ರಶ್ಮಿಕಾ ಮಂದಣ್ಣ ಜೊತೆಗೆ ಕಲ್ಕಿ ಸಿನಿಮಾ ವೀಕ್ಷಿಸಿದ್ರಾ ವಿಜಯ್‌ ದೇವರಕೊಂಡ!

Rashmika Mandanna On Kalki : ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

Written by - Chetana Devarmani | Last Updated : Jul 1, 2024, 05:22 PM IST
  • ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ
  • ಅತಿಥಿ ಪಾತ್ರದಲ್ಲಿ ವಿಜಯ್ ದೇವರಕೊಂಡ
  • ಕಲ್ಕಿ ಚಿತ್ರ ವೀಕ್ಷಿಸಿದ ಕಲ್ಕಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಜೊತೆಗೆ ಕಲ್ಕಿ ಸಿನಿಮಾ ವೀಕ್ಷಿಸಿದ್ರಾ ವಿಜಯ್‌ ದೇವರಕೊಂಡ! title=

Rashmika Mandanna Vijay Devarakonda : ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್ ನಲ್ಲಿ ತೆರೆಕಂಡ ಕಲ್ಕಿ 2898 ಎಡಿ ಸಿನಿಮಾ ದೇಶದ ಎಲ್ಲೆಡೆ ಸಿನಿ ಪ್ರಿಯರ ಮನಗೆದ್ದಿದೆ. ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ದೊಡ್ಡ ತಾರಾಬಳಗದಲ್ಲಿ ತಯಾರಾದ ಈ ಚಿತ್ರದಲ್ಲಿ ಹಲವು ನಟರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಯಂಗ್ ಹೀರೋ ವಿಜಯ್ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಇತ್ತೀಚೆಗೆ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿದ್ದಾರೆ. ಆದರೆ ಈ ಸಿನಿಮಾವನ್ನು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ವೀಕ್ಷಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇವರಿಬ್ಬರ ಡೇಟಿಂಗ್ ವದಂತಿ ಹಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಈ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. 

ಇದನ್ನೂ ಓದಿ:  ಕದ್ದು ಮುಚ್ಚಿ ರಾಮ್‌ ಚರಣ್‌ ಮನೆಯಲ್ಲಿದ್ದ ಗುಟ್ಟು ರಟ್ಟು ಮಾಡಿದ ಖ್ಯಾತ ನಟಿ !

ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಇಬ್ಬರು ಒಟ್ಟುಗೆ ಕಲ್ಕಿ ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿನ್ನೆಲೆ ಇಬ್ಬರೂ ಒಟ್ಟಿಗೆ ಚಲನಚಿತ್ರವನ್ನು ವೀಕ್ಷಿಸಿರಬಹುದು ಎಂದು ನೆಟ್ಟಿಜನ್‌ಗಳು ಊಹಿಸುತ್ತಿದ್ದಾರೆ.

 

 

"ನಾನು ಈಗಷ್ಟೇ ಸಿನಿಮಾ ನೋಡಿದ್ದೇನೆ. ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಭಾರತೀಯ ಚಿತ್ರರಂಗದ ಹೊಸ ಮಟ್ಟ ಇದು. ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡಬೇಕು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾವನ್ನು ವಿಜಯ್ ದೇವರಕೊಂಡ ಹೊಗಳಿದ್ದಾರೆ.́

 

 

ಮತ್ತೊಂದೆಡೆ ರಶ್ಮಿಕಾ ಮಂದಣ್ಣ ಕೂಡ, "ಓ ಮೈ ಗಾಡ್. ನಾಗ್ ಅಶ್ವಿನ್.. ನೀವೊಬ್ಬ ಜೀನಿಯಸ್. ಇಡೀ ತಂಡಕ್ಕೆ.. ನನ್ನ ಅಭಿನಂದನೆಗಳು. ನಮ್ಮ ಪೌರಾಣಿಕ ದೇವರುಗಳನ್ನು ಬೆಳ್ಳಿತೆರೆಯಲ್ಲಿ ನೋಡಿದಾಗ ತುಂಬಾ ಸಂತೋಷವಾಯಿತು" ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:  ತ್ರಿಷಾ ನನ್ನ ಸಂಸಾರ ಹಾಳು ಮಾಡುತ್ತಿದ್ದರು: ಸಂಚಲನ ಸೃಷ್ಟಿಸಿದ ಸ್ಟಾರ್ ನಟನ ಆರೋಪ!

ಸಿನಿಮಾ ವೀಕ್ಷಿಸಿದ ವಿಜಯ್ ದೇವರಕೊಂಡ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತೀಯ ಸಿನಿಮಾವನ್ನು ಎಲ್ಲೋ ತೆಗೆದುಕೊಂಡು ಹೋಗಿದೆ. ಇಂತಹ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News