ಯೋನಿಯನ್ನು ಪೂಜಿಸಲ್ಪಡುವ ಮತ್ತು ಮಾಟ-ಮಂತ್ರಗಳಿಗೆ ಫೇಮಸ್‌ ಈ ದೇಗುಲ..!

Kamakhya Temple : ಕಾಮಾಕ್ಯ ದೇವಾಲಯವು ಭಾರತದ ಅಸ್ಸಾಂ ರಾಜ್ಯದಲ್ಲಿರುವ ಗುಹಾವಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದಲ್ಲಿ ನೆಲೆಸಿರುವ ಶಕ್ತಿ ದೇವಾಲಯವಾಗಿದೆ. ಭಾರತದ 52 ಶಕ್ತಿ ಪೀಠಗಳ ಪೈಕಿ ಇದು ಒಂದು. ಈ ದೇಗುಲ ತಾಯಿ ದೇವಿ ಕಾಮಾಕ್ಯಳಿಗೆ ಅರ್ಪಿತವಾದ ದೇವಾಲಯವಾಗಿದೆ. 

Written by - Zee Kannada News Desk | Last Updated : Jun 3, 2023, 11:47 AM IST
  • ಈ ಕಾಮಾಕ್ಯ ದೇವಸ್ಥಾನದಲ್ಲಿ ಯಾವುದೇ ಶಕ್ತಿ ಪ್ರತಿಮೆಗಳಿಲ್ಲ.
  • ದೇವಿಯ ಶಿಲೆಯ ಆಕಾರವೊಂದಿದ್ದು, ಇದೇ ಕಾಮಾಕ್ಯ ದೇವಿಯ ಪ್ರತೀಕವಾಗಿದೆ
  • ಅಲ್ಲಿನ ನೈಸರ್ಗಿಕವಾದ ಒಂದು ನೀರಿನ ಚಿಲುಮೆ ದೇವಿ ಶಿಲೆಯನ್ನು ತೇವವವಾಗಿರಿಸುತ್ತದೆ.
ಯೋನಿಯನ್ನು ಪೂಜಿಸಲ್ಪಡುವ ಮತ್ತು ಮಾಟ-ಮಂತ್ರಗಳಿಗೆ ಫೇಮಸ್‌ ಈ ದೇಗುಲ..!  title=

Assam : ಈ ಕಾಮಾಕ್ಯ ದೇವಸ್ಥಾನದಲ್ಲಿ ಯಾವುದೇ ಶಕ್ತಿ ಪ್ರತಿಮೆಗಳಿಲ್ಲ. ಗುಹೆಯ ಮೂಲೆಯೊಂದರಲ್ಲಿ ದೇವಿಯ ಶಿಲೆಯ ಆಕಾರವೊಂದಿದ್ದು, ಇದೇ ಕಾಮಾಕ್ಯ ದೇವಿಯ ಪ್ರತೀಕವಾಗಿದೆ. ಅಲ್ಲಿನ ನೈಸರ್ಗಿಕವಾದ ಒಂದು ನೀರಿನ ಚಿಲುಮೆ ದೇವಿ ಶಿಲೆಯನ್ನು ತೇವವವಾಗಿರಿಸುತ್ತದೆ. ಈ ದೇಗುಲ ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ಈ ದೇವಾಲಯವು ತಾಂತ್ರಿಕ ದೇವರು ಮತ್ತು ದೇವತೆಗಳಿಗೆ ಸಮರ್ಪಿತವಾಗಿದೆ. 

ಈ ದೇವಸ್ಥಾನದ ಬಗ್ಗೆ ಸಾಕಷ್ಟು ಸ್ವಾರಸ್ಯಕರವಾದ ಕಥೆಗಳಿವೆ. ಒಂದು ದಂತ ಕಥೆಯ ಪ್ರಕಾರ ಸತಿ ಮಾತೆಯ ದೇಹವನ್ನು ಭಗವಾನ್‌ ವಿಷ್ಣು 51 ತುಂಡುಗಳಾಗಿ ವಿಂಗಡಿಸಿದನು, ಭೂಮಿಯ ವಿವಿದೆಡೆಗಳಲ್ಲಿ ಸತಿಯ ದೇಹ ಭಾಗಗಳು ಬಿದ್ದವು, ಆ ದೇವಾಲಯಗಳನ್ನು ಶಕ್ತಿಪೀಠಗಳು ಎಂದು ಕರೆಯಲಾಗುತ್ತಿದೆ. ಕಾಮಾಕ್ಯ ದೇವಾಲಯವು ಅಂತಹ ಒಂದು ಶಕ್ತಿಪೀಠ.

ಇದನ್ನೂ ಓದಿ-Astro Tips: ಈ ರಾಶಿಯ ಜನರು ಕೊನೆ ಉಸಿರು ಇರುವವರೆಗೂ ದ್ವೇಷ ಹೊಂದಿರುತ್ತಾರೆ!

ಈ ದೇವಾಲಯದಲ್ಲಿ ಮಾತಾ ಸತಿಯ ಯೋನಿಯನ್ನು ಪೂಜಿಸಲಾಗುತ್ತದೆ. ಜೊತೆಗೆ ಈ ದೇಗುಲದಲ್ಲಿ ಬ್ಲ್ಯಾಕ್‌ ಮ್ಯಾಜಿಕ್‌ ಎಂದರೆ ವಾಮಾಚಾರವನ್ನು ತೆಗದುಹಾಕಲು ಇದು ಹೆಸರುವಾಸಿಯಾದ ಸ್ಥಳವಾಗಿದೆ. ಜೊತೆಗೆ ಇಲ್ಲಿ ವಶೀಕರಣ ಪೂಜೆಯನ್ನು ಸಹ ಮಾಡಲಾಗುತ್ತದೆ. ಈ ಪೂಜೆ ಮತ್ತು ಹವನವು ಒಟ್ಟು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 

ಈ ದೇವಸ್ಥಾನದಲ್ಲಿ ಅಂಬುವಾಸಿ ಎಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯು ದೇವಿ ಋತುಚಕ್ರಕ್ಕೊಳಪಡುವ ಸಂಕೇತವಾಗಿದೆ. ದೇವಿಯು ಈ ಅವಧಿಯಲ್ಲಿ ಋತುಮತಿಯಾಗುವಳೆಂದು ನಂಬಲಾಗಿದ್ದು, ಈ ಕಾರಣಕ್ಕಾಗಿ ಈ ಸಮಯದಲ್ಲಿ ದೇವಸ್ಥಾನವು ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿರುತ್ತದೆ. ಹಾಗೂ ನಾಲ್ಕನೇಯ ದಿನದಂದು ಅತ್ಯಂತ ವೈಭವದಿಂದ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ. 

ಇದನ್ನೂ ಓದಿ-ಅಪ್ಪಿತಪ್ಪಿಯೂ ಮನೆಯ ಹತ್ತಿರ ಈ ಗಿಡಗಳನ್ನು ನೆಡಬೇಡಿ : ದರಿದ್ರ, ಕೌಟುಂಬಿಕ ಜಗಳ ಕಟ್ಟಿಟ್ಟ ಬುತ್ತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News