Asthma Symptoms: ಚಳಿಗಾಲದಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

Asthma Symptoms: ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಸಾಮಾನ್ಯ ರೋಗ ಲಕ್ಷಣಗಳು. ಆದರೆ, ಎಲ್ಲಾ ರೀತಿಯ ಕೆಮ್ಮು ಕೂಡ ಒಂದೇ ಎಂದು ಪರಿಗಣಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಚಳಿಗಾಲದಲ್ಲಿ ಅಸ್ತಮಾಗೆ ಸಂಬಂಧಿಸಿದ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಭಾರೀ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

Written by - Yashaswini V | Last Updated : Dec 12, 2022, 04:29 PM IST
  • ಚಳಿಗಾಲದಲ್ಲಿ ಅಸ್ತಮಾವನ್ನು ಸಾಮಾನ್ಯ ಕೆಮ್ಮು ಎಂದು ಪರಿಗಣಿಸಬೇಡಿ
  • ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ
  • ಅಸ್ತಮಾದಿಂದ ದೇಹದಲ್ಲಿ ಕಂಡುಬರುವ ಲಕ್ಷಣಗಳೇನು ಎಂದು ತಿಳಿಯಿರಿ...
Asthma Symptoms: ಚಳಿಗಾಲದಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ  title=
Asthma symptoms

Asthma Symptoms: ಚಳಿಗಾಲದಲ್ಲಿ  ಶೀತ, ನೆಗಡಿ, ಕೆಮ್ಮು ಸಾಮಾನ್ಯವಾಗಿ ಕಂಡು ಬರುವ ರೋಗ ಲಕ್ಷಣಗಳು. ಈ ಋತುವಿನಲ್ಲಿ ಬಹಳಷ್ಟು ಜನರು  ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಾರೆ. ಶೀತ ಗಾಳಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಇದನ್ನು ನಿರ್ಲಕ್ಷಿಸುವವರೇ ಹೆಚು. ಆದರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ನಿಮ್ಮನ್ನು ಬಾಧಿಸಬಹುದು, ಎಚ್ಚರ. 

ಹೌದು, ಚಳಿಗಾಲದಲ್ಲಿ ಶೀತ, ಕೆಮ್ಮಿನಿಂದ ಆರಂಭವಾಗುವ ಸಮಸ್ಯೆಯು ಕಫಕ್ಕೆ ತಿರುಗುತ್ತದೆ. ಔಷಧಿಯನ್ನು ತೆಗೆದುಕೊಂಡ ನಂತರವೂ ಈ ಸಮಸ್ಯೆ ಕಡಿಮೆಯಾಗದಿದ್ದರೆ ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸಬೇಡಿ. ಕಾರಣ, ಇದು ಆಸ್ತಮಾದ ಲಕ್ಷಣವೂ ಆಗಿರಬಹುದು. 

ಅಸ್ತಮಾದಿಂದ ದೇಹದಲ್ಲಿ ಕಂಡುಬರುವ ಲಕ್ಷಣಗಳೇನು, ತಿಳಿಯಿರಿ:
* ಉಸಿರಾಟದ ತೊಂದರೆ:

ಸಣ್ಣ ಪುಟ್ಟ ಕೆಲಸ ಮಾಡುವಾಗಲೂ ನಿಮಗೆ ದಣಿವು, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಇದು ಅಸ್ತಮಾದ ಲಕ್ಷಣವಾಗಿರಬಹುದು. (ನೆನಪಿಡಿ, ಸ್ಥೂಲಕಾಯತೆ ಸಮಸ್ಯೆ ಇರುವವರಿಗೂ ಈ ಸಮಸ್ಯೆ ಕಂಡು ಬರುತ್ತದೆ.)

ಇದನ್ನೂ ಓದಿ- Bad Urine Smell: ಮೂತ್ರ ವಿಸರ್ಜನೆ ವೇಳೆ ಬರುವ ಕೆಟ್ಟ ವಾಸನೆ ಈ ಗಂಭೀರ ಕಾಯಿಲೆಗಳ ಮುನ್ಸೂಚನೆ!

* ಧಿಡೀರ್ ತೂಕ ನಷ್ಟ:
ಮಧುಮೇಹದ ಹೊರತಾಗಿ ಅಸ್ತಮಾ ರೋಗಿಗಳಲ್ಲೂ ಕೂಡ ಧಿಡೀರ್ ತೂಕ ನಷ್ಟ ಉಂಟಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.

* ಕೆಮ್ಮಿನೊಂದಿಗೆ ಶಿಳ್ಳೆ ಸದ್ದು:
ಚಳಿಗಾಲದಲ್ಲಿ ಕೆಮ್ಮು ಸಾಮಾನ್ಯ ರೋಗ ಲಕ್ಷಣವಾದರೂ ಕೆಮ್ಮಿನೊಂದಿಗೆ ಶಿಳ್ಳೆ ಸದ್ದು ಬರುತ್ತಿದ್ದರೆ ಇದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಆಸ್ತಮಾದಲ್ಲಿ ಉಸಿರಾಟದ ಪ್ರದೇಶವು ಪರಿಣಾಮ ಬೀರುತ್ತದೆ ಮತ್ತು ಉಸಿರಾಟದ ಶ್ವಾಸನಾಳಗಳು ಸಹ ನಿರ್ಬಂಧಿಸಲ್ಪಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೆಮ್ಮು ಬಂದಾಗ ಕೆಮ್ಮಿನ ಜೊತೆಗೆ ಸೀಟಿಯಂತಹ ಸದ್ದು ಕೇಳಿಸುತ್ತದೆ.

ಇದನ್ನೂ ಓದಿ- Body Detox Tips: ರಕ್ತವನ್ನು ಶುಚಿಗೊಳಿಸುವುದರ ಜೊತೆಗೆ ಹಲವು ಕಾಯಿಲೆಗಳನ್ನು ನಿಮ್ಮಿಂದ ದೂರವಿರಿಸುತ್ತವೆ ಈ ಸಂಗತಿಗಳು

*  ರಾತ್ರಿ ವೇಳೆ ಅತಿಯಾದ ಕೆಮ್ಮು- ಬೆವರುವಿಕೆ:
ರಾತ್ರಿ ವೇಳೆ ಅತಿಯಾದ ಕೆಮ್ಮು ನಿಮ್ಮನ್ನು ಕಾಡುತ್ತಿದ್ದರೆ, ಅದೂ ಸಹ ಆಸ್ತಮಾದ ಲಕ್ಷಣವಾಗಿರಬಹುದು. ಅಷ್ಟೇ ಅಲ್ಲದೆ, ಈ ಸಮಯದಲ್ಲಿ ಕೆಮ್ಮಿನ ಜೊತೆಗೆ ಬೆವರುವಿಕೆಯೂ ನಿಮ್ಮನ್ನು ಬಾಧಿಸಬಹುದು. ಇಂತಹ ಸಂದರ್ಭದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News