Google: ಮದುವೆ ಬಳಿಕ ಮಹಿಳೆಯರು ಗೂಗಲ್‌ನಲ್ಲಿ ಈ ವಿಷಯವನ್ನು ಹೆಚ್ಚು ಹುಡುಕುತ್ತಾರೆ!

ವಿವಾಹಿತ ಮಹಿಳೆಯರು ಗೂಗಲ್‌ನಲ್ಲಿ ಯಾವ ವಿಷಯಗಳ ಬಗ್ಗೆ ಹೆಚ್ಚು ಹುಡುಕುತ್ತಾರೆ ಅನ್ನೋದರ ಬಗ್ಗೆ ಕುತೂಹಲವಿರುತ್ತದೆ. ಪ್ರಪಂಚದ ಪ್ರತಿಯೊಂದು ಪ್ರಶ್ನೆಗೂ ಗೂಗಲ್‌ನಲ್ಲಿ ಉತ್ತರವಿದೆ. ಇತ್ತೀಚಿನ ವರದಿಯೊಂದರಲ್ಲಿ ಮದುವೆಯ ನಂತರ ಹೆಚ್ಚಿನ ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ ಎಂಬ ವಿಷಯ ಮುನ್ನೆಲೆಗೆ ಬಂದಿದೆ.

Written by - Puttaraj K Alur | Last Updated : Jul 3, 2022, 06:38 AM IST
  • ಗೂಗಲ್‍ನಲ್ಲಿ ವಿವಾಹಿತ ಮಹಿಳೆಯರು ಯಾವ ವಿಷಯಗಳ ಬಗ್ಗೆ ಹುಡುಕುತ್ತಾರೆ
  • ಸಂಸಾರ ಮತ್ತು ಗಂಡನ ಬಗ್ಗೆಯೇ ಹೆಚ್ಚು ಗೂಗಲ್ ಸರ್ಚ್ ಮಾಡುವ ವಿವಾಹಿತ ಮಹಿಳೆಯರು
  • ಪತ್ನಿಯರು ತಮ್ಮ ಪತಿ ಬಗ್ಗೆ ಚಿತ್ರ-ವಿಚಿತ್ರ ವಿಷಯಗಳನ್ನು ಗೂಗಲ್ ಸರ್ಚ್ ಮಾಡುತ್ತಾರಂತೆ
Google: ಮದುವೆ ಬಳಿಕ ಮಹಿಳೆಯರು ಗೂಗಲ್‌ನಲ್ಲಿ ಈ ವಿಷಯವನ್ನು ಹೆಚ್ಚು ಹುಡುಕುತ್ತಾರೆ!  title=
ಗೂಗಲ್ನಲ್ಲಿ ವಿವಾಹಿತ ಮಹಿಳೆಯರ ಹುಡುಕಾಟ!

ನವದೆಹಲಿ: ಕಳೆದ ಹಲವಾರು ದಶಕಗಳಿಂದ ಗೂಗಲ್ ವಿಶ್ವದ ಅತಿದೊಡ್ಡ ಸರ್ಚ್ ಇಂಜಿನ್ ಆಗಿದೆ. ಜಗತ್ತಿನ ಪ್ರತಿಯೊಂದು ಪ್ರಶ್ನೆಗೂ ಗೂಗಲ್ ಬಳಿ ಉತ್ತರವಿದೆ. ಯಾವುದೇ ವ್ಯಕ್ತಿಯಾಗಲಿ ಪ್ರತಿಯೊಬ್ಬರೂ ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು Googleನ ಸಹಾಯ ತೆಗೆದುಕೊಳ್ಳುತ್ತಾರೆ. ಆದರೆ ಇತ್ತೀಚಿನ ವರದಿಯೊಂದರಲ್ಲಿ ಮದುವೆಯ ನಂತರ ಹೆಚ್ಚಿನ ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಈ ಫಲಿತಾಂಶ ನೋಡಿ ನಿಮಗೆ ನಗು ತಡೆಯಲು ಆಗುವುದಿಲ್ಲ.

ಗೂಗಲ್‌ನಲ್ಲಿ ವಿವಾಹಿತ ಮಹಿಳೆಯರ ಹುಡುಕಾಟ!

 ಗೂಗಲ್‌ನ ಅಂಕಿಅಂಶಗಳ ಪ್ರಕಾರ, ವಿವಾಹಿತ ಮಹಿಳೆಯರು ಪತಿ ಏನು ಇಷ್ಟಪಡುತ್ತಾರೆ ಎಂಬುದನ್ನು ಕಂಡುಹಿಡಿಯುವುದು ಹೇಗೆ ಎಂದು ಈ ಸರ್ಚ್ ಎಂಜಿನ್‍ನಲ್ಲಿ ಹುಡುಕುತ್ತಾರಂತೆ. ಮದುವೆಯಾದ ನಂತರ ಜಗತ್ತಿನ ಪ್ರತಿಯೊಬ್ಬ ಹೆಣ್ಣಿನ ಪ್ರಶ್ನೆಯೂ ಪತಿಗೆ ಏನು ಇಷ್ಟ ಎಂಬುದಾಗಿರುತ್ತದೆ. ಇದಲ್ಲದೇ ಗಂಡಂದಿರ ಆಯ್ಕೆ ಯಾವುದು ಮತ್ತು ಅವರು ಇಷ್ಟಪಡುವ ಮತ್ತು ಇಷ್ಟಪಡದಿರುವ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಮಹಿಳೆಯರು ಇಷ್ಟಪಡುತ್ತಾರಂತೆ. ಈ ಪ್ರಶ್ನೆಯ ಬಗ್ಗೆ Googleನಲ್ಲಿ ಅತಿಹೆಚ್ಚು ಹುಡುಕಲಾಗಿದೆ. ಇದಲ್ಲದೆ ಮಹಿಳೆಯರು ತಮ್ಮ ಗಂಡನ ಹೃದಯವನ್ನು ಹೇಗೆ ಗೆಲ್ಲಬೇಕು, ಅವರನ್ನು ಸಂತೋಷವಾಗಿರಿಸುವುದು ಹೇಗೆ ಎಂಬುದರ ಬಗ್ಗೆಯೂ ಹುಡುಕುತ್ತಾರೆ.

ಇದನ್ನೂ ಓದಿ: Planet Retrograde: 11 ದಿನಗಳ ನಂತರ 6 ತಿಂಗಳ ಅವಧಿಗೆ 5 ರಾಶಿಗಳಿಗೆ ಈ ಗ್ರಹದ ಪ್ರಕೋಪದಿಂದ ಮುಕ್ತಿ ಸಿಗಲಿದೆ

ಗಂಡನ ಬಗ್ಗೆ ವಿಚಿತ್ರ ವಿಷಯ ಹುಡುಕುವ ಪತ್ನಿಯರು!

ಹಲವು ಬಾರಿ ಮಹಿಳೆಯರು ಕೂಡ ಗೂಗಲ್ ಗೆ ವಿಚಿತ್ರ ಪ್ರಶ್ನೆ ಕೇಳುತ್ತಾರೆ. ಈ ಹುಡುಕಾಟದ ಇತಿಹಾಸದಲ್ಲಿ ಹೊರಬರುವ ಅತ್ಯಂತ ಆಘಾತಕಾರಿ ವಿಷಯವೆಂದರೆ ‘ಗಂಡನನ್ನು ತಮ್ಮ ಗುಲಾಮನನ್ನಾಗಿ ಮಾಡಿಕೊಳ್ಳುವುದು ಹೇಗೆ?’ ಎಂದು. ಇದಲ್ಲದೆ ಮದುವೆಯ ನಂತರ ಮಕ್ಕಳನ್ನು ಹೊಂದಲು ಸರಿಯಾದ ಸಮಯ ಯಾವುದು? ಎಂಬುದರ ಬಗ್ಗೆಯೂ ಮಹಿಳೆಯರು ನಿರಂತರವಾಗಿ ಗೂಗಲ್‍ನಲ್ಲಿ ಸರ್ಚ್ ಮಾಡುತ್ತಾರಂತೆ. ಸಾಮಾನ್ಯವಾಗಿ ಮಹಿಳೆಯರಿಗೆ ಮಕ್ಕಳ ಬಗೆಗಿನ ಈ ಟೆನ್ಷನ್ ಆಗಾಗ ಇರುತ್ತದೆ.

ಇದನ್ನೂ ಓದಿ: Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ಮಹಿಳೆಯರಿಗೆ ಈ ಪ್ರಶ್ನೆಗಳಲ್ಲಿ ಸಹ ಆಸಕ್ತಿ ಇರುತ್ತದೆ

  • ಮಹಿಳೆಯರು ಮದುವೆಯ ನಂತರ ತಮ್ಮ ಹೊಸ ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು? ಆ ಕುಟುಂಬದ ಭಾಗವಾಗುವುದು ಹೇಗೆ? ತಮ್ಮ ಅತ್ತೆ-ಮಾವಂದಿರ ಜೊತೆಗೆ ಹೇಗೆ ಬಾಳಬೇಕು? ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ.
  • ಕುಟುಂಬದ ಜವಾಬ್ದಾರಿಯನ್ನು ಹೇಗೆ ನೋಡಿಕೊಳ್ಳಬೇಕು? ಎಂಬುದರ ಬಗ್ಗೆಯೂ ಸರ್ಚ್ ಮಾಡುತ್ತಾರಂತೆ.
  • ಮದುವೆಯ ನಂತರ ಸ್ವಂತ ವ್ಯಾಪಾರವನ್ನು ಹೇಗೆ ನಡೆಸಬೇಕು ಮತ್ತು ಕುಟುಂಬವು ವ್ಯವಹಾರವನ್ನು ಹೇಗೆ ನಿರ್ವಹಿಸಬೇಕು ಅನ್ನೋದರ ಬಗ್ಗೆ ಬಹುತೇಕರು ಹುಡುಕುತ್ತಾರಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News