WPL RCB ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್

ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿರುವ  ಸಾನಿಯಾ ಮಿರ್ಜಾ WPL ನ ಮೊದಲ ಆವೃತ್ತಿಯಲ್ಲಿ RCB ಮಹಿಳಾ ತಂಡಕ್ಕೆ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.   

Written by - Ranjitha R K | Last Updated : Feb 15, 2023, 11:38 AM IST
  • RCB ಮಹಿಳಾ ತಂಡದಲ್ಲಿ ಸಾನಿಯಾ ಮಿರ್ಜಾ
  • ಮೂಗುತಿ ಸುಂದರಿಗೆ RCBಯಲಿ ವಿಶೇಷ ಸ್ಥಾನ
  • ಈ ಬಗ್ಗೆ ಸಾನಿಯಾ ಹೇಳುವುದೇನು ?
WPL RCB ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್  title=

 ಬೆಂಗಳೂರು : ಮಹಿಳೆಯರ ಪ್ರೀಮಿಯರ್ ಲೀಗ್ (WPL) ನ ಮೊದಲ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಫೆಬ್ರವರಿ 13 ರಂದು ನಡೆಸಲಾಯಿತು. ಈ ಹರಾಜಿನಲ್ಲಿ, ಎಲ್ಲಾ ಐದು ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಅನುಭವಿ ಮಹಿಳಾ ಆಟಗಾರರು ಮತ್ತು ಅನೇಕ ಯುವ ಆಟಗಾರರನ್ನು ಸೇರಿಸಿಕೊಂಡಿದೆ. ಇದೀಗ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಮಹಿಳಾ ತಂಡದ ಮೆಂಟರ್ ಎಂದು ಘೋಷಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೆಂಟರ್ ಆಗಿ ಸೇರ್ಪಡೆಗೊಂಡ ನಂತರ ಮಾತನಾಡಿದ ಸಾನಿಯಾ ಮಿರ್ಜಾ,  ಈ ಬಗ್ಗೆ ನನ್ನನ್ನು ಕೇಳಿದಾಗ ನನಗೆ ಆಶ್ಚರ್ಯವಾಯಿತು. ಆದರೆ ಇದೀಗ ಈ  ಬಗ್ಗೆ ತಾನು ಬಹಳ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಯುವತಿಯರು ಕ್ರೀಡೆಯನ್ನು ತಮ್ಮ ವೃತ್ತಿಯಾಗಿ ತೆಗೆದುಕೊಳ್ಳಬಹುದೆಂಬ ವಿಶ್ವಾಸವನ್ನು ನೀಡಲು ಬಯಸುವುದಾಗಿ ಹೇಳಿದ್ದಾರೆ. ನಿಮ್ಮ ವಿರುದ್ಧ ಎಷ್ಟೇ ಜನ ನಿಂತಿದ್ದರೂ ಗುರಿಯತ್ತ ಗಮನ ಹರಿಸಿದರೆ, ಗುರಿ ಮುಟ್ಟುವುದು ಕಷ್ಟವಲ್ಲಎಂಬ ಭರವಸೆಯನ್ನು ಮುಂದಿನ ಪೀಳಿಗೆಯಲ್ಲಿ ಮೂಡಿಸಲು ಬಯಸುವುದಾಗಿ ಹೇಳಿದ್ದಾರೆ. 

ಇದನ್ನೂ ಓದಿ : GameOver: ಟೀಮ್ ಇಂಡಿಯಾ ಆಟಗಾರರ ಆಯ್ಕೆ ನಡೆಯೋದು ಹೀಗಾ? ಬೆಚ್ಚಿಬೀಳಿಸುವ ಕರಾಳ ಸತ್ಯ Zee News ರಹಸ್ಯ ಕಾರ್ಯಾಚರಣೆಯಲ್ಲಿ ಬಟಾಬಯಲು.!

ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮಹಿಳೆಯರನ್ನು ಪ್ರೇರೇಪಿಸುವ ಉದ್ದೇಶದಿಂದ ನಾನು RCB ತಂಡದ ಭಾಗವಾಗುತ್ತಿದ್ದೇನೆ ಎಂದು ಸಾನಿಯಾ ಹೇಳಿದ್ದಾರೆ. ಕ್ರಿಕೆಟ್ ಮತ್ತು ಟೆನಿಸ್ ಎರಡರಲ್ಲೂ, ಆಟಗಾರನು ಬಹಳ ಒತ್ತಡದ ವಾತಾವರಣದಲ್ಲಿ ಆಡಬೇಕಾಗುತ್ತದೆ. ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವ ಬಗ್ಗೆ ಉತ್ತಮ ಅನುಭವವಿದೆ ಎಂದಿದ್ದಾರೆ. 

 

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯು ಮಾರ್ಚ್ 4 ರಿಂದ ಮಾರ್ಚ್ 26 ರವರೆಗೆ ನಡೆಯಲಿದೆ. ಆರ್‌ಸಿಬಿ ಮಹಿಳಾ ತಂಡದಲ್ಲಿ ಸ್ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀದರ್ ನೈಟ್, ಡೇನ್ ವ್ಯಾನ್ ನೀಕೆರ್ಕ್, ಪ್ರೀತಿ ಬೋಸ್, ಕೋಮಲ್ ಖೇಮ್‌ನಾರ್, ಶುಟ್, ಸಹನಾ ಪವಾರ್  ಸ್ಥಾನ ಪಡೆದಿದ್ದಾರೆ. 

ಇದನ್ನೂ ಓದಿ : “ವಿರಾಟ್ ಕೊಹ್ಲಿ ಸುಳ್ಳುಗಾರ”: Zee News ರಹಸ್ಯ ಕಾರ್ಯಾಚರಣೆಯಲ್ಲಿ ಕೊಹ್ಲಿ ಬಗ್ಗೆ ಚೇತನ್ ಬಿಚ್ಚಿಟ್ಟ ಮಹಾರಹಸ್ಯವೇನು!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News