ಜಿಮ್, ಡಯಟ್ ಜಂಜಾಟವೇ ಬೇಡ ! ಈ ಹಣ್ಣುಗಳನ್ನು ಸೇವಿಸಿದರೆ ಸಾಕು ಸಣ್ಣಗಾಗುವುದು ದುಂಡು ಹೊಟ್ಟೆ

ಹೆಚ್ಚು ಸಮಯ ವ್ಯಾಯಾಮ ಮಾಡಲು ಅಥವಾ ಜಿಮ್‌ಗೆ ಹೋಗಲು ಸಮಯವಿಲ್ಲದವರು ತಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸಬಹುದು. 

Written by - Ranjitha R K | Last Updated : Sep 7, 2023, 01:19 PM IST
  • ಬೊಜ್ಜು ಪ್ರತಿಯೊಬ್ಬರನ್ನೂ ಬಾಧಿಸುವ ಸಮಸ್ಯೆಯಾಗಿದೆ.
  • ತೂಕ ನಷ್ಟಕ್ಕೆ ಈ ಹಣ್ಣುಗಳು ಸಹಾಯಕ
  • ತೂಕ ನಷ್ಟಕ್ಕೆ ಸಹಾಯ ಮಾಡುವ ಹಣ್ಣುಗಳು ಯಾವುವು ?
ಜಿಮ್, ಡಯಟ್ ಜಂಜಾಟವೇ ಬೇಡ ! ಈ ಹಣ್ಣುಗಳನ್ನು ಸೇವಿಸಿದರೆ ಸಾಕು ಸಣ್ಣಗಾಗುವುದು ದುಂಡು ಹೊಟ್ಟೆ    title=

ಬೆಂಗಳೂರು : ಇಂದಿನ ಒತ್ತಡದ ಜೀವನಶೈಲಿಯಲ್ಲಿ, ಬೊಜ್ಜು ಪ್ರತಿಯೊಬ್ಬರನ್ನೂ ಬಾಧಿಸುವ ಸಮಸ್ಯೆಯಾಗಿದೆ. ಏನನ್ನೂ ತಿಂದರೂ ಬೊಜ್ಜು ಸಮಸ್ಯೆ ಬಾಧಿಸುತ್ತದೆ ಎನ್ನುವ ಭಯದಲ್ಲಿಯೇ ಆಹಾರ ಸೇವನೆ ಮಾಡಬೇಕಾಗುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ದೇಹದ ತೂಕವನ್ನು  ಕಡಿಮೆ ಮಾಡಿಕೊಳ್ಳಲು ಎಲ್ಲರೂ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅಧಿಕ ತೂಕ ಹೊಂದಿರುವ ವ್ಯಕ್ತಿಯು 4-5 ಕೆಜಿ ಕಳೆದುಕೊಂಡರೂ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹೆಚ್ಚು ಸಮಯ ವ್ಯಾಯಾಮ ಮಾಡಲು ಅಥವಾ ಜಿಮ್‌ಗೆ ಹೋಗಲು ಸಮಯವಿಲ್ಲದವರು ತಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸಬಹುದು. 

ತೂಕ ನಷ್ಟಕ್ಕೆ ಹಣ್ಣುಗಳು : 
ಹಣ್ಣುಗಳನ್ನು ಹೆಚ್ಚಾಗಿ ಆಹಾರದ ಭಾಗವಾಗಿ ನೋಡಲಾಗುತ್ತದೆ. ಇವುಗಳಲ್ಲಿ ಅನೇಕ ಪೋಷಕಾಂಶಗಳಿವೆ. ದೇಹವನ್ನು ರೋಗಗಳಿಂದ ದೂರವಿಡಲು ಹಣ್ಣುಗಳು ಉಪಯುಕ್ತವಾಗಿವೆ. ಈ ಕೆಲವು ಹಣ್ಣುಗಳು ಫ್ಯಾಟ್ ಬರ್ನ್ ಮಾಡಲು ವಿಶೇಷವಾಗಿ ಸಹಾಯಕವಾಗಿವೆ. ಹೊಟ್ಟೆಯಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಿ ತೂಕ ಇಳಿಸಿಕೊಳ್ಳಲು ಬಯಸುವವರು ಒಂದಿಷ್ಟು ಹಣ್ಣುಗಳನ್ನು ಸೇವಿಸಿದರೆ ತೂಕ ಕಡಿಮೆಯಾಗುವುದು ಖಂಡಿತ. 

ಇದನ್ನೂ ಓದಿ : ಆಸಿಡಿಟಿ ಗ್ಯಾಸ್ ಎಂದು ನೀವು ಕೂಡಾ ಈ ಸಿರಪ್ ಸೇವಿಸುತ್ತೀರಾ ? ಸರ್ಕಾರ ಜಾರಿಗೊಳಿಸಿದೆ ಅಲರ್ಟ್

ತೂಕ ನಷ್ಟಕ್ಕೆ  ಸಹಾಯ ಮಾಡುವ ಹಣ್ಣುಗಳು :

ಪಪ್ಪಾಯ​ : 
ಪಪ್ಪಾಯವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಪಪ್ಪಾಯಿಯಲ್ಲಿರುವ ಪಾಪೈನ್ ಎಂಜೈಮ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ತಿಂದರೆ ಕೊಬ್ಬು ಕರಗಲು ಪ್ರಾರಂಭಿಸುತ್ತದೆ. ಇದು ಉತ್ತಮ ಪ್ರಮಾಣದ ವಿಟಮಿನ್ ಎ, ಸಿ ಮತ್ತು ಇ ಅನ್ನು ಹೊಂದಿರುತ್ತದೆ.

ಆವಕಾಡೊ  :
ಆವಕಾಡೊ ಹಣ್ಣು ತೂಕ ನಷ್ಟಕ್ಕೆ ಸಹಾಯ ಮಾಡುವ ಅನೇಕ ಅಂಶಗಳನ್ನು ಒಳಗೊಂಡಿದೆ. ಇದನ್ನು ಸೇವಿಸುವುದರಿಂದ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯದಿಂದ  ತಪ್ಪಿಸಬಹುದು. 

ಬಾಳೆಹಣ್ಣು : 
ಬಾಳೆಹಣ್ಣುಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು  ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಇದು  ನಿಜವಲ್ಲ. ಬಾಳೆಹಣ್ಣನ್ನು  ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ತೂಕ ನಷ್ಟದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ವ್ಯತ್ಯಾಸ   ಕಂಡು ಬರುವುದು. ಬಾಳೆಹಣ್ಣು ಪೊಟ್ಯಾಸಿಯಮ್, ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ.

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ನಿಮಗೂ ಇದೆಯಾ? ಈ ಸತ್ಯ ತಿಳಿದುಕೊಳ್ಳಿ

 ಸೇಬು ಹಣ್ಣು : 
ಪ್ರತಿಯೊಬ್ಬರೂ ತಿನ್ನಲು ಶಿಫಾರಸು ಮಾಡುವ ಒಂದು ಹಣ್ಣು ಎಂದರೆ ಅದು ಸೇಬು. ಸೇಬಿನಲ್ಲಿ ಫೈಬರ್ ಅಧಿಕವಾಗಿರುತ್ತದೆ. ತೂಕ ನಷ್ಟಕ್ಕೆ ಇದು ತುಂಬಾ ಪ್ರಯೋಜನಕಾರಿ. 

ಕಲ್ಲಂಗಡಿ ಹಣ್ಣು : 
ತೂಕ ಇಳಿಸುವ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡಾ ಸೇರಿದೆ. ಇದು ದೇಹದಲ್ಲಿ ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಕಲ್ಲಂಗಡಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ತ್ವಚೆಯನ್ನು ರಕ್ಷಿಸುತ್ತದೆ. ಇದನ್ನುನಿತ್ಯ ಸೇವಿಸುತ್ತಾ ಬಂದರೆ ಹೊಟ್ಟೆ ಭಾಗದ ಕೊಬ್ಬು ಕರಗುತ್ತದೆ.  

 ಪೇರಳೆ ಹಣ್ಣು : 
ಉತ್ತಮ ಜೀರ್ಣಕ್ರಿಯೆಗಾಗಿ ಮತ್ತು ತೂಕ ನಷ್ಟವನ್ನು ಕಾಪಾಡಿಕೊಳ್ಳುವ ಸಲುವಾಗಿ ನಿತ್ಯ ಪೇರಳೆ ಹಣ್ಣನ್ನು ಸೇವಿಸಬೇಕು. ಪೇರಳೆ ಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಇದನ್ನು ತಿಂದರೆ ಹೆಚ್ಚು ಹೊತ್ತು ಹೊಟ್ಟೆ ತುಂಬಿರುತ್ತದೆ. ಅತಿಯಾಗಿ ಮತ್ತು ಅನಗತ್ಯ ಆಹಾರ ಸೇವಿಸುವುದನ್ನು ತಪ್ಪಿಸುತ್ತದೆ.  

ಇದನ್ನೂ ಓದಿ : ಅಲೋವೆರಾ ಜ್ಯೂಸ್ ಸೇವನೆಯಿಂದ ಆರೋಗ್ಯಕ್ಕಿದೆ 5 ಅದ್ಭುತ ಪ್ರಯೋಜನಗಳು

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News