Rishabh Pant Accident Video : ಭಯಾನಕವಾಗಿದೆ ರಿಷಬ್‌ ಪಂತ್‌ ಕಾರ್‌ ಆಕ್ಸಿಡೆಂಟ್‌ CCTV ವಿಡಿಯೋ..!

ಭಾರತದ ಕ್ರಿಕೆಟಿಗ ರಿಷಬ್ ಪಂತ್ ಇಂದು ಬೆಳಗ್ಗೆ ತಮ್ಮ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಉತ್ತರಾಖಂಡದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಕಾರು ಹರಿದ್ವಾರ ರೂರ್ಕಿ ನಗರದ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಪಂತ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್‌ ಆಕ್ಸಿಡೆಂಟ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.

Written by - Krishna N K | Last Updated : Dec 30, 2022, 12:35 PM IST
  • ಭಾರತದ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತವಾಗಿದೆ.
  • ಕಾರು ಹರಿದ್ವಾರ ರೂರ್ಕಿ ನಗರದ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
  • ಅಪಘಾತದ ಸಿಸಿಟಿವಿ ದೃಶ್ಯಾವಳಿ ಇದೀಗ ಬಿಡುಗಡೆಯಾಗಿದೆ.
Rishabh Pant Accident Video : ಭಯಾನಕವಾಗಿದೆ ರಿಷಬ್‌ ಪಂತ್‌ ಕಾರ್‌ ಆಕ್ಸಿಡೆಂಟ್‌ CCTV ವಿಡಿಯೋ..! title=

Rishabh Pant car Accident : ಭಾರತದ ಕ್ರಿಕೆಟಿಗ ರಿಷಬ್ ಪಂತ್ ಇಂದು ಬೆಳಗ್ಗೆ ತಮ್ಮ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಉತ್ತರಾಖಂಡದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಕಾರು ಹರಿದ್ವಾರ ರೂರ್ಕಿ ನಗರದ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಪಂತ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್‌ ಆಕ್ಸಿಡೆಂಟ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.

ಕಾರು ಅಪಘಾತದಲ್ಲಿ ಪಂತ್‌ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ರಿಷಬ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಅಪಘಾತದ ತೀವ್ರತೆಗೆ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಥಾಮಿ ರಿಷಬ್ ಪಂತ್ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಿಷಬ್ ಪಂತ್ ಕಾರು ಚಲಾಯಿಸುತ್ತಿದ್ದರು. ಅಲ್ಲದೆ, ಕಾರಿನಲ್ಲಿ ಅವರೊಂದಿಗೆ ಬೇರೆ ಯಾರೂ ಪ್ರಯಾಣಿಸಿರಲಿಲ್ಲ.

ಇದನ್ನೂ ಓದಿ: ರಿಷಬ್‌ ಕಾರು ಅಪಘಾತಕ್ಕೆ ಕಾರಣ.. ಸುಟ್ಟು ಕರಕಲಾಗಬೇಕಿದ್ದ ಪಂತ್‌ ಉಳಿದಿದ್ದು ಹೇಗೆ..!?

ಕಾರು ಹೊತ್ತಿ ಉರಿದ ಬಳಿಕ ಕಾರಿನ ಗಾಜು ಒಡೆದು ಪಂತ್‌ ಹೊರ ಬಂದಿದ್ದಾರೆ. ಸದ್ಯ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿ ಇದೀಗ ಬಿಡುಗಡೆಯಾಗಿದೆ. ಅಪಘಾತದಲ್ಲಿ ಅವರ ತಲೆ, ಮೊಣಕಾಲು ಮತ್ತು ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಅವರ ಕಾಲಿಗೆ ಮೂಳೆ ಮುರಿತ ಉಂಟಾಗಿರಬಹುದು ಎಂದು ವರದಿಯಾಗಿದೆ. ಈಗ ಅವರನ್ನು ರೂರ್ಕಿ ಆಸ್ಪತ್ರೆಯಿಂದ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News