New Year 2023: ಮಹಾಕುಡುಕರಿಗೆ ಪೊಲೀಸರಿಂದ ಇಲ್ಲೊಂದು ಬಂಪರ್ ಆಫರ್!

New Year celebration 2023: ಸಾರ್ವಜನಿಕರ ಸೇಫ್ಟಿಯೇ ನಮಗೆ ಮುಖ್ಯವೆಂದು ಕುಡುಕರಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದೀವಿ ಎಂದು ಸ್ವತಃ ಬೆಂಗಳೂರು ಪೊಲೀಸರೇ ತಿಳಿಸಿದ್ದಾರೆ.

Written by - Puttaraj K Alur | Last Updated : Dec 28, 2022, 01:39 PM IST
  • ಹೊಸ ವರ್ಷಕ್ಕೆ ಕುಡುಕರಿಗೆ ಹರ್ಷದ ಬೆಂಗಳೂರು ಪೊಲೀಸರು ಸುದ್ದಿ ನೀಡಿದ್ದಾರೆ
  • ಹೊಸ ವರ್ಷಾಚರಣೆ ಮಾಡುವ ಕುಡುಕರಿಗೆ ಪೊಲೀಸರಿಂದ ಆ್ಯಂಬುಲೆನ್ಸ್ ವ್ಯವಸ್ಥೆ
  • ಸೇಫ್ಟಿಗಾಗಿ ಕುಡುಕರಿಗೆ ಆ್ಯಂಬುಲೆನ್ಸ್ ಸೌಲಭ್ಯ ಒದಗಿಸಲು ಖಾಕಿಪಡೆ ಪ್ಲಾನ್ ಮಾಡಿದೆ
New Year 2023: ಮಹಾಕುಡುಕರಿಗೆ ಪೊಲೀಸರಿಂದ ಇಲ್ಲೊಂದು ಬಂಪರ್ ಆಫರ್! title=
ಕುಡುಕರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ!

ಬೆಂಗಳೂರು: 2022ಕ್ಕೆ ಗುಡ್ ಬೈ ಹೇಳಿ 2023ರನ್ನು ವೆಲ್‍ಕಮ್ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಭಾರತವೂ ಸೇರಿದಂತೆ ಇಡೀ ಪ್ರಪಂಚವೇ ಹೊಸ ವರ್ಷದ ಸಂಭ್ರಮಾಚರಣೆಗೆ ಕಾತುರದಿಂದ ಕಾಯುತ್ತಿದೆ. ಹೊಸ ವರ್ಷಕ್ಕೆ ಬೆಂಗಳೂರು ಪೊಲೀಸರು ಕುಡುಕರಿಗೆ ಹರ್ಷದ ಸುದ್ದಿಯೊಂದನ್ನು ನೀಡಿದ್ದಾರೆ. ನ್ಯೂ ಇಯರ್‍ಗೆ ಕುಡುಕರಿಗೆ ಪೊಲೀಸರಿಂದ ಇದೊಂದು ತರ ಬಂಪರ್ ಆಫರ್ ಅಂತಾನೇ ಹೇಳಬಹುದು.

ಹೌದು, ಹೊಸ ವರ್ಷಾಚರಣೆ ಮಾಡುವ ಕುಡುಕರಿಗೆ ಪೊಲೀಸರಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸೇಫ್ಟಿಗಾಗಿ ಕುಡುಕರಿಗೆ ಆ್ಯಂಬುಲೆನ್ಸ್  ಸೌಲಭ್ಯ ಒದಗಿಸಲು ಖಾಕಿಪಡೆ ಪ್ಲಾನ್ ಮಾಡಿದೆ. ಈಗಾಗಲೇ ಆಂಬುಲೆನ್ಸ್ ಗಾಗಿ ಆರೋಗ್ಯ ಇಲಾಖೆಗೂ ಮನವಿ ಪತ್ರ ನೀಡಲಾಗಿದೆ. ಅರೇ..! ಹೆಂಡ ಕುಡಿಯುವ ಕುಡುಕರಿಗೂ ಆಂಬುಲೆನ್ಸ್ ಕೊಡ್ತಾರಾ ಅಂತಾ ಆಶ್ಚರ್ಯವಾಯ್ತಾ? ಹೌದು, ಅದು ಯಾಕೆ ಅಂತಾ ನಾವು ತಿಳಿಸ್ತೀವಿ ನೋಡಿ.

ಇದನ್ನೂ ಓದಿ: 2023ರ ಸಾರ್ವತ್ರಿಕ ಚುನಾವಣೆ: ಬಿಜೆಪಿ ಅಜೆಂಡಾ ಇದೇ..!; ಕೈ ಗೆ ಸವಾಲಗಿದ್ಯಾ ಈ ಕಾಯ್ದೆ?!

ಸಾರ್ವಜನಿಕರ ಸೇಫ್ಟಿಯೇ ನಮಗೆ ಮುಖ್ಯವೆಂದು ಕುಡುಕರಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದೀವಿ ಎಂದು ಸ್ವತಃ ಪೊಲೀಸರೇ ತಿಳಿಸಿದ್ದಾರೆ. ಆದರೆ ಈ ವಿಶೇಷ ಸೌಲಭ್ಯವನ್ನು ಯಾರೂ ದುರುಪಯೋಗ ಮಾಡ್ಕೋಬೇಡಿ, ಅಕಸ್ಮಾತ್ ಕಂಠಪೂರ್ತಿ ಎಣ್ಣೆ ಹೊಡೆದ ಕುಡುಕರು ರಸ್ತೆಯಲ್ಲಿ ಬಿದ್ರೆ ಅವರ ಸೆಫ್ಟಿಗಾಗಿ ಮಾತ್ರ ಈ ಸೌಲಭ್ಯ ಸಿಗಲಿದೆ.  

ಈಶಾನ್ಯ, ಕೇಂದ್ರ ಹಾಗೂ ಪೂರ್ವ ವಿಭಾಗದ ಪೊಲೀಸರಿಂದ ಈ ವಿನೂತನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯೂ ಇಯರ್‍ಗೆ ಆಗ್ನೇಯ ವಿಭಾಗದ ಪೊಲೀಸರು‌ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ತಿದ್ದಾರೆ. ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಸಂಪೂರ್ಣ ಭದ್ರತೆಗೆ ಪ್ಲಾನ್ ಮಾಡಲಾಗಿದೆ. ಆಗ್ನೇಯ ವಿಭಾಗದಲ್ಲಿ 108 ಪಬ್, ರೆಸ್ಟೋರೆಂಟ್‍ಗಳಲ್ಲೂ ಫುಲ್ ಸೆಕ್ಯುರಿಟಿ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: "ಅಮಿತ್ ಶಾ ಯಾವ ಪಿಚ್ ನಲ್ಲಿ‌ ಬೇಕಾದ್ರೂ ಆಡ್ತಾರೆ"

ಪಬ್ ಮತ್ತು ರೆಸ್ಟೋರೆಂಟ್‍ಗಳಿಗೆ ಎಂಟ್ರಿಯಾಗೋ ಪ್ರತಿಯೊಬ್ಬರ ಮುಖವೂ ರೆಕಾರ್ಡ್ ಆಗಲಿದೆ. ಸಿಸಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ತೀರೋ ಇಲ್ವೋ ಪೊಲೀಸರ ಹ್ಯಾಂಡಿ ಕ್ಯಾಮಲ್ಲಿ ಇದು ಸಾಧ್ಯವೇ ಇಲ್ಲ. ಎಂಟ್ರಿ ಬಾಗಿಲಲ್ಲೇ ಪೊಲೀಸರಿಗೆ ಮಾಸ್ಕ್ ತೆಗೆದು ಪೋಸ್ ನೀಡಬೇಕು. ಪೋಟೋ ರೆಕಾರ್ಡ್ ಮಾಡೋ ಸಿಬ್ಬಂದಿಗೆ ಡಿಸಿಪಿ ಡ್ರೆಸ್ ಕೋಡ್ ಸಹ ಮಾಡಿದ್ದಾರೆ. ಫೋಟೋ ಕೊಟ್ಮೇಲೆನೇ ಪಬ್, ರೆಸ್ಟೋರೆಂಟ್‍ಗಳಿಗೆ ಎಂಟ್ರಿ ಇರುತ್ತದೆ.

ಹಾಗಾದ್ರೆ ಯಾಕೆ ಈ ಫ್ಲ್ಯಾನಿಂಗ್ ಗೊತ್ತಾ...? ಹೊಸ ವರ್ಷಾಚರಣೆ ವೇಳೆ ಮತ್ತು ವರ್ಷಾಚರಣೆ ನಂತರ ಅಹಿತಕರ ಘಟನೆ, ಅಸಭ್ಯ ವರ್ತನೆ ಮತ್ತು ಕಳ್ಳತನ ರೀತಿಯ ಕೃತ್ಯ ನಡೆಯೋ ಸಾಧ್ಯತೆ ಇರೋ ಹಿನ್ನೆಲೆ ಈ ಪ್ಲಾನ್ ಮಾಡಲಾಗಿದೆ. ಈ ರೀತಿ ಕೃತ್ಯ ನಡೆಸಿ ತಪ್ಪಿಸಿಕೊಳ್ಳುವ ಪ್ಲಾನ್ ಇದ್ದವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಎಂಟ್ರಿಯಾಗೋ ಪ್ರತಿಯೊಬ್ಬರ ಫೋಟೋ ಮತ್ತು ಡೀಟೇಲ್ಸ್ ಅನ್ನು ಪೊಲೀಸರು ಫೈಲ್ ಮಾಡಿಕೊಳ್ಳಲಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಸಿ‌ಕೆ ಬಾಬಾ ನೇತೃತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News