Covid 19 Vaccine: ಮಹಿಳೆಯರು ಈ ಸಮಯದಲ್ಲಿ ಲಸಿಕೆ ಪಡೆಯಬಾರದೇ? ಇಲ್ಲಿದೆ ವೈರಲ್ ಮೆಸೇಜ್ ಹಿಂದಿನ ಸತ್ಯಾಸತ್ಯತೆ

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಹಲವು ಸಂದೇಶಗಳು ವೈರಲ್ ಆಗುತ್ತಿವೆ.

Written by - Yashaswini V | Last Updated : Apr 26, 2021, 03:08 PM IST
  • ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಹಲವು ಸಂದೇಶಗಳು ವೈರಲ್ ಆಗುತ್ತಿವೆ
  • ಮಹಿಳೆಯರು ತಮ್ಮ ಮುಟ್ಟಿನ ಐದು ದಿನಗಳ ಮೊದಲು ಮತ್ತು ನಂತರ ಐದು ದಿನಗಳವರೆಗೆ ಕರೋನಾ ಲಸಿಕೆ ಪಡೆಯಬಾರದು ಎಂಬ ಸಂದೇಶ ವೈರಲ್
  • ವೈರಲ್ ಸಂದೇಶದ ಬಗ್ಗೆ ಸ್ಪಷ್ಟನೆ ನೀಡಿರುವ ಪಿಐಬಿ
Covid 19 Vaccine: ಮಹಿಳೆಯರು ಈ ಸಮಯದಲ್ಲಿ ಲಸಿಕೆ ಪಡೆಯಬಾರದೇ? ಇಲ್ಲಿದೆ ವೈರಲ್ ಮೆಸೇಜ್ ಹಿಂದಿನ ಸತ್ಯಾಸತ್ಯತೆ title=
Covid 19 Vaccine For Women

Covid 19 Vaccine For Women: ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಎಲ್ಲರಲ್ಲೂ ಆತಂಕ ಹೆಚ್ಚಿಸಿವೆ. ಕರೋನವೈರಸ್ ಸೋಂಕನ್ನು ನಿಯಂತ್ರಿಸುವ ಸಲುವಾಗಿ, ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಏತನ್ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಹಲವು ಸಂದೇಶಗಳು ವೈರಲ್ ಆಗುತ್ತಿವೆ. ಈ ಸಂದೇಶಗಳಲ್ಲಿ ಒಂದು ಮಹಿಳೆಯರ ಮುಟ್ಟಿನೊಂದಿಗೆ ಸಂಬಂಧಿಸಿದೆ.

ವಾಸ್ತವವಾಗಿ ಮಹಿಳೆಯರು (Women) ತಮ್ಮ ಪೀರಿಯಡ್ಸ್ ಅಂದರೆ ಮುಟ್ಟಿನ ಐದು ದಿನಗಳ ಮೊದಲು ಮತ್ತು ನಂತರ ಐದು ದಿನಗಳವರೆಗೆ ಕರೋನಾ ಲಸಿಕೆ ಪಡೆಯಬಾರದು ಎಂಬ ಸಂದೇಶ ಇತ್ತೀಚಿಗೆ ಬಾರೀ ವೈರಲ್ ಆಗುತ್ತಿದೆ. ಈ ವೈರಲ್ ಸಂದೇಶದಲ್ಲಿ ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಕೂಡ ಬರೆಯಲಾಗಿದೆ.

ಇದನ್ನೂ ಓದಿ- Corona Vaccine : 18 ವರ್ಷ ಮೇಲ್ಪಟ್ಟ ಎಲ್ಲರಿಗೂ 'ಉಚಿತ ಕೊರೋನಾ ಲಸಿಕೆ'..!

ಮತ್ತೊಂದು ಸಂದೇಶದಲ್ಲಿ, ಕೋವಿಡ್ -19 ಲಸಿಕೆ (Covid 19 Vaccine) ಮಹಿಳೆಯರ ಮುಟ್ಟಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ ಈ ವೈರಲ್ ಸಂದೇಶದ ಬಗ್ಗೆ ಮಾಹೀತಿ ನೀಡಿರುವ ಪಿಐಬಿ ಇದರ ಹಿಂದಿನ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದು ಇದೊಂದು ನಕಲಿ ಸಂದೇಶ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ - Corona Vaccine: ಈ ನಾಲ್ಕು ರಾಜ್ಯಗಳಲ್ಲಿ ಮೇ 1ರಿಂದ ಎಲ್ಲರಿಗೂ ಸಿಗಲ್ಲ ಕರೋನಾ ಲಸಿಕೆ!

ಅದೇ ಸಮಯದಲ್ಲಿ, ಯೇಲ್ ಸ್ಕೂಲ್ ಆಫ್ ಮೆಡಿಸಿನ್‌ನ ಡಾ. ರಾಂಡಿ ಹಟ್ಟರ್ ಎಪ್ಸ್ಟೀನ್ ಮತ್ತು ಆಲಿಸ್ ಲು-ಕುಲ್ಲಿಗನ್, "ಕರೋನಾ ಲಸಿಕೆ ಹಾಗೂ ಮುಟ್ಟಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಅಧ್ಯಯನ ನಡೆದಿಲ್ಲ ಅಥವಾ ಯಾವುದೇ ನಿಖರ ಡೇಟಾ ಲಭ್ಯವಾಗಿಲ್ಲ" ಎಂದು  ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News