Maha Shivratri 2023: ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ಬಹಳ ಮಹತ್ವವಿದೆ. ಪ್ರತಿ ತಿಂಗಳು ಮಾಸಿಕ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಆದರೆ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಆಚರಿಸಲ್ಪಡುವ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಮಹಾ ಶಿವರಾತ್ರಿಯನ್ನು ಶಿವ ಮಾತೆ ಪಾರ್ವತಿಯನ್ನು ವಿವಾಹವಾದ ದಿನ ಎಂತಲೂ ಹೇಳಲಾಗುತ್ತದೆ. ಮತ್ತೊಂದು ನಂಬಿಕೆಯ ಪ್ರಕಾರ್,ಅ ಮಹಾ ಶಿವರಾತ್ರಿಯಂದು ಭೂಮಿಯ ಮೇಲಿರುವ ಪ್ರತಿ ಲಿಂಗದಲ್ಲೂ ಶಿವ ಇರುತ್ತಾನೆ ಎಂದು ಹೇಳಲಾಗುತ್ತದೆ. ಈ ವರ್ಷ ಮಹಾಶಿವರಾತ್ರಿ ಯಾವಾಗ? ಈ ದಿನ ಶಿವನ ಆರಾಧನೆಗೆ ಶುಭ ಮುಹೂರ್ತ, ಪೂಜಾ ನಿಯಮಗಳು ಯಾವುವು ಎಂದು ತಿಳಿಯೋಣ...
ಧರ್ಮ ಗ್ರಂಥಗಳ ಪ್ರಕಾರ, ಮಹಾ ಶಿವರಾತ್ರಿಯ ದಿನ ಭಕ್ತಿಯಿಂದ ಶಿವನ ಆರಾಧನೆ ಮಾಡುವುದರಿಂದ ವ್ಯಕ್ತಿಯು ತನ್ನ ಜೀವನದ ಎಲ್ಲಾ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಹೊಂದುತ್ತಾನೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಈ ಮಂಗಳಕರ ದಿನದಂದು ಶಿವನನ್ನು ನೇಮ, ನಿಷ್ಠೆಯಿಂದ ಮನಃ ಪೂರ್ವಕವಾಗಿ ಪೂಜಿಸುವುದರಿಂದ ಜೀವನದಲ್ಲಿ ಎದುರಾಗಿರುವ ಎಲ್ಲಾ ಕಷ್ಟಗಳು ದೂರವಾಗಿ, ಸುಖ-ಸಂತೋಷ-ಸಮೃದ್ಧಿಯ ಜೊತೆಗೆ ಭಕ್ತರ ಇಷ್ಟಾರ್ಥಗಳು ಬೇಗನೆ ಈಡೇರುತ್ತವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಶನಿ ಸಾಡೇಸಾತಿ- ಧೈಯಾ ಪ್ರಭಾವಗಳಿಂದ ಸುಲಭ ಪರಿಹಾರ ನೀಡುತ್ತೆ ಶ್ರೀಗಂಧ
ಈ ವರ್ಷ ಮಹಾಶಿವರಾತ್ರಿ ಯಾವಾಗ?
ಹಿಂದೂ ಕ್ಯಾಲೆಂಡರ್ ಪ್ರಕಾರ, 2023ರಲ್ಲಿ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯು ಫೆಬ್ರವರಿ 17 ರಂದು ರಾತ್ರಿ 8.02 ರಿಂದ ಪ್ರಾರಂಭವಾಗಿ ಫೆಬ್ರವರಿ 18 ರಂದು ಸಂಜೆ 4.18 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ, ಈ ವರ್ಷ ಮಹಾಶಿವರಾತ್ರಿಯ ಹಬ್ಬವನ್ನು ಫೆಬ್ರವರಿ 18, 2023 ರಂದು ಆಚರಿಸಲಾಗುತ್ತದೆ. ಈ ವರ್ಷ ಮಹಾಶಿವರಾತ್ರಿ ಉಪವಾಸವನ್ನು ಫೆಬ್ರವರಿ 19 ರಂದು ಬೆಳಿಗ್ಗೆ 06.57 ರಿಂದ ಮಧ್ಯಾಹ್ನ 3.33 ರವರೆಗೆ ಆಚರಿಸಲಾಗುತ್ತದೆ.
ಇದನ್ನೂ ಓದಿ- Ketu Astrology: ಕೇತುವಿನ ಪ್ರಭಾವದಿಂದ 2023ರಲ್ಲಿ ಈ ರಾಶಿಯವರ ಮೇಲೆ ಅಶುಭ ಪರಿಣಾಮ!
ಮಹಾಶಿವರಾತ್ರಿ ಪೂಜಾ ವಿಧಾನ:
ಮಹಾಶಿವರಾತ್ರಿಯ ದಿನ ಉಪವಾಸಕ್ಕೆ ಬಹಳ ಮಹತ್ವವಿದೆ. ಮಹಾಶಿವರಾತ್ರಿಯ ದಿನದಂದು ಪ್ರಾತಃ ಕಾಲ ಎದ್ದು ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಶುದ್ಧವಾದ ಬಟ್ಟೆಯನ್ನು ಧರಿಸಿ ಶಿವನನ್ನು ಆರಾಧಿಸಬೇಕು. ಇದರ ನಂತರ ಶಿವನಿಗೆ ಪಂಚಾಮೃತ ಮತ್ತು ಗಂಗಾಜಲದಿಂದ ಅಭಿಷೇಕ ಮಾಡಿ. ನಂತರ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಧಾತುರ, ಬಿಳಿ ಚಂದನ, ಸುಗಂಧವನ್ನು ಅರ್ಪಿಸಿ. ಭಕ್ತಿಯಿಂದ ಆರಾಧಿಸಿ.
ಮಹಾ ಶಿವರಾತ್ರಿಯಲ್ಲಿ ಉಪವಾಸದ ಮಹತ್ವ:
ಮಹಾಶಿವರಾತ್ರಿಯಲ್ಲಿ ಉಪವಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ದಿನ ನಿರ್ಜಲ ಉಪವಾಸ ಮಾಡುವುದು ತುಂಬಾ ಶ್ರೇಷ್ಠ ಎಂಬ ನಂಬಿಕೆ ಇದೆ. ಆದರೆ, ನಿರ್ಜಲ ಉಪವಾಸ ಸಾಧ್ಯವಾಗದವರು ಈ ದಿನ ಹಣ್ಣುಗಳನ್ನು ಸೇವಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.