ಕಾಟನ್ ಕ್ಯಾಂಡಿ, ಗೋಬಿ ಆಯ್ತು.. ಈಗ ಕಲರ್‌ಫುಲ್‌ ಕಬಾಬ್ ಸರದಿ.. ಚಿಕನ್‌ ಫಿಶ್‌ಗೆ ಕೃತಕ ಬಣ್ಣ ಬಳಕೆ ನಿಷೇಧ!

Ban on use of artificial color in chicken: ಕರ್ನಾಟಕದಲ್ಲಿ ಮಕ್ಕಳ ಜನಪ್ರಿಯ ಆಹಾರ ಪದಾರ್ಥಗಳ ಕಾಟನ್ ಕ್ಯಾಂಡಿ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಗೋಬಿ ಮಂಚೂರಿಯನ್ ಕ್ಯಾಂಡಿದು ಕಥೆ ಮುಗೀತು ಈಗ ಏನಿದ್ದರೂ ಗರಿ ಗರಿ ಕಬಾಬ್ ನದ್ದೇ ಮಾತುಕತೆ.. ಯಾಕೆ ಈಗ ಕಬಾಬ್ ಬಗ್ಗೆ ಮಾತನಾಡುತ್ತಿದ್ದೇವೆ ಅಡ್ಕೊಂಡ್ರಾ? ಈ ಸ್ಟೋರಿ ಓದಿ.. 

Written by - Savita M B | Last Updated : Jun 24, 2024, 08:35 PM IST
  • ಸಾಮಾನ್ಯವಾಗಿ ನಾನ್ ವೆಜ್ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಕಬಾಬ್
  • ಇದೀಗ ಕಬಾಬ್ ಕಂಟಕ ಶುರುವಾಗಿದೆ
ಕಾಟನ್ ಕ್ಯಾಂಡಿ, ಗೋಬಿ ಆಯ್ತು.. ಈಗ ಕಲರ್‌ಫುಲ್‌ ಕಬಾಬ್ ಸರದಿ.. ಚಿಕನ್‌ ಫಿಶ್‌ಗೆ ಕೃತಕ ಬಣ್ಣ ಬಳಕೆ ನಿಷೇಧ!  title=

Ban on use of artificial color: ಸಾಮಾನ್ಯವಾಗಿ ನಾನ್ ವೆಜ್ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಕಬಾಬ್.. ಅದರಲ್ಲೂ ವಿಶೇಷವಾಗಿ ಕಬಾಬ್ ನಲ್ಲಿ ವೆರೈಟಿ ವೆರೈಟಿ ಕಬಾಬ್ ಗಳಿದೆ.. ಇತ್ತೀಚಿಗೆ ಟ್ರೆಂಡಿಂಗ್ ಆದ ಬೆಳ್ಳುಳ್ಳಿ ಕಬಾಬ್, ಚಿಕನ್ 65, ತಂದೂರಿ ಚಿಕನ್, ಚಿಕನ್ ಟಿಕ್ಕಾ, ಚಿಕನ್ ಲಾಲಿಪಪ್ ಹೀಗೆ ಹತ್ತು ಹಲವಾರು ವೆರೈಟಿಗಳು ನಾನ್-ವೆಜ್ ಪ್ರಿಯರಿಗೆ ಸಕತ್ ಇಷ್ಟವಾಗುತ್ತದೆ.. ಆದ್ರೆ ಇದೀಗ ಕಬಾಬ್ ಕಂಟಕ ಶುರುವಾಗಿದೆ

ಇತ್ತೀಚಿಗೆ ಬಾರಿ ಸುದ್ದಿಯಾದ ವಿಚಾರ ಏನಂದ್ರೆ ಅದು ಗೋಬಿ ಮಂಚೂರಿಯನ್ ಬ್ಯಾನ್ ಎಂಬ ವಿಚಾರ.. ಈಗಾಗಲೇ ಗೋಬಿ ಮಂಚೂರಿಯನ್ ಗೆ ಬಳಸುವಂತಹ ಬಣ್ಣಗಳನ್ನು ಸರ್ಕಾರ ಬ್ಯಾನ್ ಮಾಡಿದೆ..ಆದರೆ ನಾನ್ ವೆಜ್ ಪ್ರಿಯರು ಅದೇ ರೀತಿ ಬಣ್ಣ ಕಟ್ಟಿರುವ ರಾಸಾಯನಿಕ ಅಂಶದಿಂದ ಗ್ಯಾರಂಟಿ ಕಲರ್ ಕಬಾಬ್ ಗಳನ್ನು ಮಿತಿಯಿಲ್ಲದೆ ಬಳಸುತ್ತಿದ್ದಾರೆ.. 

ಮುಖ್ಯವಾಗಿ ಗಮನಿಸಬೇಕಾದ ವಿಷಯ ಏನಪ್ಪಾ ಅಂದ್ರೆ ಈ ಚಿಕನ್ ಗಳಿಗೂ ಕೂಡ ರಾಸಾಯನಿಕ ಕಲರ್ ಗಳನ್ನ ಬಳಕೆ ಮಾಡಲಾಗುತ್ತಿದೆ.. ರಾಜ್ಯದಾದ್ಯಂತ ಕೃತಕ ಬಣ್ಣ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ರಾಜ್ಯದ 36 ಕಡೆ ಕಬಾಬ್ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿತ್ತು.ಯೆಲ್ಲೋ ಹಾಗೂ ಕಾರ್ಮೋಸಿನ್ ಮಾದರಿ ಕಂಡುಬಂದ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದೆ. ಈ ಕುರಿತಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
 
ರಾಜ್ಯದ 36 ಕಡೆಗಳಲ್ಲಿ ಕಬಾಬ್ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ನೀಡಲಾಗಿತ್ತು. ಇದ್ರಲ್ಲಿ ಯೆಲ್ಲೋ ಹಾಗೂ ಕಾರ್ಮೋಸಿನ್ ಮಾದರಿ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಕಲರ್ ಬ್ಯಾನ್ ಮಾಡಿದೆ. ಇನ್ನು ಉಲ್ಲಂಘನೆ ಕಂಡುಬಂದಲ್ಲಿ 7 ವರ್ಷ ಶಿಕ್ಷೆ ಹಾಗೂ 10 ಲಕ್ಷ ದಂಡದ ಎಚ್ಚರಿಕೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಒಟ್ಟಾರೆಯಾಗಿ ಈಗಾಗಲೇ ಗೋಬಿ ಮಂಚೂರಿಯನ್ ಗೆ ಹಾಕುವ ಬಣ್ಣ ಬ್ಯಾನ್ ಆಗಿದೆ.. ಈ ನಿಯಮಗಳು ಬರಿ ಗೋಬಿ ಮಂಚೂರಿಯನ್ ಹಾಗೆ ಕಾಟನ್ ಕ್ಯಾಂಡಿಗೆ ಮಾತ್ರ ಅನ್ವಯಿಸುವುದಿಲ್ಲ.. ಹಾಗಾಗಿ ಕಬಾಬು ಕೂಡ ಈ ಬಣ್ಣವನ್ನು ಬಳಸುತ್ತಿದ್ದಾರೆ.. ಹಾಗಾಗಿ ನೀವೇನಾದ್ರೂ ಈ ರೀತಿ ಬಣ್ಣ ಕಟ್ಟಿದ ಕಬಾಬ್ ಗಳನ್ನ ತಿಂದ್ರೆ ಪರಲೋಕ ಸೇರುವುದು ಗ್ಯಾರಂಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News