ಚಿಕ್ಕೋಡಿ: ಸ್ಮಶಾನಕ್ಕೆ ಹೋಗುವುದಕ್ಕೆ ದಾರಿ ಇಲ್ಲ, ಇದರಿಂದಾಗಿ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿರುವ ನಣದಿವಾಡಿ ಗ್ರಾಮಸ್ಥರು ಚಿಕ್ಕೋಡಿ-ಯಕ್ಸಂಬಾ ರಸ್ತೆ ಮಧ್ಯದಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದ ರುದ್ರ ಭೂಮಿಗೆ ಗ್ರಾಮದ ಯಕ್ಸಂಬಿ ಕುಟುಂಬಸ್ಥರು ಸ್ಮಶಾನ ಭೂಮಿಯ ದಾರಿಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಸ್ಮಶಾನಕ್ಕೆ ಹೋಗಲು ತೊಂದರೆ ಆಗುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಚಿಕ್ಕೋಡಿ-ಯಕ್ಸಂಬಾ ರಸ್ತೆ ಮಧ್ಯದಲ್ಲಿ ಶವ ಇಟ್ಟು ಬಜನಾ ಪದಗಳನ್ನು ಹಾಡುತ್ತಾ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ- ಚುಮು ಚುಮು ಚಳಿ ನಡುವೆ ರಾಜ್ಯದ ಜನತೆಗೆ ಮತ್ತೆ ವರುಣನ ಕಾಟ- ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ದಿಡೀರ್ ಪ್ರತಿಭಟನೆಯಿಂದ ಚಿಕ್ಕೋಡಿ-ಯಕ್ಸಂಬಾ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಿಕ್ಕೋಡಿ ತಹಶೀಲ್ದಾರ್ ಹಾಗೂ ಪಿಎಸ್ಐ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಹವಾಲು ಆಲಿಸಿದರು. ಗ್ರಾಮದ ಯಕ್ಸಂಬಿ ಕುಟುಂಬಸ್ಥರು ಎಂಬುವರು ಸ್ಮಶಾನ ಭೂಮಿಯ ದಾರಿಯನ್ನು ಬಂದ್ ಮಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಇದನ್ನೂ ಓದಿ- ಜೆಡಿಎಸ್‍ಗೆ ಬಹುಮತ; ಕಾಂಗ್ರೆಸ್-ಬಿಜೆಪಿ ಜೊತೆ ಮತ್ತೊಮ್ಮೆ ಸರ್ಕಾರ ಮಾಡಲ್ಲ- ನಿಖಿಲ್ ಕುಮಾರಸ್ವಾಮಿ
ತಹಶೀಲ್ದಾರ್ ವಿಚಾರಣೆ ಮಾಡುತ್ತಿದ್ದಂತೆ ಈ ದಾರಿ ನ್ಯಾಯಾಲಯದಲ್ಲಿ ಮೊಕದ್ದಮೆ ಇರುವುದರಿಂದ ಈ ರಸ್ತೆಯನ್ನು ಬಂದ್ ಮಾಡಲಾಗಿದೆ. ಸ್ಮಶಾನಕ್ಕೆ ಹೋಗುವುದಕ್ಕೆ ಇನ್ನು ಮೂರು ರಸ್ತೆಗಳಿವೆ ಎಂದು ತಿಳಿಸುತ್ತಿದ್ದಂತೆ ಇದಕ್ಕೆ ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ನಮಗೆ ಅದೇ ದಾರಿ ಬೇಕು ಎಂದು ಪಟ್ಟು ಹಿಡಿದರು. ಪೊಲೀಸರ ಹಾಗೂ ದಂಡಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸದ್ಯದ ಮಟ್ಟಿಗೆ ಸ್ಮಶಾನಕ್ಕೆ ಹೋಗುವುದಕ್ಕೆ ದಾರಿ ಮಾಡಿಕೊಡಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.