ಮನೆಯ ಈ ಸ್ಥಳದಲ್ಲಿ ನವಿಲು ಗರಿ ಇಟ್ಟು ನೋಡಿ.. ಆರ್ಥಿಕ ಸಮಸ್ಯೆ ದೂರವಾಗಿ ಸಂಪತ್ತು ವೃದ್ಧಿಯಾಗುವುದು !

peacock feather benefits: ಅನೇಕ ಜನರು ತಮ್ಮ ಮನೆಯಲ್ಲಿ ನವಿಲು ಗರಿಗಳನ್ನು ಇಡುತ್ತಾರೆ. ಇದರಿಂದ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ.

Written by - Chetana Devarmani | Last Updated : Jul 2, 2024, 03:36 PM IST
    • ಮನೆಯ ಈ ಸ್ಥಳದಲ್ಲಿ ನವಿಲು ಗರಿ ಇಡಿ
    • ಆರ್ಥಿಕ ಸಮಸ್ಯೆ ದೂರವಾಗುವುದು
    • ನವಿಲು ಗರಿಗೆ ಹಣವನ್ನು ಆಕರ್ಷಿಸುವ ಗುಣವಿದೆ
ಮನೆಯ ಈ ಸ್ಥಳದಲ್ಲಿ ನವಿಲು ಗರಿ ಇಟ್ಟು ನೋಡಿ.. ಆರ್ಥಿಕ ಸಮಸ್ಯೆ ದೂರವಾಗಿ ಸಂಪತ್ತು ವೃದ್ಧಿಯಾಗುವುದು ! title=

peacock feather vastu tips: ಕೆಲವರು ಮನೆಯಲ್ಲಿ ನವಿಲು ಗರಿಗಳನ್ನು ಇಡುತ್ತಾರೆ. ವಿಶೇಷವಾಗಿ ಹಾಲ್‌, ದೇವರ ಪೂಜಾ ಕೋಣೆಯಲ್ಲಿ ನವಿಲು ಗರಿಗಳನ್ನು ಇರಿಸಲಾಗುತ್ತದೆ. ಮನೆಯಲ್ಲಿ ನವಿಲುಗರಿಯನ್ನು ಇಟ್ಟರೆ ಎಲ್ಲಾ ದುಷ್ಪರಿಣಾಮಗಳು ದೂರವಾಗುತ್ತವೆ. ಮನೆಯಲ್ಲಿ ಸದಾ ಒಂದಿಲ್ಲೊಂದು ಜಗಳಗಳು ನಡೆಯುತ್ತಿದ್ದರೆ, ನವಿಲು ಗರಿ ಇಡಬೇಕು. ಇದರಿಂದ ಮನೆಯ ವಾತಾವರಣ ಶಾಂತಗೊಳ್ಳುತ್ತದೆ. 

ದುಃಸ್ವಪ್ನದಿಂದ ಬಳಲುತ್ತಿರುವವರು ತಮ್ಮ ಹಾಸಿಗೆಯ ದಿಂಬಿನ ಕೆಳಗೆ ನವಿಲು ಗರಿಗಳನ್ನು ಇಟ್ಟರೆ ದುಷ್ಟಶಕ್ತಿಗಳ ಬಾಧೆ ಇರುವುದಿಲ್ಲ. ಅದೇ ರೀತಿ ನವಿಲು ಗರಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಅದಕ್ಕಾಗಿಯೇ ಅದನ್ನು ಮನೆಯಲ್ಲಿ ಇಡಬೇಕು.

ಇದನ್ನೂ ಓದಿ:  ಇವು ಭಗವಾನ್ ಶ್ರೀಕೃಷ್ಣನ ಅತ್ಯಂತ ಮೆಚ್ಚಿನ ರಾಶಿಗಳು: ಬೇಡಿದ ತಕ್ಷಣ ಅನಂತ ಸಿರಿ ಸಂಪತ್ತಿನ್ನೇ ಧಾರೆ ಎರೆಯುತ್ತಾನೆ ದೇವಕಿಸುತ

ನವಿಲು ಗರಿಗೆ ಹಣವನ್ನು ಆಕರ್ಷಿಸುವ ಗುಣವಿದೆ. ಲಾಕರ್ ರೂಮಿನಲ್ಲಿ ಇಟ್ಟರೆ ಹಣ ಯಾವತ್ತೂ ಕಮ್ಮಿ ಆಗುವುದಿಲ್ಲ ಎನ್ನುತ್ತಾರೆ. ಪ್ರಮುಖ ಕೆಲಸಕ್ಕೆ ಹೋಗುವಾಗ ನವಿಲುಗರಿಯನ್ನು ಕಂಡರೆ ಕಾರ್ಯ ಸಫಲವಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.

ಮನೆಯಲ್ಲಿ ಹಾವಿನ ಕಾಟ, ಹಾವಿನ ಕನಸು ಕಾಣುವವರು ಮಲಗುವ ಕೋಣೆಯಲ್ಲಿ ನವಿಲು ಗರಿಯನ್ನು ಇಟ್ಟುಕೊಂಡರೆ ಈ ಕೆಟ್ಟ ಪ್ರಭಾವ ದೂರವಾಗುತ್ತದೆ. ಕೆಲವರು ಓದುವ ಪುಸ್ತಕಗಳಲ್ಲಿ ನವಿಲು ಗರಿಗಳನ್ನು ಹಾಕುತ್ತಾರೆ. ಇದರಿಂದ ವಿದ್ಯಾಭ್ಯಾಸ ಚೆನ್ನಾಗಿರುತ್ತದೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ:  Lucky Zodiac Signs: ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News