ವ್ಯಾಲೆಂಟೈನ್ಸ್ ಡೇ- ರೋಸ್ ಡೇಯಂದು ರಾಶಿಗನುಗುಣವಾಗಿ ನಿಮ್ಮ ಪ್ರೇಮಿಗೆ ಯಾವ ಬಣ್ಣದ ರೋಸ್ ನೀಡಬೇಕು

Valentine's Day: ಪ್ರತಿ ವರ್ಷ ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮಿಗಳ ದಿನದ್ದೇ ಸಂಭ್ರಮ ಸಡಗರ. ವ್ಯಾಲೆಂಟೈನ್ಸ್ ವೀಕ್ ನಲ್ಲಿ ಪ್ರತಿ ದಿನಕ್ಕೂ ಒಂದೊಂದು ಮಹತ್ವವಿದೆ. ಅವುಗಳಲ್ಲಿ ರೋಸ್ ಡೇ ಕೂಡ ಒಂದು.

Written by - Yashaswini V | Last Updated : Feb 6, 2023, 10:37 AM IST
  • ಪ್ರತಿ ವರ್ಷ ಫೆಬ್ರವರಿ 7 ರಂದು ರೋಸ್ ಡೇನೊಂದಿಗೆ ವ್ಯಾಲೆಂಟೈನ್ಸ್ ಡೇ ವೀಕ್ ಆರಂಭವಾಗುತ್ತದೆ.
  • ಪ್ರತಿ ಪ್ರೇಮಿಯು ರೋಸ್ ಡೇಯಲ್ಲಿ ತನ್ನ ಪ್ರೇಮಿಗೆ ಕೆಂಪು ಗುಲಾಬಿ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ.
  • ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ವ್ಯಾಲೆಂಟೈನ್‌ ರಾಶಿಗೆ ತಕ್ಕ ಬಣ್ಣದ ಗುಲಾಬಿ ನೀಡುವುದನ್ನು ತುಂಬಾ ಮಂಗಳಕರ ಎಂದು ನಂಬಲಾಗಿದೆ.
ವ್ಯಾಲೆಂಟೈನ್ಸ್ ಡೇ- ರೋಸ್ ಡೇಯಂದು ರಾಶಿಗನುಗುಣವಾಗಿ ನಿಮ್ಮ ಪ್ರೇಮಿಗೆ ಯಾವ ಬಣ್ಣದ ರೋಸ್ ನೀಡಬೇಕು  title=
Rose Day 2023

Rose Day: ಪ್ರತಿ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನ ಅಂದರೆ ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಇದು ಫೆಬ್ರವರಿ 7 ರಂದು ರೋಸ್ ಡೇನೊಂದಿಗೆ ಆರಂಭವಾಗುತ್ತದೆ. ಪ್ರತಿ ಪ್ರೇಮಿಯು ರೋಸ್ ಡೇಯಲ್ಲಿ ತನ್ನ ಪ್ರೇಮಿಗೆ ಕೆಂಪು ಗುಲಾಬಿ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುಲಾಬಿ ದಿನದಂದು ಪ್ರೇಮಿಗಳು ತಮ್ಮ ವ್ಯಾಲೆಂಟೈನ್‌ ರಾಶಿಗನುಗುಣವಾಗಿ ಯಾವ ಬಣ್ಣದ ಗುಲಾಬಿ ನೀಡಬೇಕು ಎಂಬುದನ್ನು ತಿಳಿದಿರುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ವ್ಯಾಲೆಂಟೈನ್ಸ್ ಡೇ ರೋಸ್ ಡೇಯಲ್ಲಿ ನಿಮ್ಮ ವ್ಯಾಲೆಂಟೈನ್‌ ರಾಶಿಗೆ ತಕ್ಕ ಬಣ್ಣದ ಗುಲಾಬಿ ನೀಡುವುದನ್ನು ತುಂಬಾ ಮಂಗಳಕರ ಎಂದು ನಂಬಲಾಗಿದೆ. ಹಾಗಿದ್ದರೆ ಯಾವ ರಾಶಿಯವರಿಗೆ ಯಾವ ಬಣ್ಣದ ಗುಲಾಬಿ ನೀಡುವುದು ಶ್ರೇಷ್ಠ ಎಂದು ತಿಳಿಯೋಣ...

ಮೇಷ ರಾಶಿ:
ಮೇಷ ರಾಶಿಯ ಅಧಿಪತಿ ಮಂಗಳ. ಹಾಗಾಗಿ, ಈ ರಾಶಿಯವರಿಗೆ ಕೆಂಪು ಬಣ್ಣದ ಗುಲಾಬಿ ನೀಡಿ.

ವೃಷಭ ರಾಶಿ:
ವೃಷಭ ರಾಶಿಯ ಅಧಿಪತಿ ಶುಕ್ರ. ಈ ರಾಶಿಯವರಿಗೆ ಗುಲಾಬಿ ಬಣ್ಣದ ರೋಸ್ ನೀಡಿ.

ಮಿಥುನ ರಾಶಿ: 
ಮಿಥುನ ರಾಶಿಯ ಅಧಿಪತಿ ಬುಧ. ಈ ರಾಶಿಯವರಿಗೆ ಕೆಂಪು ಜೊತೆಗೆ ಬಿಳಿ ಗುಲಾಬಿಗಳನ್ನು ನೀಡಿ. 

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು ಬಿಳಿ ಗುಲಾಬಿಗೆ ತುಂಬಾ ಬೇಗ ಮನಸೋಲುತ್ತಾರೆ.

ಇದನ್ನೂ ಓದಿ- Budhaditya Rajyog : ಇನ್ನೂ 2 ದಿನ ಕಾಯಿರಿ, ಬುಧಾದಿತ್ಯ ಯೋಗದಿಂದ ಈ ರಾಶಿಯವರಿಗೆ ರಾಜ ಯೋಗ!

ಸಿಂಹ ರಾಶಿ:
ಸಿಂಹ ರಾಶಿಯ ಅಧಿಪತಿಯಾದ ಸೂರ್ಯ. ಹಾಗಾಗಿ ಈ ರಾಶಿಯವರಿಗೆ ಕಿತ್ತಳೆ ಬಣ್ಣದ ಗುಲಾಬಿ ನೀಡುವುದು ಶ್ರೇಷ್ಠ ಎನ್ನಲಾಗಿದೆ.

ಕನ್ಯಾ ರಾಶಿ: 
ಕನ್ಯಾ ರಾಶಿಯ ಅಧಿಪತಿ ಬುಧ. ಈ ರಾಶಿಯವರಿಗೆ ಕೆಂಪು ಗುಲಾಬಿಯೊಂದಿಗೆ ಸಾಧ್ಯವಾದರೆ ನೀಲಿ ಬಣ್ಣದ ಗುಲಾಬಿಯನ್ನೂ ನೀಡಿ.

ತುಲಾ ರಾಶಿ:
ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಯವರಿಗೆ ಗುಲಾಬಿ ಬಣ್ಣದ ಗುಲಾಬಿ ನೀಡುವುದು ತುಂಬಾ ಶುಭಕರ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಈ ರಾಶಿಯವರನ್ನು ಮೆಚ್ಚಿಸಲು ಕೆಂಪು ಬಣ್ಣದ ಗುಲಾಬಿಯನ್ನು ನೀಡಿ.

ಇದನ್ನೂ ಓದಿ- Surya Shani Yuti 2023 : ಸೂರ್ಯ-ಶನಿ ಸಂಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟ, ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ!

ಧನು ರಾಶಿ: 
ಈ ರಾಶಿಯ ಅಧಿಪತಿ ಗುರು. ಈ ರಾಶಿಯವರಿಗೆ ಕಿತ್ತಳೆ ಅಥವಾ ಹಳದಿ ಬಣ್ಣದ ಗುಲಾಬಿಯನ್ನು ನೀಡಿ.

ಮಕರ ರಾಶಿ:
ಮಕರ ರಾಶಿಯ ಅಧಿಪತಿ ಶನಿ. ಈ ರಾಶಿಯವರಿಗೆ ಪ್ರೇಮ ನಿವೇದನೆ ಮಾಡಲು ಕೆಂಪು ಗುಲಾಬಿಯನ್ನು ನೀಡಿ.

ಕುಂಭ ರಾಶಿ:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕುಂಭ ರಾಶಿಯವರಿಗೆ ನೇರಳೆ ಬಣ್ಣದ ಗುಲಾಬಿ ನೀಡುವುದು ತುಂಬಾ ಶ್ರೇಷ್ಠ.

ಮೀನ ರಾಶಿ:
ಮೀನ ರಾಶಿಯ ಅಧಿಪತಿ ಗುರು. ಈ ರಾಶಿಯವರಿಗೆ ಹಳದಿ ಎಂದರೆ ತುಂಬಾ ಪ್ರಿಯ. ಹಾಗಾಗಿ, ಮೀನ ರಾಶಿಯವರಿಗೆ ಹಳದಿ ಬಣ್ಣದ ಗುಲಾಬಿ ನೀಡಿ ನಿಮ್ಮ ಪ್ರೇಮ ನಿವೇದನೆ ಮಾಡಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News