ಮನೆಯಲ್ಲಿ ಲವಂಗವನ್ನು ಪೂಜೆ-ಪಾರಾಯಣಕ್ಕೆ, ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬಲು ಬಳಸುತ್ತೇವೆ. ವಾಸ್ತು ಶಾಸ್ತ್ರದಲ್ಲಿ ಲವಂಗವನ್ನು ಗ್ರಹಗಳ ಚಲನೆಯನ್ನು ಶಾಂತಗೊಳಿಸಲು ಬಳಸಲಾಗುತ್ತದೆ, ನಾವು ಆರೋಗ್ಯದ ಬಗ್ಗೆ ಮಾತನಾಡಿದರೆ, ಲವಂಗವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಇದರಲ್ಲಿ ನಾವು ಸಂಪತ್ತನ್ನು ಹೆಚ್ಚಿಸಲು, ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಆದ್ದರಿಂದ ಇಂದು ನಾವು ಲವಂಗದ ವಿಶೇಷ ಉಪಾಯಗಳ ಬಗ್ಗೆ ತಿಳಿಯೋಣ ಬನ್ನಿ.
ಧಾರ್ಮಿಕ ಆಚರಣೆಗಳ ಬಗ್ಗೆ ಲವಂಗದಿಂದ ಈ ರೀತಿ ಮಾಡಿ ಖಚಿತ ಪರಿಹಾರವನ್ನು ಪಡೆಯಬಹುದು
ಇದನ್ನೂ ಓದಿ : Fenugreek Side Effects: ಈ 4 ಕಾಯಿಲೆ ಇರುವವರಿಗೆ ಮೆಂತೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ
೧. ರಾಹು-ಕೇತುಗಳ ಚಲನೆಯು ನಿಮ್ಮ ಜೀವನದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದ್ದರೆ, ಪರಿಣಾಮವನ್ನು ಕಡಿಮೆ ಮಾಡಲು ನೀವು ಶನಿವಾರದಂದು ಲವಂಗವನ್ನು ದಾನ ಮಾಡಬೇಕು. ಈ ಮೂಲಕ ಕೆಟ್ಟ ಪರಿಣಾಮವನ್ನು ತಪ್ಪಿಸಬಹುದು.
೨. ನೀವು ಯಾವುದಾದರೂ ಪ್ರಮುಖ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರೆ, ನಿಮ್ಮ ಬಾಯಿಯಲ್ಲಿ ಲವಂಗವನ್ನು ಹಾಕಿಕೊಂಡು ಮನೆಯಿಂದ ಹೊರಡಿ, ಇದು ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ಯಶಸ್ವಿ ಮಾಡಲು ಸಹಾಯ ಮಾಡುತ್ತದೆ.
೩. ನೀವು ಎಷ್ಟೇ ಕಷ್ಟಪಟ್ಟರೂ ನಿಮಗೆ ಯಶಸ್ಸು ಸಿಗುತ್ತಿಲ್ಲ, ಹಾಗಾದರೆ ನೀವು ಮಂಗಳವಾರ ದೇವಸ್ಥಾನದಲ್ಲಿ ಆಂಜನೇಯನ ಸ್ವಾಮಿಗೆ ಸಾಸಿವೆ ಎಣ್ಣೆಯಲ್ಲಿ ಎರಡು ಲವಂಗವನ್ನು ಹಾಕಿ ಆರತಿ ಮಾಡಬೇಕು, ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
೪. ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ನೀವು ಶುಕ್ರವಾರದಂದು ತಾಯಿ ಲಕ್ಷ್ಮಿಯ ಪ್ರತಿಮೆಯ ಮೇಲೆ ಎರಡು ಲವಂಗವನ್ನು ಹೂವುಗಳೊಂದಿಗೆ ಅರ್ಪಿಸಬೇಕು, ಇದು ನಿಮ್ಮ ಎಲ್ಲಾ ಕೆಟ್ಟ ಕೆಲಸಗಳನ್ನು ದೂರ ಮಾಡುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ.
ಇದನ್ನೂ ಓದಿ: ಚುಮು ಚುಮು ಚಳಿ ನಡುವೆ ರಾಜ್ಯದ ಜನತೆಗೆ ಮತ್ತೆ ವರುಣನ ಕಾಟ- ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಈ ಮೂಲಕ ನಾವು ಲವಂಗವನ್ನು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಅದೃಷ್ಟ, ಶಾಂತಿ, ನೆಮ್ಮದಿ, ಸಂಪತ್ತು ಮತ್ತು ಜೀವನ ಸಂತೋಷ ಪಡೆಯಲು ಬಳಸಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.