ಬಾರ್ಮರ್: 2 ವಾರಗಳ ಹಿಂದೆ ಓಡಿಹೋಗಿದ್ದ ಯುವಕ ಮತ್ತು ಮಹಿಳೆಯ ಶವಗಳು ರಾಜಸ್ಥಾನದಲ್ಲಿ ನೀರಿನ ಟ್ಯಾಂಕ್ನಲ್ಲಿ ಪತ್ತೆಯಾಗಿವೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ನೀರಿನ ಟ್ಯಾಂಕ್ನಲ್ಲಿ ಯುವಕ ಮತ್ತು ಮಹಿಳೆಯ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸಿಂಧಾರಿ ನಿವಾಸಿಗಳಾದ ಚನ್ನಾನಿ ಮತ್ತು ಜೋಗರಾಮ್ ಎಂದು ಗುರುತಿಸಲಾಗಿದೆ. ವಿವಾಹಿತ ಮಹಿಳೆಯು ಯುವಕನೊಂದಿಗೆ ಸಂಬಂಧ ಹೊಂದಿದ್ದಳು ಎಂದು ವರದಿಯಾಗಿದೆ. ಇವರಿಬ್ಬರೂ ನವೆಂಬರ್ 13ರಿಂದ ನಾಪತ್ತೆಯಾಗಿದ್ದರು.
ಇದನ್ನೂ ಓದಿ: ವಿಗ್ರಹವೂ ಇಲ್ಲ, ಅರ್ಚಕರೂ ಇಲ್ಲ.. ಗಡಿಯಾರ ಕೊಟ್ರೆ ದರಿದ್ರ ದೂರವಾಗುತ್ತೆ! ದೇವಾಲಯದ ಕಥೆಯೇ ಬಲು ರೋಚಕ
ಮೃತದೇಹಗಳು ಕೊಳೆತ ಸ್ಥಿತಿಯಲ್ಲಿಯಲ್ಲಿ ಪತ್ತೆಯಾಗಿರುವುದರಿಂದ, 10 ದಿನಗಳ ಹಿಂದೆಯೇ ಇಬ್ಬರು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. ಮೃತ ದೇಹಗಳನ್ನು ಟ್ಯಾಂಕ್ನಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಅಂತಿಮ ವಿಧಿವಿಧಾನಗಳಿಗಾಗಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆ 6 ತಿಂಗಳ ಹಿಂದೆ ವಿಷ್ಣುರಾಮ್ ಎಂಬಾತನೊಂದಿಗೆ ಮದುವೆಯಾಗಿದ್ದಳು. ಆದರೆ ನವೆಂಬರ್ 13ರಂದು ತನ್ನ ಅತ್ತೆಯ ಮನೆಯಿಂದ ಆಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಅತ್ತೆ ಮತ್ತು ಸಂಬಂಧಿಕರು ಸಿಂಧಾರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: 11 ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂಗೆ ಮೊರೆ ಹೋದ ಬಿಲ್ಕಿಸ್ ಬಾನೋ
ನಂತರ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸಿದರು. ಇತ್ತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಯುವಕನು ನಾಪತ್ತೆಯಾಗಿದ್ದ. ಹೀಗಾಗಿ ಇವರಿಬ್ಬರು ಒಟ್ಟಿಗೆ ಸೇರಿ ಓಡಿಹೋಗಿರಬಹುದು ಎಂದು ಶಂಕಿಸಲಾಗಿತ್ತು. ಈ ಅನುಮಾನದ ಆಧಾರದ ಮೇಲೆ ಹೈದರಾಬಾದ್ಗೆ ಪೊಲೀಸರು ಭೇಟಿ ನೀಡಿದ್ದರು. ಆದರೆ ಇದೀಗ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.