ನವದೆಹಲಿ : ಸನಾತನ ಧರ್ಮದಲ್ಲಿ ಶಿವನನ್ನು (Lord shiva) ದೇವರುಗಳ ದೇವ ಎಂದು ಕರೆಯಲಾಗುತ್ತದೆ. ಒಮ್ಮೆ ಈಶ್ವರನನ್ನು ಪ್ರಸನ್ನ ಗೊಳಿಸಿದರೆ ನಂತರ ಜನ್ಮ ಜನ್ಮಕ್ಕೂ ಶಿವ ಕೃಪೆ ಅವರ ಮೇಲಿರುತ್ತದೆ ಎನ್ನಲಾಗಿದೆ.
ಶಿವನನ್ನು ಮೆಚ್ಚಿಸಲು ವೃತಾಚರಣೆ :
ಶಿವನನ್ನು (Lord Shiva) ಮೆಚ್ಚಿಸಲು ಭಕ್ತರು ಸೋಮವಾರ ಉಪವಾಸ ಮಾಡುತ್ತಾರೆ. ಅಲ್ಲದೆ, ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ನೀರನ್ನು ಅರ್ಪಿಸುತ್ತಾರೆ. ಅನೇಕ ಭಕ್ತರು ನೀರನ್ನು ಅರ್ಪಿಸಿದ ನಂತರ ಶಿವಲಿಂಗಕ್ಕೆ ಪ್ರದಕ್ಷಿಣೆ (Shivling Pradakshine) ಕೂಡಾ ಹಾಕುತ್ತಾರೆ. ಧಾರ್ಮಿಕ ಗ್ರಂಥಗಳಲ್ಲಿ, ಶಿವಲಿಂಗದ ಪ್ರದಕ್ಷಿಣೆಗಾಗಿ ಸ್ಪಷ್ಟ ನಿಯಮಗಳನ್ನು ಸೂಚಿಸಲಾಗಿದೆ. ಆ ನಿಯಮಗಳನ್ನು ಪಾಲಿಸದೆ ಪ್ರದಕ್ಷಿಣೆ ಮಾಡಿದರೆ, ಶಿವನ ಪೂಜೆಯ (Shiva pooja) ಫಲ ಸಿಗುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ : ಈ ರಾಶಿಚಕ್ರದ ಜನರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರುತ್ತಾರೆ , ಎಂಥಹ ಸವಾಲೇ ಆದರೂ ಎದುರಿಸಿ ಗೆಲ್ಲುತ್ತಾರೆ
ಶಿವಲಿಂಗಕ್ಕೆ ಎಂದೂ ಪೂರ್ಣ ಪ್ರದಕ್ಷಿಣೆ ಬೇಡ :
ಧಾರ್ಮಿಕ ಗ್ರಂಥಗಳಲ್ಲಿ, ಶಿವಲಿಂಗಕ್ಕೆ ಅರ್ಧ ಪ್ರದಕ್ಷಿಣೆ (Shivling ardha Pradakshine) ಹಾಕುವಂತೆ ಹೇಳಲಾಗಿದೆ. ಶಿವಲಿಂಗಕ್ಕೆ ಸಂಪೂರ್ಣ ಪ್ರದಕ್ಷಿಣೆ ಹಾಕುವುದು ಸರಿಯಲ್ಲ . ಶಿವಲಿಂಗದ ಪ್ರದಕ್ಷಿಣೆಯನ್ನು ಯಾವಾಗಲೂ ಎಡಭಾಗದಿಂದ ಆರಂಭಿಸಬೇಕು. ಇದರ ನಂತರ, ಅರ್ಧದಷ್ಟು ಪ್ರದಕ್ಷಿಣೆ ಮಾಡಿದ ನಂತರ, ಮತ್ತೆ ಪ್ರದಕ್ಷಿಣೆ ಆರಂಭವಾದ ಸ್ಥಳಕ್ಕೇ ಮರಳಿ ಬರಬೇಕು.
ನೀರಿನ ಧಾರಕವನ್ನು ದಾಟಬಾರದು :
ಶಿವಲಿಂಗಕ್ಕೆ (Shivlinga) ನೀರನ್ನು ಅರ್ಪಿಸಿದ ನಂತರ ನೀರು ಹರಿಯುವ ಸ್ಥಳವನ್ನು ಜಲಧಾರಿ, ನಿರ್ಮಲಿ ಅಥವಾ ಸೋಮಸೂತ್ರ ಎಂದು ಕರೆಯಲಾಗುತ್ತದೆ. ಶಿವಲಿಂಗವನ್ನು ಪ್ರದಕ್ಷಿಣೆ ಮಾಡುವಾಗ, ನೀರಿನ ಸ್ಥಳವನ್ನು ಮರೆತು ಕೂಡಾ ದಾಟಲು ಹೋಗಬೇಡಿ. ಇದನ್ನು ದಾಟುವ ತಪ್ಪು ಸಂಭವಿಸಿದರೆ, ಜಲಧಾರಿಯ ಶಕ್ತಿ ಕಾಲುಗಳ ಮಧ್ಯ ಭಾಗದ ಮೂಲಕ ದೇಹವನ್ನು ಪ್ರವೇಶಿಸುತ್ತದೆಯಂತೆ. ಈ ಕಾರಣದಿಂದಾಗಿ, ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಬೇಕಾಗುತ್ತದೆ ಎನುತ್ತದೆ ನಂಬಿಕೆ. ಅಲ್ಲದೆ, ರಕ್ತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಕೂಡಾ ಎದುರಿಸಬೇಕಾಗಬಹುದು ಎನ್ನಲಾಗಿದೆ.
ಇದನ್ನೂ ಓದಿ : Astrology: ಅದ್ಬುತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು..!
ಶಿವಲಿಂಗದ ನೀರನ್ನು ಮನೆಯಲ್ಲಿ ಸಿಂಪಡಿಸಿ :
ಧಾರ್ಮಿಕ ಗ್ರಂಥಗಳ ಪ್ರಕಾರ, ಶಿವಲಿಂಗದ ಮೇಲಿನ ಭಾಗವು ಪುರುಷನನ್ನು ಪ್ರತಿನಿಧಿಸುತ್ತದೆ ಮತ್ತು ಕೆಳಗಿನ ಭಾಗವು ಮಹಿಳೆಯನ್ನು ಪ್ರತಿನಿಧಿಸುತ್ತದೆ. ಈ ಕಾರಣದಿಂದಾಗಿ, ಶಿವಲಿಂಗವನ್ನು ಶಿವ ಮತ್ತು ಶಕ್ತಿಗಳೆರಡರ (Shiva shakti) ಸಂಯೋಜಿತ ಶಕ್ತಿಯ ಸಂಕೇತವೆಂದು ನಂಬಲಾಗಿದೆ. ಶಿವಲಿಂಗಕ್ಕೆ ಜಲಾಭಿಷೇಕ ಮಾಡುವ ಮೂಲಕ ಆ ಶಕ್ತಿಯನ್ನು ಶಾಂತಗೊಳಿಸುವ ಪ್ರಯತ್ನ ಮಾಡಲಾಗುತ್ತದೆ. ಹೀಗೆ ಮಾಡುವಾಗ ಶಿವ ಮತ್ತು ಶಕ್ತಿಯ ಕೆಲವು ಭಾಗಗಳು ಆ ನೀರಿನಲ್ಲಿ ಹೀರಲ್ಪಡುತ್ತವೆಯಂತೆ. ಆ ನೀರನ್ನು ಮನೆಯಲ್ಲಿ ಚಿಮುಕಿಸುವುದರಿಂದ, ನಕಾರಾತ್ಮಕ ಶಕ್ತಿಗಳು (Negetive energy) ನಾಶವಾಗುತ್ತವೆಯಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.