ನವದೆಹಲಿ: ಹಿಂದಿ ಚಿತ್ರರಂಗದ ಖ್ಯಾತ ನಟ ಶತ್ರುಘ್ನ ಸಿನ್ಹಾ ತಮ್ಮ ಅದ್ಭುತ ಅಭಿನಯಕ್ಕಾಗಿ ಮತ್ತು ವೈಯಕ್ತಿಕ ಜೀವನದಿಂದ ಅಂದು ಬಹಳ ಸುದ್ದಿಯಲ್ಲಿದ್ದರು. ವಿವಾಹವಾಗಿದ್ದರೂ ನಟಿ ರೀನಾ ರಾಯ್ ಜೊತೆ ಶತ್ರುಘ್ನ ಸಿನ್ಹಾ ಲವ್ ಅಫೇರ್ ಹೊಂದಿದ್ದರು. ರೀನಾ ರಾಯ್ ಮತ್ತು ಶತ್ರುಘ್ನರ ಅಫೇರ್ ಒಂದು ಕಾಲದಲ್ಲಿ ನಟನ ಪತ್ನಿ ಪೂನಂ ಸಿನ್ಹಾಗೆ ದೊಡ್ಡ ತಲೆನೋವಾಗಿತ್ತು. ಆದರೆ ಇದನೆಲ್ಲಾ ಸಹಿಸಿಕೊಂಡಿದ್ದ ಆಕೆ ಗಂಡನ ವಿರುದ್ಧ ಒಂದು ಮಾತನ್ನೂ ಆಡಲಿಲ್ಲ.
ಇದನ್ನೂ ಓದಿ: Yash 19 : ʼಹೊಸ ಸಿನಿಮಾ ಅನೌನ್ಸ್ ಮಾಡಿ ಬಾಸ್ʼ.. ಯಶ್ಗೆ ಪತ್ರ ಬರೆದ ಫ್ಯಾನ್ಸ್..!
ಪೂನಂ ಸಿನ್ಹಾ ರಾಜಿ ಮಾಡಿಕೊಳ್ಳುತ್ತಲೇ ಇದ್ದರು!
ಶತ್ರುಘ್ನ ಸಿನ್ಹಾ ಮತ್ತು ರೀನಾ ರಾಯ್ ಪ್ರೀತಿಯ ಕುರಿತಾದ ಚರ್ಚೆಗಳು ಇನ್ನೂ ಗಾಸಿಪ್ ಕಾರಿಡಾರ್ಗಳಲ್ಲಿವೆ. ಶತ್ರುಘ್ನ ಸಿನ್ಹಾ ಮತ್ತು ರೀನಾ ರಾಯ್ ನಡುವಿನ ಸಂಬಂಧದ ಬಗ್ಗೆ ಹೇಳುವುದಾದರೆ ನಟನ ಮದುವೆಗೆ ಮುಂಚೆಯೇ ಇಬ್ಬರೂ ಬೇರೆಯಾಗಿದ್ದರೆಂಬ ಗಾಳಿಸುದ್ದಿಗಳಿದ್ದವು. ಆದರೆ ಮನರಂಜನಾ ಲೋಕದ ಸುದ್ದಿ ನಂಬಬೇಕಾದರೆ ಶತ್ರುಘ್ನ ಸಿನ್ಹಾ ಮದುವೆ ನಂತರವೂ ಈ ಜೋಡಿ ಭೇಟಿಯಾಗುತ್ತಲೇ ಇತ್ತು. ಆದರೆ ರೀನಾ ಜೊತೆಗಿನ ಸಂಬಂಧದ ಬಗ್ಗೆ ಶತ್ರುಘ್ನ ಸಿನ್ಹಾ ಎಂದಿಗೂ ಮಾತನಾಡಿರಲಿಲ್ಲ. ಈ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸಿದ್ದ ಪೂನಂ ಸಿನ್ಹಾ ತಮ್ಮ ಮಕ್ಕಳಿಗಾಗಿ ಇದನ್ನೆಲ್ಲಾ ಸಹಿಸಿಕೊಂಡಿದ್ದೇನೆಂದು ಒಮ್ಮೆ ಹೇಳಿದ್ದರು.
ಇದನ್ನೂ ಓದಿ: ʼಅಭಿರಾಮಚಂದ್ರʼನ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್..!
ವರದಿಯ ಪ್ರಕಾರ ಪೂನಂ ಸಿನ್ಹಾ ಸಂದರ್ಶನವೊಂದರಲ್ಲಿ ಮಾತನಾಡಿ, ‘ಸತ್ಯ ಹೇಳಬೇಕೆಂದರೆ ನಾನು ನನ್ನ ಗಂಡನ ಮತ್ತು ನಟಿ ರಿನಾ ನಡುವಿನ ಸಂಬಂಧದಲ್ಲಿ ಎಂದಿಗೂ ಮಧ್ಯಪ್ರವೇಶಿಸಲಿಲ್ಲ. ಈ ವಿಚಾರದಲ್ಲಿ ನಾನು ರೀನಾ ರಾಯ್ಗೆ ಒಂದು ರೀತಿ ಮುಕ್ತ ಸ್ವಾತಂತ್ರ್ಯ ನೀಡಿದ್ದೆ. ಶತ್ರುಘ್ನ ಇಂತಹ ಹುಡುಗಿಯನ್ನು ಮದುವೆಯಾಗುವುದಿಲ್ಲವೆಂದು ನನಗೆ ಖಚಿತವಾಗಿತ್ತು, ಮದುವೆಯ ಬಳಿಕ ಅವರ ಹಳೆಯ ಪ್ರೇಮಪುರಾಣ ಮತ್ತೆ ಮತ್ತೆ ಸುದ್ದಿಯಾಗುತ್ತಿತ್ತು. ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಂಡಿರಲಿಲ್ಲ’ವೆಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
https://bit.ly/3hDyh4GAndroid Link -
https://apple.co/3hEw2hyApple Link -
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.