Hybrid Surya Grahan 2023: ಈ ದಿನ ಗೋಚರಿಸಲಿದೆ ಸೂರ್ಯ ಗ್ರಹಣ, 100 ವರ್ಷಗಳಲ್ಲಿ ಇಂತಹ ಗ್ರಹಣ ಇದೆ ಮೊದಲು

Hybrid Solar Eclipse 2023: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯ ಗ್ರಹಣ ಹಾಗೂ ನವೆಂಬರ್ ತಿಂಗಳಿನಲ್ಲಿ ಕೊನೆಯ ಚಂದ್ರಗ್ರಹಣ ಗೋಚರಿಸಿತ್ತು. ಹೊಸ ವರ್ಷದಲ್ಲಿ ಮೊದಲ ಬಾರಿಗೆ ಸೂರ್ಯಗ್ರಹಣ ಗೋಚರಿಸಲಿದೆ. ಈ ಗ್ರಹಣದ ಅವಧಿಯಲ್ಲಿ  ಸೂರ್ಯ ತನ್ನ ಅತ್ಯಂತ ವಿಚಿತ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದ್ದಾನೆ.

Written by - Nitin Tabib | Last Updated : Dec 1, 2022, 03:53 PM IST
  • ಪಂಚಾಂಗದ ಪ್ರಕಾರ ಈ ಹೈಬ್ರಿಡ್ ಸೂರ್ಯ ಗ್ರಹಣ ಏಪ್ರಿಲ್ 20, 2023 ರಂದು ಗೋಚರಿಸಲಿದೆ.
  • ದಕ್ಷಿಣ ಗೋಲಾರ್ಧದಲ್ಲಿ ನೀವು ಈ ಗ್ರಹಣವನ್ನು ನೋಡಬಹುದು.
  • ಹೀಗಿರುವಾಗ ಈ ಸೂರ್ಯಗ್ರಹಣ ಎಲ್ಲರಿಗೂ ಗೋಚರಿಸುವುದಿಲ್ಲ
Hybrid Surya Grahan 2023: ಈ ದಿನ ಗೋಚರಿಸಲಿದೆ ಸೂರ್ಯ ಗ್ರಹಣ, 100 ವರ್ಷಗಳಲ್ಲಿ ಇಂತಹ ಗ್ರಹಣ ಇದೆ ಮೊದಲು title=
Hybrid Surya Grahan 2023

Hybrid Surya Grahana 2022: ಹೊಸ ವರ್ಷದಲ್ಲಿ ಸೂರ್ಯ ಗ್ರಹಣದಿಂದ ಗ್ರಹಣಗಳು ಆರಂಭಗೊಳ್ಳುತ್ತಿದೆ. ಈ ಸೂರ್ಯಗ್ರಹಣದ ವಿಶೇಷತೆ ಎಂದರೆ ಇದು ಪೂರ್ಣ, ಆಂಶಿಕ ಹಾಗೂ ಕುಂಡಲ ಆಕಾರದ ಗ್ರಹಣವಾಗಿರಲಿದೆ. ಒಂದೇ ದಿನದಲ್ಲಿ ಒಟ್ಟು ಮೂರು ಪ್ರಕಾರದ ಗ್ರಹಣಗಳು ಕಾಣಿಸಿಕೊಳ್ಳಲಿವೆ. 

ಈ ಗ್ರಹಣದ ಅವಧಿಯಲ್ಲಿ  ಸೂರ್ಯ ತನ್ನ ಅತ್ಯಂತ ವಿಚಿತ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಜೊತೆಗೆ ಒಂದೇ ದಿನದಲ್ಲಿ 3 ರೀತಿಯ ಸೂರ್ಯ ಗ್ರಹಣಗಳು ಗೋಚರಿಸಲಿವೆ. ಇದು ಸೂರ್ಯನ ಅತ್ಯಂತ ವಿರಳ ಸ್ಥಿತಿಯಾಗಿರಲಿದೆ. ಇದೆ ಕಾರಣದಿಂದ ಖಗೋಳ ವಿದ್ವಾಂಸರು ಹಾಗೂ ಜೋತಿಷ್ಯ ಪಂಡಿತರು ಇದಕ್ಕೆ ಹೈಬ್ರಿಡ್ ಸೂರ್ಯಗ್ರಹಣ ಎಂದು ಹೆಸರನ್ನಿಟ್ಟಿದ್ದಾರೆ. ಇಂತಹ ಅಪರೂಪದ ಖಗೋಳ ಘಟನೆ 100 ವರ್ಷಗಳಲ್ಲಿ ಒಮ್ಮೆ ನೋಡಲು ಸಿಗುತ್ತದೆ. ಹೊಸ ವರ್ಷದಲ್ಲಿ ಗೋಚರಿಸಲಿರುವ ಈ ಸೂರ್ಯ ಗ್ರಹಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ,

ವರ್ಷ 2023ರ ಹೈಬ್ರಿಡ್ ಸೂರ್ಯ ಗ್ರಹಣ ಯಾವಾಗ ಗೋಚರಿಸಲಿದೆ
ಪಂಚಾಂಗದ ಪ್ರಕಾರ ಈ ಹೈಬ್ರಿಡ್ ಸೂರ್ಯ ಗ್ರಹಣ ಏಪ್ರಿಲ್ 20, 2023 ರಂದು ಗೋಚರಿಸಲಿದೆ. ದಕ್ಷಿಣ ಗೋಲಾರ್ಧದಲ್ಲಿ ನೀವು ಈ ಗ್ರಹಣವನ್ನು ನೋಡಬಹುದು. ಹೀಗಿರುವಾಗ ಈ ಸೂರ್ಯಗ್ರಹಣ ಎಲ್ಲರಿಗೂ ಗೋಚರಿಸುವುದಿಲ್ಲ. ಕೇವಲ ಒಂದು ನಿಮಿಷದ ಅವಧಿಗೆ ಪಶ್ಚಿಮ ಆಸ್ಟ್ರೇಲಿಯಾದ ಎಕ್ಸ್ ಮೌತ್ ಮಹಾದ್ವೀಪದಿಂದ ಇದನ್ನು ನೋಡಬಹುದಾಗಿದೆ. ಇನ್ನೊಂದೆಡೆ ಟಿಮೋರ್ ಲೆಸ್ಟೆಯಲ್ಲಿ 1 ನಿಮಿಷ 15 ಸೆಕೆಂಡ್ ಹಾಗೂ ವೆಸ್ಟ್ ಪಪುವಾನಲ್ಲಿ 1 ನಿಮಿಷ 10 ಸೆಕೆಂಡ್ ಗಳವರೆಗೆ ಅದು ಕಾಣಿಸಿಕೊಳ್ಳಲಿದೆ. ಅದೂ ಕೂಡ ಸೂರ್ಯಗ್ರಹಣದ ಮುನ್ನ ಮತ್ತು ಸೂರ್ಯಗ್ರಹಣದ ನಂತರ ಗೋಚರಿಸಲಿದೆ.

ಇದನ್ನೂ ಓದಿ-Garud Puran: ಇಂತಹ ಸಂಗಾತಿಯಿಂದ ಅಂತರ ಕಾಯ್ದುಕೊಳ್ಳಿ, ಇಲ್ದಿದ್ರೆ ಜೀವನವೇ ನರಕವಾಗುತ್ತದೆ !

ಹೈಬ್ರಿಡ್ ಸೂರ್ಯ ಗ್ರಹಣ ಯಾವಾಗ ಗೋಚರಿಸುತ್ತದೆ?
ಸಾಮಾನ್ಯವಾಗಿ 2 ರಿಂದ 5 ವರ್ಷಗಳಿಗೊಮ್ಮೆ ಇಂತಹ ಹೈಬ್ರಿಡ್ ಸೂರ್ಯಗ್ರಹಣ ಗೋಚರಿಸುತ್ತದೆ. 21ನೇ ಶತಮಾನದಲ್ಲಿ ಕೇವಲ ಶೇ.3.1 ರಷ್ಟು ಸೂರ್ಯ ಗ್ರಹಣಗಳನ್ನು ಹೈಬ್ರಿಡ್ ಸೂರ್ಯಗ್ರಹಣಗಳು ಎಂದು ಭಾವಿಸಲಾಗಿದೆ. ಈ ಲೆಕ್ಕಾಚಾರದ ಪ್ರಕಾರ 224 ಸೂರ್ಯಗ್ರಹಣಗಳಲ್ಲಿ ಕೇವಲ 7 ಸೂರ್ಯ ಗ್ರಹಣಗಳು ಮಾತ್ರ ಹೈಬ್ರಿಡ್ ಸೂರ್ಯ ಗ್ರಹಣಗಳಾಗಿದ್ದವು. ಇದಕ್ಕೂ ಮೊದಲು 2012 ರಲ್ಲಿ ಇಂತಹ ಒಂದು ಹೈಬ್ರಿಡ್ ಸೂರ್ಯ ಗ್ರಹಣ ಗೋಚರಿಸಿತ್ತು. ಆದರೆ, ಅದು ಕೇವಲ ಆಫ್ರಿಕಾದ ದೇಶಗಳಲ್ಲಿ ಮಾತ್ರ ಗೋಚರಿಸಿತ್ತು.

ಇದನ್ನೂ ಓದಿ-Happy Life: ಸುಖಿ ಜೀವನಕ್ಕೆ ಗರುಡ ಪುರಾಣದ ಈ ಸಲಹೆ ಅನುಸರಿಸಿ, ಹಣಕಾಸಿನ ಮುಗ್ಗಟ್ಟು ಎಂದಿಗೂ ಎದುರಾಗಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News