ನಾಳೆಯಿಂದ ಮಂಡ್ಯದಲ್ಲಿ ಅದ್ದೂರಿ ʼಪುನೀತೋತ್ಸವʼ ಪ್ರಾರಂಭ

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಸ್ಮರಣೆಯ ನಿಮಿತ್ತ ನಾಳೆಯಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ʼಪುನೀತೋತ್ಸವʼ ಜರುಗಲಿದೆ. 

Written by - Krishna N K | Last Updated : Nov 24, 2022, 11:54 AM IST
  • ನಾಳೆಯಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಅದ್ದೂರಿ ʼಪುನೀತೋತ್ಸವʼ
  • ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ಅನನ್ಯಭಟ್ ನೇತೃತ್ವದಲ್ಲಿ ಕಂಠಗಾಯನ
  • ಪುನೀತೋತ್ಸವದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ ನಟ-ನಟಿಯರೂ ಸಹ ಭಾಗಿ
ನಾಳೆಯಿಂದ ಮಂಡ್ಯದಲ್ಲಿ ಅದ್ದೂರಿ ʼಪುನೀತೋತ್ಸವʼ ಪ್ರಾರಂಭ title=

ಮಂಡ್ಯ : ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಸ್ಮರಣೆಯ ನಿಮಿತ್ತ ನಾಳೆಯಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ʼಪುನೀತೋತ್ಸವʼ ಜರುಗಲಿದೆ. 

ನಾಳೆ ಪ್ರಾರಂಭವಾಗುವ ಪುನೀತೋತ್ಸವ ನ.27ರ ವರೆಗೆ ಅದ್ದೂರಿಯಾಗಿ ಜರುಗಲಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಕ್ರೀಡಾಂಗಣ ಈ ಅದ್ಧೂರಿ ಉತ್ಸವಕ್ಕೆ ಸಾಕ್ಷಿಯಾಗಲಿದೆ. ನಾಳೆ ಸಂಜೆ ಈ ಕಾರ್ಯಕ್ರಮಕ್ಕೆ ಚಾಲನೆ ನಟ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ. ಅಲ್ಲದೆ, ಪುನೀತೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ಅನನ್ಯಭಟ್ ನೇತೃತ್ವದಲ್ಲಿ ಕಂಠಗಾಯನ ನಡೆಯಲಿದೆ.

ಇದನ್ನೂ ಓದಿ: ʼನಟನಾಗಿ, ಬಾಳಸಂಗಾತಿಯಾಗಿ ಹಾಕಿದ ಹೆಜ್ಜೆಗಳು ಎಂದೆಂದಿಗೂ ಜೀವಂತʼ

ಅಲ್ಲದೆ, ಕಾಮಿಡಿ ಸ್ಟಾರ್ ಗಳಿಂದಲೂ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಪುನೀತೋತ್ಸವದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ ನಟ-ನಟಿಯರೂ ಸಹ ಭಾಗಿಯಾಲಿದ್ದಾರೆ. ಈ ಕಾರ್ಯಕ್ರಮವು ಡಾ. ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿಯಾಗಿರುವ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಶಾಸ ಸಿ.ಎಸ್‌. ಪುಟ್ಟರಾಜು ಅವರ ನೇತೃತ್ವದಲ್ಲಿ ನಡೆಯಲಿದೆ.

ಈಗಾಗಲೇ ಪಾಂಡವಪುರ ಪಟ್ಟಣ ಪುನೀತೋತ್ಸವ ಕಾರ್ಯಕ್ರಮಕ್ಕೆ ಸಕಲ ರೀತಿಯಿಂದ ಸಿದ್ಧವಾಗಿದೆ. ಪಟ್ಟಣದಲ್ಲಿ ಅಪ್ಪು ಪ್ಲೇಕ್ಸ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಹಬ್ಬದಂತೆ ಅಪ್ಪು ಉತ್ಸವವನ್ನು ಶಾಸಕ ಸಿಎಸ್.ಪುಟ್ಟರಾಜು ಅವರು ನಡೆಸುತ್ತಿದ್ದಾರೆ. ಈ ವಿಚಾರ ಪುನೀತ್‌ ರಾಜಕುಮಾರ್‌ ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಶಾಸಕ ಪುಟ್ಟರಾಜು ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News