ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು; ಬಜೆಟ್‌ ಬಳಿಕ ರಾಜ್ಯಕ್ಕೆ ಹೊಸ ಸಿಎಂ! ಡಿಕೆಶಿ ಅಲ್ಲ...ಮುಂದಿನ ಸಿಎಂ ಮತ್ತು ಡಿಸಿಎಂ ಇವರೇ!?

Karnataka next Chief Minister: ಬಜೆಟ್ ಅಧಿವೇಶನದ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಜೋರಾಗುತ್ತಿವೆ. ಈ ಹಿನ್ನೆಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ಲಾಬಿ ಮಾಡುತ್ತಿದ್ದು, ಸಿಎಂ ಬಣವೂ ತೀವ್ರ ತಂತ್ರ ರೂಪಿಸುತ್ತಿದೆ.  

Written by - Prashobh Devanahalli | Edited by - Bhavishya Shetty | Last Updated : Jan 2, 2025, 03:43 PM IST
    • ಬಜೆಟ್ ಅಧಿವೇಶನದ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ
    • ಡಿಕೆಶಿ ಬಣದ ರಾಜಕೀಯ ಜೋರು
    • ಹೆಚ್ಚುವರಿ ಡಿಸಿಎಂ ಹುದ್ದೆಗೆ ಪೈಪೋಟಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು; ಬಜೆಟ್‌ ಬಳಿಕ ರಾಜ್ಯಕ್ಕೆ ಹೊಸ ಸಿಎಂ! ಡಿಕೆಶಿ ಅಲ್ಲ...ಮುಂದಿನ ಸಿಎಂ ಮತ್ತು ಡಿಸಿಎಂ ಇವರೇ!?  title=
Karnataka next Chief Minister

ಬೆಂಗಳೂರು: ಬಜೆಟ್ ಅಧಿವೇಶನದ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಜೋರಾಗುತ್ತಿವೆ. ಈ ಹಿನ್ನೆಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ಲಾಬಿ ಮಾಡುತ್ತಿದ್ದು, ಸಿಎಂ ಬಣವೂ ತೀವ್ರ ತಂತ್ರ ರೂಪಿಸುತ್ತಿದೆ.

ಡಿಕೆಶಿ ಬಣದ ರಾಜಕೀಯ ಜೋರು:
ಬಜೆಟ್ ಅಧಿವೇಶನಕ್ಕೂ ಮುನ್ನವೇ ಡಿಕೆಶಿ ಬಣವು ಹೈಕಮಾಂಡ್ ಗಮನ ಸೆಳೆಯಲು ಲಾಬಿ ಮಾಡುತ್ತಿದ್ದು, ತಮ್ಮ ಬಣದ ಪ್ರಾಬಲ್ಯವನ್ನು ಹೆಚ್ಚಿಸಲು ತಂತ್ರ ರೂಪಿಸಿದೆ. ಇದಕ್ಕೆ ಪ್ರತಿಯಾಗಿ ಸಿಎಂ ಬಣವು ಡಿಕೆಶಿ ಬಣಕ್ಕೆ ಬ್ರೇಕ್ ಹಾಕಲು ಪ್ರತ್ಯೇಕ ತಂತ್ರವನ್ನು ರೂಪಿಸುತ್ತಿದೆ.

ಇದನ್ನೂ ಓದಿ: ಹಣದ ಕೊರತೆಯಿಲ್ಲದೆ ಬದುಕಲು ಚಾಣಕ್ಯನ ಈ ತಂತ್ರಗಳನ್ನು ಅನುಸರಿಸಿ

ಸತೀಶ್ ಜಾರಕಿಹೊಳಿ ಮುನ್ನಲೆಗೆ:
ಸಿಎಂ ಬಣವು ಸತೀಶ್ ಜಾರಕಿಹೊಳಿಯನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲು ಯೋಜನೆ ಮಾಡುತ್ತಿದೆ. ಜೊತೆಗೆ ಡಿಕೆಶಿ ಬಣದ ಪದಾಧಿಕಾರಿಗಳ ಬದಲಾವಣೆಗೆ ಪ್ಲಾನ್ ರೂಪಿಸಿದೆ. ಜನವರಿ ಅಂತ್ಯದಲ್ಲಿ ಸತೀಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್‌ ಎದುರು ತಮ್ಮ ಉದ್ದೇಶವನ್ನು ಪ್ರಸ್ತಾಪಿಸಲಿದ್ದಾರೆ.

ಹೆಚ್ಚುವರಿ ಡಿಸಿಎಂ ಹುದ್ದೆಗೆ ಪೈಪೋಟಿ:
ಸಚಿವ ಡಾ.ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ. ಹೆಚ್.ಸಿ. ಮಹಾದೇವಪ್ಪ ಸಹ ಹೈಕಮಾಂಡ್‌ ಭೇಟಿ ಮಾಡಲು ತಯಾರಿ ನಡೆಸಿದ್ದಾರೆ. ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಹೆಚ್ಚುವರಿ ಡಿಸಿಎಂ ಹುದ್ದೆ ನೀಡದಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆಯ ಬಗ್ಗೆ ಮನವಿ ಮಾಡಲು ಪ್ಲಾನ್ ಮಾಡಿದ್ದಾರೆ.

ಹಿರಿಯರಿಗೆ ಅವಕಾಶ ನೀಡುವ ಬೇಡಿಕೆ:
ಪಕ್ಷದಲ್ಲಿ ದುಡಿದಿರುವ ಅನೇಕ ಹಿರಿಯ ನಾಯಕರನ್ನು ಗುರುತಿಸಿ ಅವರಿಗೆ ಡಿಸಿಎಂ ಹುದ್ದೆ ನೀಡುವ ಮೂಲಕ ಪಕ್ಷದ ಸರ್ವ ಸಮತೋಲನವನ್ನು ಕಾಪಾಡಬೇಕೆಂಬ ಒತ್ತಡ ಹೇರಲಾಗುತ್ತಿದೆ.

ಇದನ್ನೂ ಓದಿ: ಸ್ಟಾರ್‌ ನಾಯಕಿಯಾಗಿ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಕದ್ದಿದ್ದ ಈಕೆ.. ಇಂದು ಸುಪ್ರೀಂ ಕೋರ್ಟ್‌ನ ಖಡಕ್‌ ಲಾಯರ್‌!!

ಪಕ್ಷದ ಸ್ಥಿರತೆಯ ದೃಷ್ಟಿಯಿಂದ ತೀರ್ಮಾನ:
ಈ ರಾಜಕೀಯ ಚಟುವಟಿಕೆಗಳು, ಬಣಗಳ ಪೈಪೋಟಿ ಮತ್ತು ಹೈಕಮಾಂಡ್ ಮೇಲೆ ಬಿದ್ದಿರುವ ಒತ್ತಡಗಳನ್ನು ಸಮ್ಮಿಲನಗೊಳಿಸುವ ಕಸರತ್ತು ಮುಂದಿನ ದಿನಗಳಲ್ಲಿ ಪಕ್ಷದ ನಿರ್ಧಾರಕ್ಕೆ ಮಹತ್ವವನ್ನು ನೀಡಲಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್‌ ಮಾಡಿ

Trending News