ನವದೆಹಲಿ: ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿ 2021 (Krishna Janmashtami 2021) ಅನ್ನು ಆಗಸ್ಟ್ 30 ರಂದು ಆಚರಿಸಲಾಗುತ್ತದೆ. ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವ ಮೂಲಕ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಕೃಷ್ಣನಿಗೆ ಸಂಬಂಧಿಸಿದ ಹಲವು ಕಥೆ, ಪುರಾಣಗಳು ಎಲ್ಲರಿಗೂ ತಿಳಿದಿದೆ. ಕೃಷ್ಣ ಎಂದೊಡನೆ ನಮ್ಮ ಕಣ್ಣ ಮುಂದೆ ಗೋಚರಿಸುವುದು ಅವನ ಶಿರದ ಮೇಲೆ ರಾರಾಜಿಸುವ ನವಿಲು ಗರಿ. ಆದರೆ ಶ್ರೀಕೃಷ್ಣ, ಮುರಾರಿ, ಗೋಕುಲ ನಂದನ, ಕನ್ಹಯ್ಯ, ಬೆಣ್ಣೆ ಕೃಷ್ಣ, ಮುದ್ದು ಕೃಷ್ಣ ಎಂದು ನಾನಾ ಹೆಸರಿನಲ್ಲಿ ಕರೆಯಲ್ಪಡುವ ಕೃಷ್ಣ ಸದಾ ತನ್ನ ತಲೆಯಲ್ಲಿ ನವಿಲುಗರಿ ಧರಿಸಲು ಕಾರಣವೇನು? ಅದರ ಹಿಂದಿನ ರಹಸ್ಯವೇನು ಎಂಬ ಕುತೂಹಲ ಹಲವರಲ್ಲಿದೆ.
ಕನ್ಹಯ್ಯ ತನ್ನ ತಲೆಯನ್ನು ನವಿಲು ಗರಿಯಿಂದ ಏಕೆ ಅಲಂಕರಿಸುತ್ತಾನೆ?
ಕನ್ಹಯ್ಯ ಎಂದರೆ ಕೃಷ್ಣ (Lord Krishna) ಯಾವಾಗಲೂ ತನ್ನ ಕೂದಲಿಗೆ ನವಿಲು ಗರಿಗಳನ್ನು ಏಕೆ ಹಾಕುತ್ತಾನೆ ಎಂದು ಅನೇಕ ಭಕ್ತರು ಆಶ್ಚರ್ಯ ಪಡುತ್ತಾರೆ. ಅಲ್ಲದೆ, ಕೃಷ್ಣನು ಸದಾ ತನ್ನ ಬಳಿ ಕೊಳಲನ್ನು ಏಕೆ ಇಟ್ಟುಕೊಳ್ಳುತ್ತಾರೆ? ಇದು ಅವರ ಹವ್ಯಾಸವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ. ಈ ಎರಡು ವಿಷಯಗಳ ಹಿಂದಿನ ರಹಸ್ಯವೇನು ಮತ್ತು ಅವುಗಳ ಧಾರ್ಮಿಕ ಮಹತ್ವವೇನು ಎಂಬುದರ ಬಗ್ಗೆ ಇಲ್ಲಿದೆ ಒಂದು ಸಣ್ಣ ಮಾಹಿತಿ.
ಇದನ್ನೂ ಓದಿ- Janmasthami 2021: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸರಿಯಾದ ಪೂಜಾ ವಿಧಿ ಹಾಗೂ ಶುಭ ಮುಹೂರ್ತ
ಈ ದೋಷವನ್ನು ನಿವಾರಿಸಲು ನವಿಲು ಗರಿಯನ್ನು ಧರಿಸುತ್ತಾರೆ:
ನವಿಲು ಗರಿಯಿಲ್ಲದೆ ನೀವು ಕೃಷ್ಣನನ್ನು (Lord Krishna) ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಅಥವಾ ನವಿಲು ಗರಿ ಇಲ್ಲದೆ ಕೃಷ್ಣನ ಚಿತ್ರಣ ನಮ್ಮ ಕಣ್ಮುಂದೆಯೇ ಬರುವುದಿಲ್ಲ ಎಂದೂ ಹೇಳಬಹುದು. ಇದಕ್ಕೆ ಎರಡು ಕಾರಣಗಳಿವೆ. ಮೊದಲಿಗೆ, ಕನ್ಹಾ ಜಿ ನಂದಗಾಂವ್‌ನಲ್ಲಿ ವಾಸವಾಗಿದ್ದಾಗ, ಅವರು ಇತರ ಗೋಪಾಲಕರೊಂದಿಗೆ ಹಸುಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದರು. ಆ ಸಮಯದಲ್ಲಿ ನವಿಲುಗಳು ತಮ್ಮ ಗರಿಗಳನ್ನು ತಮ್ಮ ಸುತ್ತ ಹರಡಿಕೊಂಡು ನೃತ್ಯ ಮಾಡುತ್ತಿದ್ದವು. ಅಂದಿನಿಂದ, ಕನ್ಹಾ ಜಿ ಹಸುಗಳು ಮತ್ತು ನವಿಲುಗಳನ್ನು ಗರಿಗಳಿಂದ ಪ್ರೀತಿಸುತ್ತಿದ್ದರು ಮತ್ತು ಅವರಿಬ್ಬರನ್ನೂ ಶಾಶ್ವತವಾಗಿ ಸಂಯೋಜಿಸಿದರು ಎಂಬ ನಂಬಿಕೆ ಇದೆ. ಎರಡನೆಯದಾಗಿ, ಶ್ರೀಕೃಷ್ಣನ ಜಾತಕದಲ್ಲಿ ಕಾಳ ಸರ್ಪ ದೋಷವಿದೆ ಎಂದು ನಂಬಲಾಗಿದೆ. ಈ ದೋಷವನ್ನು ಹೋಗಲಾಡಿಸಲು, ಶ್ರೀ ಕೃಷ್ಣನು ಯಾವಾಗಲೂ ತನ್ನ ಕಿರೀಟದಲ್ಲಿ ನವಿಲು ಗರಿಗಳನ್ನು (Peacock Feather) ಇಟ್ಟುಕೊಳ್ಳುತ್ತಾನೆ ಎಂದೂ ಕೂಡ ಹೇಳಲಾಗುತ್ತದೆ.
ಇದನ್ನೂ ಓದಿ- Shani Dev: ಶನಿದೇವನನ್ನು ಸಂತೋಷಪಡಿಸಲು ಈ ಎರಡು ಕೆಲಸ ಮಾಡಿದರೆ ಸಾಕಂತೆ!
ಕೊಳಲಿನ ಮೂಲಕ ಜನರಿಗೆ ಸಂದೇಶ:
ಶ್ರೀಕೃಷ್ಣನು ಯಾವಾಗಲೂ ತನ್ನೊಂದಿಗೆ ಕೊಳಲನ್ನೂ ಕೂಡ ಇಟ್ಟುಕೊಳ್ಳುತ್ತಾನೆ. ಇದಕ್ಕೆ ಕಾರಣ ಈ ಕೊಳಲನ್ನು ಯಶೋದಾ ಮೈಯ ಅವರಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಲಾಗುತ್ತದೆ. ಕೊಳಲಿನಿಂದ ಹೊರಹೊಮ್ಮುವ ಸದ್ದು ಅತ್ಯಂತ ಸುಮಧುರ ಮತ್ತು ಮನಮೋಹಕವಾಗಿದೆ. ಮುರಳಿಯ ರಾಗವನ್ನು ಕೇಳುವ ಯಾರಾದರೂ ಯಾವುದೋ ಅಲೌಕಿಕ ಜಗತ್ತಿನಲ್ಲಿ ಕಳೆದುಹೋಗುತ್ತಾರೆ. ಈ ಮುರಳಿಯ ಮೂಲಕ, ಕನ್ಹಾ ಜೀ ಮನುಷ್ಯರು ಯಾವಾಗಲೂ ಸಿಹಿಯಾಗಿ ಮತ್ತು ಸತ್ಯವಾಗಿ ಮಾತನಾಡಬೇಕು. ಜೊತೆಗೆ ಉತ್ತಮ ನಡವಳಿಕೆ ಹೊಂದಬೇಕು ಎಂಬ ಸಂದೇಶವನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ