ನವದೆಹಲಿ: ಸನ್ರೈಸರ್ಸ್ ಹೈದರಾಬಾದ್ (SRH) ಮಾಲೀಕ ಕಲಾನಿತಿ ಮಾರನ್ ಅವರ ಪುತ್ರಿ ಕವಿಯಾ ಮಾರನ್, ಆರೆಂಜ್ ಆರ್ಮಿ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿ ರೂ. ಕೊಂಡುಕೊಂಡ ಸಂದರ್ಭದಲ್ಲಿ ಅವರು ನೀಡಿದ ರಿಯಾಕ್ಷನ್ ಈಗ ಗಮನ ಸೆಳೆದಿದೆ.ಸುಮಾರು 42.25 ಕೋಟಿ ರೂಗಳನ್ನು ಹೊಂದಿದ್ದ ಹೈದರಬಾದ್ ಈಗ ಬ್ರೂಕ್ ಅನ್ನು 13.25 ಕೋಟಿಗೆ ಮತ್ತು ಮಯಾಂಕ್ ಅಗರ್ವಾಲ್ ಅವರನ್ನು 8.25 ಕೋಟಿಗೆ ಪಡೆದುಕೊಂಡಿದೆ.
Omg #IPL2023 #IPLAuction #IPLAuction pic.twitter.com/FibG8ugQU9
— kavya maran (@kaviyamaran_srh) December 23, 2022
ಈ ಸಂದರ್ಭದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಕವಿಯಾ ಮಾರನ್ ನೀಡಿರುವ ರರಿಯಾಕ್ಷನ್ ಮಾತ್ರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಮೂರು ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಸಿಡಿಸಿದ್ದ ಬ್ರೂಕ್ಗಾಗಿ ಆರೆಂಜ್ ಆರ್ಮಿ ರಾಜಸ್ಥಾನ್ ರಾಯಲ್ಸ್ (ಆರ್ಆರ್) ಜೊತೆ ಪೈಪೋಟಿಯಲ್ಲಿ ತೊಡಗಿಸಿಕೊಂಡಿತ್ತು.
ಈಗ ಮಾಯಾಂಕ್ ಅಗರವಾಲ್ ಮತ್ತು ಹ್ಯಾರಿ ಬ್ರೂಕ್ ಅವರನ್ನು ಕೊಂಡುಕೊಂಡಿರುವುದರಿಂದ ಸನ್ರೈಸರ್ಸ್ನ ಅಗ್ರ ಕ್ರಮಾಂಕವು ಹೀಗೆ ಇತ್ಯರ್ಥಗೊಂಡಂತೆ ತೋರುತ್ತಿದೆ, ಅಭಿಷೇಕ್ ಶರ್ಮಾ ಮತ್ತು ಮಯಾಂಕ್ ತೆರೆಯುವ ಸಾಧ್ಯತೆಯಿದೆ, ರಾಹುಲ್ ತ್ರಿಪಾಠಿ 3 ನೇ ಸ್ಥಾನಕ್ಕೆ ಬರಬಹುದು, ಹ್ಯಾರಿ ಬ್ರೂಕ್ ನಾಲ್ಕನೇ ಸ್ಥಾನದಲ್ಲಿ, ಏಡನ್ ಮಾರ್ಕ್ರಾಮ್ ಐದನೇ ಸ್ಥಾನದಲ್ಲಿ, ಗ್ಲೆನ್ ಫಿಲಿಪ್ಸ್ ಅಂತಿಮವಾಗಿ ಆರನೇ ಸ್ಥಾನದಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.