ನವದೆಹಲಿ: ಮುಂದಿನ 24 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಗಜ ಚಂಡಮಾರುತವು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಗಜ ಚಂಡಮಾರುತದ ವೇಗವು ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಗೆ ಮುನ್ನಚ್ಚೆರಿಕೆ ನೀಡಲಾಗಿದೆ.ಮುಂದಿನ 36 ಗಂಟೆಗಳಲ್ಲಿ ಗಜ ಚಂಡಮಾರುತವು ಪಶ್ಚಿಮ ಮತ್ತು ವಾಯುವ್ಯ ಭಾಗಗಳಲ್ಲಿ ತದನಂತರ ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಚಲಿಸಿ ಉತ್ತರ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
CS Gaja near latitude 13.5°N and longitude 88.5°E at 1130 IST of 11th Nov. To cross north Tamil Nadu – south Andhra Pradesh coasts during 15th November forenoon. https://t.co/wRl94BRtm1 pic.twitter.com/Mozeb5bPfB
— India Met. Dept. (@Indiametdept) November 11, 2018
ಇದೇ ವೇಳೆ ಚಂಡಮಾರುತವು ಪಶ್ಚಿಮ-ನೈಋತ್ಯ ದಿಕ್ಕಿಗೆ ಸಾಗುತ್ತಿರುವಾಗ ಕಡಲೂರು (ತಮಿಳುನಾಡು) ಮತ್ತು ಶ್ರೀಹರಿಕೋಟಾ ನಡುವೆ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಇದು ಕ್ರಮೇಣವಾಗಿ ಚಂಡಮಾರುತವು ದುರ್ಬಲಗೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.
The Cyclonic storm ‘GAJA’ over Bay of Bengal lay centred at 0830 hrs IST of today, the 11th November, 2018 near latitude 13.5°N and longitude 88.9°E, likely to cross north Tamil Nadu – south Andhra Pradesh coasts as a Cyclonic Storm during 15th November forenoon. pic.twitter.com/0ISrvsQSxt
— India Met. Dept. (@Indiametdept) November 11, 2018
ಹವಾಮಾನ ಇಲಾಖೆಯ ಪ್ರಕಾರ ತಮಿಳುನಾಡಿದ ಉತ್ತರ ಕರಾವಳಿ ಮತ್ತು ದಕ್ಷಿಣದ ಆಂಧ್ರ ಕರಾವಳಿ ಭಾಗಗಳಲ್ಲಿ ನವಂಬರ್ 14 ರ ಸಾಯಂಕಾಲ ಭಾರಿ ಮಳೆ ಸುರಿಯಲಿದೆ ಎಂದು ತಿಳಿಸಿದೆ.ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನಚ್ಚೆರಿಕೆ ನೀಡಿದೆ.