ಬೆಂಗಳೂರು : ನವೆಂಬರ್ ತಿಂಗಳಲ್ಲಿ ಯಾವ ಕಾರು ಅತಿ ಹೆಚ್ಚು ಮಾರಾಟವಾಗಿದೆ ಎನ್ನುವ ಪಟ್ಟಿ ಹೊರ ಬಿದ್ದಿದೆ. ಈ ಪೈಕಿ 7 ಕಾರುಗಳು ಮಾರುತಿ ಸುಜುಕಿಯದ್ದೇ ಆಗಿವೆ. ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡಿವೆ. ಕಳೆದ ತಿಂಗಳು, ನವೆಂಬರ್ 2022 ರಲ್ಲಿ ಮಾರುತಿ ಸುಜುಕಿ ಒಟ್ಟು ಮಾರಾಟದಲ್ಲಿ 14 ಪ್ರತಿಶತದಷ್ಟು ಹೆಚ್ಚಳವಾಗಿದೆ. ಹುಂಡೈ
ಮೋಟಾರ್ಸ್ ಎರಡನೇ ಸ್ಥಾನದಲ್ಲಿದ್ದು, ಟಾಟಾ ಮೋಟಾರ್ಸ್ ಮೂರನೇ ಸ್ಥಾನದಲ್ಲಿದೆ. ಟಾಪ್ 10 ಕಾರುಗಳ ಪಟ್ಟಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್‌ನ ತಲಾ ಒಂದು ಕಾರು ನವೆಂಬರ್‌ನಲ್ಲಿ ಅತ್ಯಧಿಕ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
1. ಮಾರುತಿ ಬಲೆನೊ :
ನವೆಂಬರ್ 2022ರಲ್ಲಿ ಮಾರುತಿ ಬಲೆನೊ ಹೆಚ್ಚು ಮಾರಾಟವಾದ ಕಾರು ಆಗಿದೆ. ಇದು ಟಾಪ್ 10 ಕಾರುಗಳ ಪಟ್ಟಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾರು ಆಗಿದೆ. ಕಳೆದ ತಿಂಗಳು 20,945 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 11,014 ಯುನಿಟ್ ಬಲೆನೊ ಮಾರಾಟವಾಗಿತ್ತು. ಅಂದರೆ, ಬಲೆನೊ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 111% ಏರಿಕೆ ಕಂಡು ಬಂದಿದೆ. ಈ ಹ್ಯಾಚ್‌ಬ್ಯಾಕ್ ಬೆಲೆ 6.49 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದರಲ್ಲಿ 360 ಡಿಗ್ರಿ ಕ್ಯಾಮೆರಾ, ಹೆಡ್ ಅಪ್ ಡಿಸ್ಪ್ಲೇ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಲಾಗಿದೆ.
ಇದನ್ನೂ ಓದಿ : Gold Price Today : ಇಳಿಕೆಯಾಯಿತು ಚಿನ್ನ ಬೆಳ್ಳಿ ದರ .! ಇಂದಿನ ದರ ಎಷ್ಟು ತಿಳಿಯಿರಿ
2. ಟಾಟಾ ಪಂಚ್ :
ಇದು ಟಾಟಾ ನೆಕ್ಸಾನ್ ನಂತರ ಅತಿ ಹೆಚ್ಚು ಮಾರಾಟವಾದ ಟಾಟಾ ಕಂಪನಿಯ ಕಾರು ಇದಾಗಿದೆ. ಟಾಪ್ 10 ಪಟ್ಟಿಯಲ್ಲಿ ಇದು 9ನೇ ಸ್ಥಾನ ಪಡೆದಿದೆ. ಮಾರುತಿಯ ಬ್ರೆಝಾಕ್ಕಿಂತ ಹೆಚ್ಚು ಖರೀದಿಯಾದ ಕಾರು ಇದಾಗಿದೆ. ಟಾಟಾ ಪಂಚ್ ನವೆಂಬರ್‌ನಲ್ಲಿ 12,131 ಯುನಿಟ್ ಮಾರಾಟವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ಕಾರಿನ 6,110 ಯುನಿಟ್‌ಗಳನ್ನು ಮಾರಾಟ ಮಾಲಾಗಿತ್ತು. ಈ ಮೂಲಕ ಟಾಟಾ ಪಂಚ್ ವರ್ಷದಿಂದ ವರ್ಷಕ್ಕೆ 98% ಬೆಳವಣಿಗೆ ಸಾಧಿಸಿದೆ.
ಟಾಟಾ ಪಂಚ್ ಎಸ್‌ಯುವಿ ಬೆಲೆ 6 ಲಕ್ಷದಿಂದ ಪ್ರಾರಂಭವಾಗಿ 9.54 ಲಕ್ಷದವರೆಗೆ ಏರುತ್ತದೆ. ಇದು 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಏರ್ ಕಂಡೀಷನ್, ಆಟೋ ಮ್ಯಾಟಿಕ್ ಹೆಡ್‌ಲೈಟ್‌ಗಳು, ಕನೆಕ್ಟೆಡ್ ಕಾರ್ ತಂತ್ರಜ್ಞಾನ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ : ಅಂಚೆ ಕಚೇರಿಯ ಈ ಯೋಜನೆಯ ಮೂಲಕ ವಿವಾಹಿತರ ಖಾತೆಗೆ ಬರುವುದು 59,400 ರೂಪಾಯಿ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ