Indian Armyಯನ್ನು ಮದುವೆಗೆ ಆಹ್ವಾನಿಸಿದ ಜೋಡಿ! ಮನಮುಟ್ಟುವಂತಿದೆ Wedding Card ವಿಶೇಷ ಬರಹ

couple invited the Indian Army to the wedding: ಈ ಜೋಡಿ ಕೇರಳದವರಾಗಿದ್ದು, ನವೆಂಬರ್ 10 ರಂದು ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರನ ಹೆಸರು ರಾಹುಲ್ ಮತ್ತು ವಧುವಿನ ಹೆಸರು ಕಾರ್ತಿಕಾ. ಅವರ ಈ ಉಪಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೋಡಿ ತಮ್ಮ ಮದುವೆಯ ಕಾರ್ಡ್ ಜೊತೆಗೆ ಕೈಬರಹದ ಟಿಪ್ಪಣಿಯನ್ನು ಭಾರತೀಯ ಸೇನೆಗೆ ಕಳುಹಿಸಿದ್ದಾರೆ. ಮೊದಲನೆಯದಾಗಿ, ಈ ವೈರಲ್ ಫೋಟೋವನ್ನು ನೀವು ನೋಡಲೇಬೇಕು

Written by - Bhavishya Shetty | Last Updated : Nov 20, 2022, 06:03 AM IST
    • ಮದುವೆ ಕಾರ್ಡ್ ನಲ್ಲಿ ಭಾರತೀಯ ಸೇನೆಗೆ ಪ್ರತ್ಯೇಕ ಸ್ಥಾನ ನೀಡಿದ ಜೋಡಿ
    • ಕೇರಳದ ಈ ವೆಡ್ಡಿಂಗ್ ಕಾರ್ಡ್‌ನ ಫೋಟೋ ಭಾರೀ ಸದ್ದು ಮಾಡುತ್ತಿದೆ
    • ಭಾರತೀಯ ಸೇನೆಯನ್ನು ಮದುವೆಗೆ ಆಹ್ವಾನಿಸಿದ ಕೇರಳದ ಜೋಡಿ
Indian Armyಯನ್ನು ಮದುವೆಗೆ ಆಹ್ವಾನಿಸಿದ ಜೋಡಿ! ಮನಮುಟ್ಟುವಂತಿದೆ Wedding Card ವಿಶೇಷ ಬರಹ  title=
Wedding Card

couple invited the Indian Army to the wedding: ಅದೆಷ್ಟೋ ಮದುವೆ ಕಾರ್ಡ್ ಗಳನ್ನು ನೀವು ನೋಡಿರಬಹುದು. ಆದರೆ ಇಂತಹ ಕಾರ್ಡ್ ನ್ನು ನೀವು ನೋಡಿರಲು ಸಾಧ್ಯವೇ ಇಲ್ಲ. ಇಲ್ಲೊಂದು ಜೋಡಿ ತಮ್ಮ ಮದುವೆ ಕಾರ್ಡ್ ನಲ್ಲಿ ಭಾರತೀಯ ಸೇನೆಗೆ ಪ್ರತ್ಯೇಕ ಸ್ಥಾನ ನೀಡಿದ್ದಾರೆ. ಕೇರಳದ ಈ ವೆಡ್ಡಿಂಗ್ ಕಾರ್ಡ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇದನ್ನೂ ಓದಿ: Voter ID ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸ ತಕ್ಷಣ ಮುಗಿಸಿ, ಇಲ್ಲದಿದ್ದರೆ ಸಮಸ್ಯೆ ತಪ್ಪಿದಲ್ಲ!

ಮದುವೆ ಕಾರ್ಡ್: ಈ ಜೋಡಿ ಕೇರಳದವರಾಗಿದ್ದು, ನವೆಂಬರ್ 10 ರಂದು ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರನ ಹೆಸರು ರಾಹುಲ್ ಮತ್ತು ವಧುವಿನ ಹೆಸರು ಕಾರ್ತಿಕಾ. ಅವರ ಈ ಉಪಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೋಡಿ ತಮ್ಮ ಮದುವೆಯ ಕಾರ್ಡ್ ಜೊತೆಗೆ ಕೈಬರಹದ ಟಿಪ್ಪಣಿಯನ್ನು ಭಾರತೀಯ ಸೇನೆಗೆ ಕಳುಹಿಸಿದ್ದಾರೆ. ಮೊದಲನೆಯದಾಗಿ, ಈ ವೈರಲ್ ಫೋಟೋವನ್ನು ನೀವು ನೋಡಲೇಬೇಕು.

 

ಭಾರತೀಯ ಸೇನೆಗೆ ಆಹ್ವಾನ:

“ದೇಶದ ಬಗೆಗಿನ ನಿಮ್ಮ ಪ್ರೀತಿ, ಸಂಕಲ್ಪ ಮತ್ತು ನಿಜವಾದ ದೇಶಪ್ರೇಮಕ್ಕೆ ನಾವು ನಿಮಗೆ ಕೃತಜ್ಞರಾಗಿರುತ್ತೇವೆ. ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಿಮ್ಮಿಂದಾಗಿ ನಾವು ಶಾಂತಿಯುತವಾಗಿ ಮಲಗಿದ್ದೇವೆ. ನಮ್ಮ ಪ್ರೀತಿಪಾತ್ರರೊಂದಿಗೆ ನಮಗೆ ಸಂತೋಷದ ದಿನವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದಾಗಿ ನಾವು ಮದುವೆಯಾಗಿ ಸುಖವಾಗಿದ್ದೇವೆ. ನಮ್ಮ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ನಮಗೆ ತುಂಬಾ ಸಂತೋಷವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shraddha Murder Case: ಸಿಸಿಟಿವಿ ದೃಶ್ಯಾವಳಿಯಲ್ಲಿ ಅಫ್ತಾಬ್ ಬ್ಯಾಗ್ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆ.!

ವೈರಲ್ ಫೋಟೋಗೆ ಉತ್ತರ:

ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಆಮಂತ್ರಣವನ್ನು ಪೋಸ್ಟ್ ಮಾಡಿದೆ. 'ಶುಭವಿಷಯಗಳು #IndianArmy ಮದುವೆಯ ಆಮಂತ್ರಣಕ್ಕಾಗಿ ರಾಹುಲ್ ಮತ್ತು ಕಾರ್ತಿಕಾಗೆ ಧನ್ಯವಾದಗಳು ಮತ್ತು ದಂಪತಿಗಳಿಗೆ ಬಹಳ ಸಂತೋಷದ ದಾಂಪತ್ಯ ಜೀವನ ಕರುಣಿಸಲಿ ಎಂದು ಹಾರೈಸುತ್ತದೆ”| ಎಂದು ಹೇಳಿದೆ. ಈ ಮದುವೆ ಕಾರ್ಡ್‌ನ ಫೋಟೋ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News