VIDEO: ಕುಡಿದ ಅಮಲಿನಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವಿದೇಶಿ ಮಹಿಳೆ!

ನವೆಂಬರ್ 10ರಂದು ಮುಂಬೈನಿಂದ ಲಂಡನ್ ಗೆ ತೆರಳಿದ್ದ ಏರ್ ಇಂಡಿಯಾದ AI-131 ವಿಮಾನದಲ್ಲಿ ಈ ಘಟನೆ ನಡೆದಿದೆ. 

Last Updated : Nov 14, 2018, 02:30 PM IST
VIDEO: ಕುಡಿದ ಅಮಲಿನಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವಿದೇಶಿ ಮಹಿಳೆ! title=

ನವದೆಹಲಿ: ಮುಂಬೈನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಕಂಠಪೂರ್ತಿ ಮದ್ಯಪಾನ ಮಾಡಿದ್ದ ವಿದೇಶಿ ಮಹಿಳಾ ಪ್ರಯಾಣಿಕರೊಬ್ಬರು ಸಿಕ್ಕಾಪಟ್ಟೆ ಗಲಾಟೆ ಮಾಡಿ, ಹಂಗಾಮ ಸೃಷ್ಟಿಸಿದ್ದಾರೆ. 

ನವೆಂಬರ್ 10ರಂದು ಮುಂಬೈನಿಂದ ಲಂಡನ್ ಗೆ ತೆರಳಿದ್ದ ಏರ್ ಇಂಡಿಯಾದ AI-131 ವಿಮಾನದಲ್ಲಿದ್ದ ಪ್ರಯಾಣಿಸುತ್ತಿದ್ದ ವಿದೇಶಿ ಮಹಿಳೆಯೊಬ್ಬರು ಮತ್ತಷ್ಟು ಮಾಡಿ ನೀಡುವಂತೆ ವಿಮಾನದ ಸಿಬ್ಬಂದಿಯನ್ನು ಕೇಳಿದ್ದಾರೆ. ಅದಕ್ಕೆ ವಿಮಾನದ ಸಿಬ್ಬಂದಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೊಕ್ಷ ಮಾಡಿದ್ದಾರೆ. ಈ ಘಟನೆಯನ್ನು ಮತ್ತೊಬ್ಬ ಸಿಬ್ಬಂದಿ ಸಂಪೂರ್ಣ ವಿಡಿಯೋ ಮಾಡಿದ್ದು, ವಿದೇಶಿ ಮಹಿಳೆ 40ಕ್ಕೂ ಹೆಚ್ಚು ಬಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸ್ಪಷ್ಟವಾಗಿದೆ.

ಈ ಘಟನೆ ಬಗ್ಗೆ ವಿವರಿಸಿರುವ ವಿಮಾನ ಸಿಬ್ಬಂದಿ, ಬಿಸಿನೆಸ್ ಕ್ಲಾಸ್ ನಲ್ಲಿ ಕುಳಿತಿದ್ದ ಐರಿಶ್ ಮಹಿಳೆ ಎರಡು ಕ್ವಾರ್ಟರ್ ಬಾಟಲ್ ರೆಡ್ ವೈನ್ ಕುಡಿದಿದ್ದರು. ನಂತರ ಶೌಚಾಲಯಕ್ಕೆ ಹೋಗಿ ಬಂದು ಮತ್ತೆರಡು ಬಾಟೆಲ್ ವೈನ್ ಕುಡಿದರು. ನಂತರ ನಶೆ ಹೆಚ್ಚಾದ್ದರಿಂದ ಕಿರುಚದಳು ಆರಂಭಿಸಿದ್ದಾರೆ. ನಂತರ ಮತ್ತೊಂದು ಬಾಟಲ್ ವೈನ್ ಕೇಳಿದ್ದಕ್ಕೆ ನೀಡಲು ನಿರಾಕರಿಸಿದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಓರ್ವ ಗಗನ ಸಖಿ ಕೆನ್ನೆಗೆ ಬಾರಿಸಿದ್ದಾರೆ. ಕೂಡಲೇ ಫೈಟ್ ಕಮಾಂಡರ್ ಗೆ ವಿಷಯ ತಿಳಿಸಿದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 

Trending News