪೇಸ್ಟ್ ಅನ್ನು ತುರಿಕೆ ಇರುವ ಸ್ಥಳಕ್ಕೆ ಹಚ್ಚಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಫಂಗಲ್ ಇನ್ಫೆಕ್ಷನ್ ಸಮಸ್ಯೆಗೆ ಸುಲಭ ಪರಿಹಾರ ದೊರೆಯುತ್ತದೆ.
ಅರಿಶಿನದ ಆರೋಗ್ಯಕರ ಪ್ರಯೋಜನಗಳು ನಿಮಗೆ ತಿಳಿದೇ ಇವೆ. ತುರಿಕೆ, ಹುಳುಕಡ್ಡಿಯಂತಹ ಸಮಸ್ಯೆಗಳಿಗೂ ಕೂಡ ಅರಿಶಿನ ದಿವ್ಯೌಷಧವಾಗಿದೆ. ಇದಕ್ಕಾಗಿ, ಅರಿಶಿನದ ತುಂಡನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ನಂತರ ಅದನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ ಮತ್ತು ಅದು ಒಣಗುವವರೆಗೆ ಹಾಗೆಯೇ ಬಿಡಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಚರ್ಮದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.