Vastu tips : ನಟರಾಜ ಶಿವ, ಮಹಾಕಾಳಿಯ ಮೂರ್ತಿ ಮನೆಯ ಮಂದಿರದಲ್ಲಿ ಏಕಿಡರಬಾರದು..? 2 ಗಣೇಶ ಮೂರ್ತಿ ಇದ್ದರೆ ಏನಾಗುತ್ತದೆ..?

ಮನೆಯೇ ಮಂತ್ರಾಲಯ. ಮನೆಯೇ ಒಂದು ದೇವಾಲಯ.  ಮನೆಯೊಳಗಿನ ಮಂದಿರದಲ್ಲಿ ದೇವರ ಮೂರ್ತಿ  ಹೇಗಿರಬೇಕು? ಒಂದೊಂದನ್ನೇ ತಿಳಿದುಕೊಳ್ಳೋಣ.

Written by - Ranjitha R K | Last Updated : Jan 31, 2021, 10:33 AM IST
  • ಪ್ರತಿ ಮನೆಯಲ್ಲೊಂದು ಪುಟ್ಟ ಮಂದಿರವಿರುತ್ತದೆ, ಅಥವಾ ದೇವರ ಮನೆ ಇರುತ್ತದೆ.
  • ಮನೆಯಲ್ಲಿ ದೇವರ ಮೂರ್ತಿ ಇಡಲು ಒಂದಷ್ಟು ನಿಯಮ, ಸಂಪ್ರದಾಯಗಳಿವೆ
  • ಗಣೇಶ, ಶಿವ, ಮಹಾಲಕ್ಷ್ಮಿಯ ಮೂರ್ತಿ ಹೇಗಿರಬೇಕು, ಎಲ್ಲಿರಬೇಕು ತಿಳಿದುಕೊಳ್ಳಿ.
Vastu tips : ನಟರಾಜ ಶಿವ, ಮಹಾಕಾಳಿಯ ಮೂರ್ತಿ ಮನೆಯ ಮಂದಿರದಲ್ಲಿ ಏಕಿಡರಬಾರದು..? 2 ಗಣೇಶ ಮೂರ್ತಿ ಇದ್ದರೆ ಏನಾಗುತ್ತದೆ..? title=
ಮನೆಯಲ್ಲಿ ದೇವರ ಮೂರ್ತಿ ಇಡಲು ಒಂದಷ್ಟು ನಿಯಮ, ಸಂಪ್ರದಾಯಗಳಿವೆ(file photo)

ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆ (Pooja room) ಸಹಜವಾಗಿ ಇರುತ್ತದೆ. ದೇವರ ಮನೆ, ಅಥವಾ ದೇವರ ಸ್ಟ್ಯಾಂಡ್ ಇರುವುದು ಸರ್ವೇ ಸಾಮಾನ್ಯ. ಮನೆಯಲ್ಲಿ ದೇವರ ಗುಡಿ ಇದ್ದು, ಅದಕ್ಕೆ ದಿನವೂ ಪೂಜಾ ಆರಾಧನೆ ಆಗುತ್ತಿದ್ದರೆ ಮನೆಯಲ್ಲಿ ಸಮೃದ್ದಿ ನೆಲೆಸುತ್ತದೆ ಎಂದು ನಂಬಲಾಗುತ್ತದೆ. ಅಷ್ಟೇ ಅಲ್ಲ  ಇದರಿಂದ ಪಾಸಿಟಿವ್ ಎನರ್ಜಿ (Positive Energy) ಮನೆಯಲ್ಲಿ ಕಾಣಿಸಿಕೊಳ್ಳುತ್ತದೆ.  ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತದೆ. ಆರೋಗ್ಯ ನೆಲೆಸುತ್ತದೆ. ಶುಭವಾಗುತ್ತದೆ. 

ದೇವರ ಮನೆ (Pooja room) ಸ್ವಚ್ಛವಾಗಿರಬೇಕು. ಅದು ಈಶಾನ್ಯ ಅಥವಾಪೂರ್ವ ದಿಕ್ಕಿಗೆ ಇದ್ದರೆ ಉತ್ತಮ ಎನ್ನುತ್ತಾರೆ ವಾಸ್ತು ಪಂಡಿತರು. ದೇವರ ಮನೆಯಲ್ಲಿ ಸಾಕಷ್ಟು ಗಾಳಿ, ಬೆಳಕು ಆಡುತ್ತಿರುಬೇಕು. ಈ ಎಲ್ಲಾ ವಿಷಯ ಸಾಕಷ್ಟು ಜನರಿಗೆ ಗೊತ್ತು. ಆದರೆ, ದೇವರ ಮನೆಯಲ್ಲಿ ಮೂರ್ತಿಯನ್ನು ಹೇಗೆ ಇಡಬೇಕು. ಮೂರ್ತಿ ಪ್ರತಿಷ್ಠಾಪಿಸುವಾಗ ಯಾವ ತಪ್ಪನ್ನು ಮಾಡಬಾರದು. ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮಲ್ಲಿ ಆಗಬಹುದಾದ ತಪ್ಪು ಯಾವುದು..? ಮುಂದೆ ಓದಿ

ಇದನ್ನೂ ಓದಿ : ನೀವು ಕಡಿಮೆ ಬಜೆಟ್ ನಲ್ಲಿ ಮನೆ ಕಟ್ಟುವುದು ಹೇಗೆ ಗೊತ್ತೇ? ಇಲ್ಲಿನ ಕ್ರಮಗಳನ್ನು ಅನುಸರಿಸಿ

ಮನೆಯ ದೇವರಮನೆಯಲ್ಲಿ ಮೂರ್ತಿ ಹೇಗಿಡಬೇಕು..?
ಮನೆಯೇ ಮಂತ್ರಾಲಯ. ಮನೆಯೇ ಒಂದು ದೇವಾಲಯ.  ಮನೆಯೊಳಗಿನ ಮಂದಿರದಲ್ಲಿ ದೇವರ ಮೂರ್ತಿ (Statue) ಹೇಗಿರಬೇಕು? ಒಂದೊಂದನ್ನೇ ತಿಳಿದುಕೊಳ್ಳೋಣ.

ವಿಘ್ನ ವಿನಾಶಕ ಗಣೇಶನ ಮೂರ್ತಿ ಹೇಗಿಡಬೇಕು..?
ಗಣೇಶ (Lord Ganesha) ಪ್ರಥಮ ವಂದ್ಯ. ಪ್ರಥಮ ಪೂಜ್ಯ. ಹಾಗಾಗಿ ಮನೆ ಮಂದಿರದಲ್ಲಿ ಗಣೇಶನ ಮೂರ್ತಿಗೆ ಮೊದಲ ಪ್ರಾಶಸ್ತ್ಯ. ಗಣೇಶನ ಮೂರ್ತಿ ಇಟ್ಟರೆ ಅದರಿಂದ ಶುಭ ಲಾಭವಿರುತ್ತದೆ. ಆದರೆ, ಗೊತ್ತಿರಲಿ, ಮಂದಿರದಲ್ಲಿ ವಿಷಮ ಸಂಖ್ಯೆಯಲ್ಲಿ ಗಣೇಶನ ಮೂರ್ತಿ ಇಡಲೇ ಬಾರದು.  ಒಂದು ಅಥವಾ 3 ಮೂರ್ತಿ ಇಡಬೇಡಿ. ಎರಡು ಮೂರ್ತಿ ಇಟ್ಟರೆ ಶುಭ ಎನ್ನುತ್ತಾರೆ ಧರ್ಮಪಂಡಿತರು. 

ಶಿವಲಿಂಗ ಅಂಗೈಯಗಲದಷ್ಟೇ ಇರಬೇಕು:
ಮಹಾದೇವನ ದರ್ಶನ ಮಾತ್ರದಿಂದಲೇ ಸಮಸ್ತ ಮನೋಕಾಮನೆಗಳೂ ಈಡೇರುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ, ಮನೆ ಮಂದಿರದಲ್ಲಿ ಶಿವಲಿಂಗಕ್ಕೂ (Shiv Linga) ಮಹತ್ವವಿದೆ.  ಆದರೆ ಶಿವಲಿಂಗ  ಇಡುವ ಮುನ್ನ ಕೆಲವೊಂದು ವಿಚಾರವನ್ನು ಖಂಡಿತವಾಗಿಯೂ ತಿಳಿದುಕೊಳ್ಳಲೇ ಬೇಕು. ಯಾವುದೇ ಕಾರಣಕ್ಕೂ ಮನೆಯ ಮಂದಿರದಲ್ಲಿ ಒಂದಕ್ಕಿಂತ ಹೆಚ್ಚು ಲಿಂಗ ಇಡಬಾರದು. ಶಿವ ಲಿಂಗ ಅಂಗೈಯಗಲದಷ್ಟೇ ಇರಬೇಕು. ಅದಕ್ಕಿಂತ ದೊಡ್ಡ ಶಿವಲಿಂಗ ಇರಕೂಡದು. 

ಇದನ್ನೂ ಓದಿ : Vastu Tips:ಈ ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ

ಕುಳಿತ ಭಂಗಿಯಲ್ಲಿರುವ ಹನುಮಾನ್ ಮೂರ್ತಿ ಇಡಿ:
ಮನೆಯ ಮಂದಿರ ಮನದ ಮಂದಿರ ಕೂಡಾ. ಮನೆಯ ಮಂದಿರದಲ್ಲಿ  ಸಂಕಟ ನಿವಾರಕ ಅಂಜನೇಯ ವಿಗ್ರಹಕ್ಕೂ  ಪ್ರಾಧಾನ್ಯತೆ ಇದೆ.  ಆದರೆ, ಆಂಜನೇಯ ಮೂರ್ತಿ ಹೇಗಿರಬೇಕು. ಧರ್ಮ ಪಂಡಿತರ (Religious Scholars) ಸಲಹೆ ಎಂದರೆ ಮನೆಯಲ್ಲಿ ಎಂದಿಗೂ ನಿಂತ ಭಂಗಿಯಲ್ಲಿರುವ ಹನುಮಾನ್ (Hanuman) ಮೂರ್ತಿಯನ್ನಿಡಬಾರದು. ಆಂಜನೇಯ ಕುಳಿತ ಭಂಗಿಯಲ್ಲಿದ್ದರೆ ಶ್ರೇಯಸ್ಕರ.  ಒಂದಕ್ಕಿಂತ ಹೆಚ್ಚು ಮೂರ್ತಿಯನ್ನು ಎಲ್ಲೂ ಮನೆಯಲ್ಲಿಡಬೇಡಿ. ಬದಲಿಗೆ ಅಂಜನೇಯನ ಫೋಟೋ ಇಡಬಹುದು. 

ದುರ್ಗೆ, ಮಹಾಲಕ್ಷ್ಮಿಯ ಮೂರ್ತಿ ಎಷ್ಟಿರಬಾರದು..?
ಗಣೇಶ, ಶಿವ, ಆಂಜನೇಯನ ರೀತಿಯಲ್ಲೇ ಮಹಾದುರ್ಗೆ (Mahadurge), ಮಹಾಲಕ್ಷ್ಮಿಯ (Mahalakhsmi) ಮೂರ್ತಿ ಕೂಡಾ ಮಂದಿರದಲ್ಲಿರಬೇಕು.  ಮಹಾದುರ್ಗೆ, ಮಹಾಲಕ್ಷ್ಮಿಯ ಮೂರ್ತಿ ಮಂದಿರದಲ್ಲಿ ಸಂಖ್ಯೆಯಲ್ಲಿ ಮೂರು ಆಗಿರಬಾರದು.,  ಬೇಕಾದರೆ 2 ಇಡಿ ಇಲ್ಲ 4 ಮೂರ್ತಿ ಇಡಬಹುದು. 

ಇದನ್ನೂ ಓದಿ : Astrology : ದಿಢೀರ್ ಧನ ಕನಕ ವಸ್ತು ವಾಹನ ತರುವುದು ಗಜಕೇಸರಿ ಯೋಗ..! ನಿಮ್ಮ ಜಾತಕದಲ್ಲಿದೆಯಾ..?

ನಟರಾಜ ಮುದ್ರೆಯ ಶಿವ, ಮಹಾಕಾಳಿ ಸ್ವರೂಪಿ ದುರ್ಗೆಯ ಮೂರ್ತಿ ಮಂದಿರದಲ್ಲಿಡಬಾರದು:
ಧರ್ಮ ಪಂಡಿತರ ಪ್ರಕಾರ ಮನೆಯ ಮಂದಿರದಲ್ಲಿ ಕೇವಲ ದೇವರ ಸೌಮ್ಯ ಮುದ್ರೆಯ ವಿಗ್ರಹಗಳಿರಬೇಕು. ಉಗ್ರ ಸ್ವರೂಪಿ ದೇವರ ಮೂರ್ತಿ ಮನೆಯಲ್ಲಿಡುವುದು ಶ್ರೇಯಸ್ಕರ ಅಲ್ಲ. ಇದೇ ಕಾರಣಕ್ಕೆ ತಾಂಡವ ಆಡುವ ನಟರಾಜ (Nataraja) ಭಂಗಿಯ ರುದ್ರ ಮೂರ್ತಿ, ಮಹಾಕಾಳಿಯ (Mahakali) ಸ್ವರೂಪ ತಾಳಿರುವ ದುರ್ಗೆಯ ಮೂರ್ತಿಯನ್ನೂ ಕೂಡಾ ಮನೆಯ ಮಂದಿರದಲ್ಲಿಡಬಾರದು ಎನ್ನಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News