ನನ್ನ ತಂದೆಯನ್ನು ಅವಮಾನಿಸಿದ ಬಿಜೆಪಿ ಮೇಲೆ ರಾಜಸ್ತಾನದ ಜನರು ಸೇಡು ತೀರಿಸಿಕೊಳ್ಳುತ್ತಾರೆ- ಮನ್ವೇಂದ್ರ ಸಿಂಗ್

 ರಜಪೂತ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರನ್ನು ಅವಮಾನಿಸಿದ್ದಕ್ಕಾಗಿ ರಾಜಸ್ಥಾನದ ಜನರು ಬಿಜೆಪಿ ಮೇಲೆ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಮಾಜಿ ಬಿಜೆಪಿ ಶಾಸಕ ಮನ್ವೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.

Last Updated : Oct 18, 2018, 08:38 PM IST
ನನ್ನ ತಂದೆಯನ್ನು ಅವಮಾನಿಸಿದ ಬಿಜೆಪಿ ಮೇಲೆ ರಾಜಸ್ತಾನದ ಜನರು ಸೇಡು ತೀರಿಸಿಕೊಳ್ಳುತ್ತಾರೆ-  ಮನ್ವೇಂದ್ರ ಸಿಂಗ್  title=

ನವದೆಹಲಿ: ರಜಪೂತ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರನ್ನು ಅವಮಾನಿಸಿದ್ದಕ್ಕಾಗಿ ರಾಜಸ್ಥಾನದ ಜನರು ಬಿಜೆಪಿ ಮೇಲೆ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಮಾಜಿ ಬಿಜೆಪಿ ಶಾಸಕ ಮನ್ವೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.

"ರಾಜಸ್ಥಾನದ ಜನರು, ಅದರಲ್ಲೂ ವಿಶೇಷವಾಗಿ ಬಾರ್ಮರ್, ಜಲೌರ್, ಜೈಸಲ್ಮೇರ್ ಮತ್ತು ಜೋಧ್ಪುರ ಜನರು" ನನ್ನ ತಂದೆ ಜಸ್ವಂತ್ ಸಿಂಗ್ ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಿ ಅವರನ್ನು ಪಕ್ಷದಿಂದ ಹೊರಹಾಕಲ್ಪಟ್ಟಿದ್ದಕ್ಕೆ ಬಿಜೆಪಿ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ  " ಎಂದು ಮನ್ವೇಂದ್ರ ಸಿಂಗ್ ತಿಳಿಸಿದರು.

2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿರಿಯ ಜಸ್ವಂತ್ ಸಿಂಗ್ ಅವರಿಗೆ  ಬಿಜೆಪಿ ಪಕ್ಷದ ಟಿಕೆಟ್ ನಿರಾಕರಿಸಿತ್ತು ಈ ಹಿನ್ನಲೆಯಲ್ಲಿ ಅವರು  ಬಾರ್ಮರ್ನಿಂದ ಸ್ವತಂತ್ರರಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತಿದ್ದರು. 

2004 ರಲ್ಲಿ ಲೋಕಸಭಾ ಎಂಪಿಯಾಗಿದ್ದ ಮನ್ವೇಂದ್ರ ಸಿಂಗ್, 2013 ರಲ್ಲಿ ಶಿಯೋ ಅಸೆಂಬ್ಲಿಯಿಂದ ಶಾಸಕರಾಗಿ ಬಿಜೆಪಿ ಟಿಕೆಟ್ನಲ್ಲಿ ಆಯ್ಕೆಯಾಗಿದ್ದರು. ಆದರೆ ಯಾವಾಗ ಅವರ ತಂದೆ ಜಸ್ವಂತ್ ಸಿಂಗ್ ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಿದ ಬಳಿಕ ಬಿಜೆಪಿಯೊಂದಿಗೆ ಬಿರುಕು ಆರಂಭವಾಯಿತು.ಮನ್ವೇಂದ್ರ ಸಿಂಗ್ ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

 

Trending News