ನವದೆಹಲಿ: ಬಾಲಿವುಡ್ ನಲ್ಲಿ ಅತಿ ಸುದ್ದಿಯಲ್ಲಿರುವ ಜೋಡಿ ಎಂದರೆ ಅದು ದೀಪಿಕಾ ಪಡುಕೋಣೆ ಮತ್ತು ರಣವೀರ ಸಿಂಗ್ ಈಗ ಈ ಇಬ್ಬರು ಜೋಡಿಗಳ ಮದುವೆಯ ಬಗ್ಗೆ ಈ ಹಿಂದೆ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು.
ಆದರೆ ಈಗ ಎಲ್ಲ ಊಹಾಪೋಹಗಳಿಗೆ ತೆರೆಎಳೆದು ದೀಪಿಕಾ ಪಡುಕೋಣೆ ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ರಣವೀರ್ ಸಿಂಗ್ರನ್ನು ಕೊಂಕಣಿ ಸಂಪ್ರದಾಯ ಪ್ರಕಾರ ಮದುವೆಯಾಗಿದ್ದಾರೆ.
WATCH: Ranveer Singh and Deepika Padukone at Ranveer Singh's residence in Mumbai. They got married earlier this week in Italy's Lombardy pic.twitter.com/kgaiq87WTO
— ANI (@ANI) November 18, 2018
ಮದುವೆಯಾದ ನಂತರ ಅವರ ಮದುವೆ ಫೋಟೋಗಳು ಅಧಿಕೃತವಾಗಿ ಬಿಡುಗಡೆಯಾಗದಿರುವುದಕ್ಕೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು.ಅದಾದ ನಂತರ ದೀಪವೀರ್ ದಂಪತಿಗಳು ಫೋಟೋಗಳನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.ಈಗ ಮದುವೆಯಾದ ನಂತರ ದಂಪತಿಗಳಿಬ್ಬರೂ ಮುಂಬೈಗೆ ಆಗಮಿಸಿದ್ದಾರೆ.
ಮದುವೆಯಾದ ನಂತರ ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿರುವ ನೂತನ ದಂಪತಿಗಳು ಮುಂಬೈನಲ್ಲಿರುವ ತಮ್ಮ ಮನೆಯ ಮುಂದೆ ಕೈ ಹಿಡಿದು ಸಾಗುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.