ಕೇವಲ ಒಂದೇ ದಿನ ಬಾಕಿ, ಕುಂಭ ರಾಶಿಯಲ್ಲಿ ಶುಕ್ರನ ಗೋಚರ, ಚಿನ್ನದಂತೆ ಹೊಳೆಯಲಿದೆ ಈ ಜನರ ಅದೃಷ್ಟ

Shukra Gochara 2023: ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಅತ್ಯಂತ ಶುಭ ಗ್ರಹ ಎಂದು ಭಾವಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಶುಕ್ರದೆಸೆ ಆರಂಭವಾದರೆ ಆತನಿಗೆ ಪ್ರೇಮ ಹಾಗೂ ಭೌತಿಕ ಸುಖ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ ಅಪಯಶಸ್ಸು ವ್ಯಕ್ತಿಯ ಪಾಲಾಗುತ್ತದೆ ಎನ್ನಲಾಗುತ್ತದೆ. ಜನವರಿ 22 ರಂದು ಕುಂಭ ರಾಶಿಯಲ್ಲಿ ಶುಕ್ರನ ಗೋಚರ ನೆರವೇರಲಿದೆ. ಶುಕ್ರನ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ. ಶುಕ್ರನ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಗಳ ಜನರ ಅದೃಷ್ಟ ಖುಲಾಯಿಸಲಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 20, 2023, 04:55 PM IST
  • ಜನವರಿ 22, 2023ರಂದು ಸಂಜೆ 4ಗಂಟೆ 03 ನಿಮಿಷಕ್ಕೆ ಶುಕ್ರನ ಈ ರಾಶಿ ಪರಿವರ್ತನೆ ನಡೆಯಲಿದೆ.
  • ಇದಾದ ಬಳಿಕ ಶುಕ್ರ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ.
  • ನಮ್ಮ ಜೀವನದ ಮೇಲೆ ಶುಕ್ರನ ವ್ಯಾಪಕ ಪ್ರಭಾವ ಇರುತ್ತದೆ.
ಕೇವಲ ಒಂದೇ ದಿನ ಬಾಕಿ, ಕುಂಭ ರಾಶಿಯಲ್ಲಿ ಶುಕ್ರನ ಗೋಚರ, ಚಿನ್ನದಂತೆ ಹೊಳೆಯಲಿದೆ ಈ ಜನರ ಅದೃಷ್ಟ title=
ಶುಕ್ರ ಗೋಚರ 2023

Shukra Rashi Parivartan 2023:  ಜೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನನ್ನು ಒಂದು ಶುಭ ಗ್ರಹ ಎಂದು ಭಾವಿಸಲಾಗಿದೆ. ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಭೌತಿಕ ಸುಖ, ಸೌಂದರ್ಯ, ಕಲೆ, ಪ್ರತಿಭೆಯ ಕಾರಕ ಗ್ರಹ ಎಂದು ಭಾವಿಸಲಾಗಿದೆ. ಕೇವಲ ಒಂದು ದಿನದ ಬಳಿಕ ಶುಕ್ರ ಕುಂಭ ರಾಶಿಯಲ್ಲಿ ಗೋಚರಿಸಲಿದ್ದಾನೆ. ಜನವರಿ 22, 2023ರಂದು ಸಂಜೆ 4ಗಂಟೆ 03 ನಿಮಿಷಕ್ಕೆ ಶುಕ್ರನ ಈ ರಾಶಿ ಪರಿವರ್ತನೆ ನಡೆಯಲಿದೆ. ಇದಾದ ಬಳಿಕ ಶುಕ್ರ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ನಮ್ಮ ಜೀವನದ ಮೇಲೆ ಶುಕ್ರನ ವ್ಯಾಪಕ ಪ್ರಭಾವ ಇರುತ್ತದೆ. ಶುಕ್ರನ ಕಾರಣ ನಮ್ಮ ಜೀವನದಲ್ಲಿ ಹಣ ಮತ್ತು ವೈಭವದ ಕೊರತೆ ಇರುವುದಿಲ್ಲ. ಶುಕ್ರನ ಈ ರಾಶಿ ಪರಿವರ್ತನೆ ಯಾವ ರಾಶಿಗಳ ಜನರಿಗೆ ಲಕ್ಕಿ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,

1. ಮೇಷ ರಾಶಿ- ಶುಕ್ರನ ಈ ಕುಂಭ ಗೋಚರ ಮೇಷ ರಾಶಿಯ ಜನರ ಪಾಲಿಗೆ ತುಂಬಾ ಲಕ್ಕಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಬಿಸ್ನೆಸ್ ನಲ್ಲಿ ಸಾಕಷ್ಟು ಲಾಭ ಸಿಗಲಿದೆ. ಇನ್ನೊಂದೆಡೆ ವಿವಾಹಿತರು ಈ ಅವಧಿಯಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದೀತು. ಯಾವುದೊಂದು ವಿಷಯಕ್ಕೆ ಸಂಬಂಧಿಸಿದಂತೆ ಬಾಳಸಂಗಾತಿಯ ಜೊತೆಗೆ ಇರುಸು ಮುರುಸು ಉಂಟಾಗುವ ಸಾಧ್ಯತೆ ಇದೆ. ಶುಕ್ರನ ಈ ಗೋಚರದಿಂದ ಕಾರ್ಯಕ್ಷೇತ್ರದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವೆಚ್ಚದ ಮೇಲೆ ನಿಯಂತ್ರಣವಿರಲಿದೆ. ವಿದ್ಯಾರ್ಥಿಗಳ ಮನಸ್ಸು ವಿದ್ಯಾಭ್ಯಾಸದಿಂದ ವಿಚಲಿತವಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ. ಆದರೆ, ನೀವು ನಿಮ್ಮ ಆಹಾರದ ಬಗ್ಗೆ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ.

2. ವೃಷಭ ರಾಶಿ- ಶುಕ್ರನ ಈ ಗೋಚರದಿಂದ ವೃಷಭ ರಾಶಿಯ ಜಾತಕದವರಿಗೆ ಅತಿ ಹೆಚ್ಚು ಲಾಭ ಸಿಗಲಿದೆ. ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗಲಿದೆ. ಈ ಗೋಚರದಿಂದ ನಿಮ್ಮ ಭಾಗ್ಯೋದಯವಾಗಲಿದೆ. ಈ ಅವಧಿಯಲ್ಲಿ ಒಂದು ವೇಳೆ ನೀವು ಕಷ್ಟಪಟ್ಟು ದುಡಿದರೆ, ನಿಮಗೆ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಈ ಅವಧಿ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ ಮತ್ತು ಇದರ ಲಾಭ ಪಡೆಯಲು ಸಂಪೂರ್ಣ ಪ್ರಯತ್ನಿಸಿ.

3. ಕನ್ಯಾ ರಾಶಿ- ಈ ಶುಕ್ರ ಗೋಚರ ನಿಮ್ಮ ಪಾಲಿಗೆ ಅದೃಷ್ಟ ತರಲಿದೆ. ನಿಂತು ಹೋದ ನಿಮ್ಮ ಹಲವು ಕೆಲಸಗಳು ಪೂರ್ಣಗೊಳ್ಳಲಿವೆ. ಇದರಿಂದ ಆರ್ಥಿಕವಾಗಿಯೂ ಕೂಡ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಸಾಮಾಜಿಕ ವ್ಯಾಪ್ತಿಯಲ್ಲಿಯೂ ಕೂಡ ನಿಮಗೆ ಸಾಕಷ್ಟು ಮನ್ನಣೆ ಸಿಗಲಿದೆ. ಕಿರಿಯ ಸಹೋದರ-ಸಹೋದರಿಯರಿಗೆ ನೀವು ಆರ್ಥಿಕ ನೆರವು ನೀಡುವಿರಿ. ಈ ಅವಧಿಯಲ್ಲಿ ನಿಮಗೆ ನೀವು ಅತ್ಯುತ್ತಮ ಸ್ಥಿತಿಯಲಿರುವ ಅನುಭವ ನಿಮಗಾಗಲಿದೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವುದರಿಂದ ಭಾರಿ ನೆಮ್ಮದಿ ಸಿಗಲಿದೆ. ಕಿರಿಯ ಸಹೋದರ-ಸಹೋದರಿಯರ ಜೊತೆಗಿನ ನಿಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಆದರೆ, ಈ ಅವಧಿಯಲ್ಲಿ ಮಾತಿನ ಮೇಲೆ ನಿಯಂತ್ರಣವಿರಲಿ. ಇಲ್ಲದಿದ್ದರೆ ಅದು ವಾಗ್ವಾದಕ್ಕೆ ಕಾರಣವಾಗಬಹುದು.

4 ಮಕರ ರಾಶಿ- ಕುಂಭ ರಾಶಿಯಲ್ಲಿ ಶುಕ್ರನ ಗೋಚರದಿಂದ ಮಕರ ಜಾತಕದವರಿಗೆ ಸಾಕಷ್ಟು ಲಾಭ ಸಿಗಲಿದೆ. ಈ ಗೋಚರದಿಂದ ನಿಮಗೆ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಈ ಗೋಚರದಿಂದ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮಗೆ ಧನಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಅವಧಿಗೂ ಮುನ್ನ ಪೂರ್ಣಗೊಳಿಸಲು ಪ್ರಯತ್ನಿಸಿ. ತಡವಾಗಿ ಪೂರ್ಣಗೊಂಡ ಕೆಲಸದ ಫಲ ಕೂಡ ತಡವಾಗಿಯೇ ಪ್ರಾಪ್ತಿಯಾಗಲಿದೆ.

ಇದನ್ನೂ ಓದಿ-ನಾಳೆ ಮೌನಿ ಅಮಾವಾಸ್ಯೆ, 20 ವರ್ಷಗಳ ಬಳಿಕ ಶುಭ ಕಾಕತಾಳೀಯ, 4 ರಾಜಯೋಗಗಳಿಂದ ಮೋಕ್ಷ ಪ್ರಾಪ್ತಿ

5. ಮೀನ ರಾಶಿ- ಮೀನ ಜಾತಕದವರ ಪಾಲಿಗೆ ಶುಕ್ರನ ಈ ಗೋಚರ ಭಾರಿ ಧನಲಾಭ ತರಲಿದೆ. ಈ ಅವಧಿಯಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸಗಳ ಫಲಿತಾಂಶ ಉತ್ತಮವಾಗಿರಲಿದೆ. ಆದರೆ, ಅಹಂಕಾರದಿಂದ ದೂರ ಉಳಿಯಿರಿ. ನಿಮ್ಮ ಭಾವನೆಗಳ ಮೇಲೆ ನಿಮ್ಮ ನಿಯಂತ್ರಣವಿರಲಿ. ಯಾರಿಗಾದರು ಏನಾದರು ಹೇಳ ಬಯಸಿದರೆ, ಯೋಚಿಸಿ ನಿರ್ಧಾರ ಕೈಗೊಳ್ಳಿ. ಯಾರೊಂದಿಗೆ ಯಾವ ರೀತಿ ವ್ಯವಹರಿಸಬೇಕೋ ಎಂಬುದರ ಕುರಿತು ಸಾಕಷ್ಟು ಚಿಂತನೆ ನಡೆಸಿ . ಘನತೆ-ಗೌರವ ಕಾಯ್ದುಕೊಳ್ಳುವ ಸಮಯ ಇದಾಗಿದೆ. 

ಇದನ್ನೂ ಓದಿ-ಭೂಮಿ, ವಾಹನ ಇತ್ಯಾದಿಗಳ ಖರೀದಿಗೆ ಅತ್ಯಂತ ಶುಭ ಯೋಗ ಇದು, ಕೇವಲ 7 ದಿನ ನಿರೀಕ್ಷಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News