Electricity Bill Reduce Tips: ಈ ದುಬಾರಿ ದುನಿಯಾದಲ್ಲಿ ಎಲ್ಲವೂ ಗಗನಮುಖಿಯಾಗುತ್ತಿದೆ. ಇದರಿಂದಾಗಿ ಖರ್ಚು-ವೆಚ್ಚಗಳು ಹೆಚ್ಚಾಗಿ ತಿಂಗಳ ಬಜೆಟ್ ಹೊರೆಯಾಗುತ್ತಿದ್ದು ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಆದರೆ, ನೀವು ಕೆಲವು ವಿಚಾರಗಳ ಬಗ್ಗೆ ವಿಶೇಷ ಗಮನಹರಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಬಹುದು.
ಹೌದು, ಹಣದುಬ್ಬರ ಹೆಚ್ಚುತ್ತಿರುವ ಈ ಜಮಾನದಲ್ಲಿ ಎಲ್ಲವೂ ದುಬಾರಿಯೇ. ಮನೆಯ ವಿದ್ಯುತ್ ಬಿಲ್ ಕೂಡ ಇದಕ್ಕೆ ಹೊರತಾಗಿಲ್ಲ. ನೀವೂ ನಿಮ್ಮ ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಲು ಬಯಸಿದರೆ ಇದಕ್ಕಾಗಿ ನೀವು ಹೆಚ್ಚೇನೂ ಮಾಡುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿರುವ ಎರಡು ಗ್ಯಾಜೆಟ್ಗಳನ್ನು ಬದಲಾಯಿಸಿದರೆ ಅಷ್ಟೇ ಸಾಕು.
ಇದನ್ನೂ ಓದಿ- Powerful Electric Car: ಭಾರತಕ್ಕೆ ಲಗ್ಗೆ ಇಟ್ಟ ಅತ್ಯಂತ ಶಕ್ತಿಶಾಲಿ ಇಲೆಕ್ಟ್ರಿಕ್ ಕಾರ್, ಒಂದೇ ಚಾರ್ಜ್ ಗೆ 1000ಕಿಮೀ ರೇಂಜ್
ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯಲ್ಲಿರುವ ಈ ಎರಡೂ ಗ್ಯಾಜೆಟ್ಗಳನ್ನು ಮೊದಲು ಬದಲಾಯಿಸಿ:
* ಹಳೆಯ ಬಲ್ಬ್ಗಳಿಗೆ ಹೇಳಿ ಟಾಟಾ ಬಾಯ್! ಬಾಯ್!
ವಾಸ್ತವವಾಗಿ, ನಮ್ಮಲ್ಲಿ ಹಲವು ಮಂದಿ ತಮ್ಮ ಮನೆಗಳಲ್ಲಿ ಇಂದಿಗೂ ಕೂಡ ಹಳೆಯ ಬಲ್ಬ್ಗಳನ್ನೇ ಬಳಸುತ್ತಾರೆ. ಇದರಿಂದ ವಿದ್ಯುತ್ ಬಿಲ್ ಅಧಿಕವಾಗಿ ಬರುತ್ತದೆ. ನಿಮ್ಮ ಮನೆಯಲ್ಲಿಯೂ ಹಳೆಯ ಬಲ್ಬ್ಗಳೇ ಇದ್ದರೆ ಮೊದಲು ಅವುಗಳನ್ನು ಬದಲಾಯಿಸಿ, ಅದರ ಜಾಗದಲ್ಲಿ ಎಲ್ಇಡಿ ಬಲ್ಬ್ಗಳನ್ನು ಬಳಸಿ. ಇದರಿಂದ ಗಮನಾರ್ಹವಾಗಿ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ.
ಇದನ್ನೂ ಓದಿ- Happy New Year 2023: ಹೊಸ ವರ್ಷದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಲೆಕ್ಟ್ರಿಕ್ ಕಾರುಗಳು
* ಹೀಟರ್ ಬದಲಿಗೆ ಬ್ಲೋವರ್ ಬಳಸಿ:
ನೀವು ನಿಮ್ಮ ಮನೆಯಲ್ಲಿ ಈಗಲೂ ಕೂಡ ಹೆಚ್ಚಿನ ಸಾಮರ್ಥ್ಯದ ಹೀಟರ್ಗಳನ್ನು ಬಳಸುತ್ತಿದ್ದರೆ ಮೊದಲು ಅವುಗಳನ್ನು ಬದಲಾಯಿಸಿ. ಇವು ಹೆಚ್ಚಿನ ಸಾಮರ್ಥ್ಯದ ಶಾಖೋತ್ಪಾದಕಗಳಾಗಿದ್ದು ಅದಕ್ಕಾಗಿ ಅಧಿಕ ವಿದ್ಯುತ್ ಅನ್ನು ಬಳಸುತ್ತವೆ. ನೀವು ವಿದ್ಯುತ್ ಬಿಲ್ ಕಡಿಮೆ ಮಾಡಲು ಬಯಸಿದರೆ ಹೀಟರ್ ಬದಲಿಗೆ ಕಡಿಮೆ ವಿದ್ಯುತ್ ಬಳಸುವ ಬ್ಲೋವರ್ ಅನ್ನು ಬಳಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.