ಮತದಾರರ ಜಾಗೃತಿ ಹೆಸರಲ್ಲಿ ಬಿಜೆಪಿಯಿಂದ ಡಾಟಾ ಕಳ್ಳತನ: ಕಾಂಗ್ರೆಸ್ ಗಂಭೀರ ಆರೋಪ

ಮತದಾರರ ಜಾಗೃತಿ ಹೆಸರಲ್ಲಿ ಮತದಾರರ ಡಾಟಾ ಕಳ್ಳತನಕ್ಕೆ ಇಳಿದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆ ಹೈಜಾಕ್ ಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Nov 17, 2022, 04:26 PM IST
  • ಭ್ರಷ್ಟಾಚಾರ ಹಾಗೂ ವೈಫಲ್ಯಗಳ ಸರಮಾಲೆ ಹೊದ್ದಿರುವ ಬಿಜೆಪಿ ಸರ್ಕಾರ ಅಕ್ರಮದ ಮೂಲಕ ಚುನಾವಣೆಗೆ ಸಜ್ಜಾಗುತ್ತಿದೆ
  • ಸಿಎಂ ಬೊಮ್ಮಾಯಿಯವರೇ ನಿಮ್ಮ ಇಷಾರೆ ಇಲ್ಲದೆ ಮತದಾರರ ಮಾಹಿತಿ ಕಳ್ಳತನಕ್ಕೆ ಅವಕಾಶ ನೀಡಲು ಅಸಾಧ್ಯ
  • ಈ ಹಗರಣದಲ್ಲಿ ನೇರವಾಗಿ ಸಿಎಂ ಕೈವಾಡವಿರುವುದು ಸ್ಪಷ್ಟವೆಂದು ಗಂಭೀರ ಆರೋಪ ಮಾಡಿದ ಕಾಂಗ್ರೆಸ್
ಮತದಾರರ ಜಾಗೃತಿ ಹೆಸರಲ್ಲಿ ಬಿಜೆಪಿಯಿಂದ ಡಾಟಾ ಕಳ್ಳತನ: ಕಾಂಗ್ರೆಸ್ ಗಂಭೀರ ಆರೋಪ title=
ಸಿಎಂ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ

ಬೆಂಗಳೂರು: ಮತದಾರರ ಜಾಗೃತಿ ಹೆಸರಲ್ಲಿ ಮತದಾರರ ಡಾಟಾ ಕಳ್ಳತನಕ್ಕೆ ಇಳಿದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. #FraudBJP ಹ್ಯಾಶ್ ಟ್ಯಾಗ್ ಬಳಸಿ ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಅನುಮತಿ ಪತ್ರದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಇರಬಾರದು ಎಂದಿದೆ. ಆದರೆ ಸಂಸ್ಥೆಯ ಮುಖ್ಯಸ್ಥ ಬಿಜೆಪಿಯ ಸಚಿವರ ಆಪ್ತನಾಗಿರುವ ವಿಷಯವನ್ನು ಸರ್ಕಾರ ಮುಚ್ಚಿಟ್ಟಿದೆ’ ಎಂದು ಟೀಕಿಸಿದೆ.

ಭ್ರಷ್ಟಾಚಾರ ಹಾಗೂ ವೈಫಲ್ಯಗಳ ಸರಮಾಲೆ ಹೊದ್ದಿರುವ ಬಿಜೆಪಿ ಸರ್ಕಾರ ಈಗ ಅಕ್ರಮದ ಮೂಲಕ ಚುನಾವಣೆಗೆ ಸಜ್ಜಾಗುತ್ತಿದೆ. ಬೆಂಗಳೂರು ಉಸ್ತುವಾರಿ ಹೊಂದಿರುವ ಬಸವರಾಜ ಬೊಮ್ಮಾಯಿಯವರೇ, ನಿಮ್ಮ ಇಷಾರೆ ಇಲ್ಲದೆ ಮತದಾರರ ಮಾಹಿತಿ ಕಳ್ಳತನಕ್ಕೆ ಅವಕಾಶ ನೀಡಲು ಅಸಾಧ್ಯ. ಈ ಹಗರಣದಲ್ಲಿ ನೇರವಾಗಿ ಸಿಎಂ ಕೈವಾಡವಿರುವುದು ಸ್ಪಷ್ಟ’ವೆಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಬೊಮ್ಮಾಯಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ

‘ಮತದಾರರ ಜಾಗೃತಿ ಕಾರ್ಯಕ್ರಮ'ವನ್ನು ಉಚಿತವಾಗಿ ಮಾಡುತ್ತೇವೆ ಎನ್ನುತ್ತದೆ ಚಿಲುಮೆ ಸಂಸ್ಥೆ. ಆ ಕಾರ್ಯಕ್ರಮಕ್ಕೆ ದಿನಕ್ಕೆ 1,500 ರೂ. ವೇತನ ನೀಡಿ ಬಿಜೆಪಿ ಕಾರ್ಯಕರ್ತರನ್ನೇ ಬೂತ್ ಲೆವೆಲ್ ಆಫೀಸರ್‌ಗಳೆಂದು ನೇಮಿಸುತ್ತದೆ. ಉಚಿತ ಕೆಲಸ ಮಾಡುವವರು ದುಬಾರಿ ವೇತನ ನೀಡುತ್ತಾರೆಂದರೆ ಅವರ "ಲಾಭಾಂಶ" ಯಾವುದು ಬಸವರಾಜ ಬೊಮ್ಮಾಯಿಯವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಚಿಲುಮೆ ಸಂಸ್ಥೆಯ ಕೃಷ್ಣಪ್ಪ ರವಿಕುಮಾರ್‌ಗೂ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರಿಗೂ ಅವಿನಾಭಾವ ಸಂಬಂಧವಿದೆ. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ತಮ್ಮ ಹಿತೈಷಿಯ ಹಿತ ಬಯಸಿದ್ದಾರೆ! ಮತದಾರರ ಮಾಹಿತಿ ಕಳ್ಳತನಕ್ಕೆ ಬಿಜೆಪಿಯೇ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡಿರುವುದಕ್ಕೆ ಇನ್ಯಾವ ಸಾಕ್ಷಿ ಬೇಕು’ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಹಿಂದೂ ಪದ ಕುರಿತ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಬಹಿರಂಗ ಸವಾಲು!

‘ಮತದಾರರ ಮಾಹಿತಿ ಕಳ್ಳತನದ ಬಗ್ಗೆ ಮುಖ್ಯಮಂತ್ರಿಗಳು ಮಾತಾಡಲು ಹಿಂಜರಿಯುತ್ತಿರುವುದೇಕೆ? ಕಳ್ಳತನದಲ್ಲಿ ಸಿಕ್ಕಿಬಿದ್ದಿರುವಾಗ ಏನು ಮಾತಾಡಬೇಕೆಂದು ತಿಳಿಯುತ್ತಿಲ್ಲವೇ? ಪ್ರಕರಣ ಮುಚ್ಚಿಹಾಕುವುದು ಹೇಗೆ ಎಂಬ ಚಿಂತೆಯೇ? ಬೊಮ್ಮಾಯಿಯವರೇ ರಾಜ್ಯಕ್ಕೆ ಉತ್ತರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರಿವುದನ್ನು ಮರೆತಿರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News