Vastu Tips For Diwali: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ದೀಪಾವಳಿಗೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ

Vastu Tips For Diwali: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಮನೆಯಲ್ಲಿನ ಅಶುಭ ವಸ್ತುಗಳು ಇಷ್ಟವಾಗುವುದಿಲ್ಲ. ಅಶುಭಗಳಿರುವ ಮನೆಯಲ್ಲಿ ಅವಳು ವಾಸಿಸುವುದಿಲ್ಲ, ಅದಕ್ಕಾಗಿಯೇ ನೀವು ಮರೆತರೂ ಅಂತಹ ತಪ್ಪನ್ನು ಮಾಡಬಾರದು.  

Written by - Yashaswini V | Last Updated : Oct 28, 2021, 12:32 PM IST
  • ಅಶುಭ ವಸ್ತುಗಳ ಮೂಲಕ ನಕಾರಾತ್ಮಕ ಶಕ್ತಿಯು ಹರಡುತ್ತದೆ
  • ನಕಾರಾತ್ಮಕ ಶಕ್ತಿಯು ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ
  • ಅಶುಭ ವಿಷಯಗಳು ಮನೆಯಲ್ಲಿ ಹಣದ ಕೊರತೆಯನ್ನು ಉಂಟುಮಾಡಬಹುದು
Vastu Tips For Diwali: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ದೀಪಾವಳಿಗೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ title=
Vastu Tips For Money

Vastu Tips For Diwali: ಎಲ್ಲೆಡೆ ಈಗ ದೀಪಾವಳಿ ಸಿದ್ಧತೆ ಆರಂಭವಾಗಿದೆ. ದೀಪಾವಳಿಗೆ ಮುನ್ನ ಜನರು ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಹೆಚ್ಚಿನ ಜನರು ದೀಪಾವಳಿಯ ಮೊದಲು ತಮ್ಮ ಮನೆಗೆ ಬಣ್ಣ ಹಚ್ಚುತ್ತಾರೆ. ಆದರೆ ದೀಪಾವಳಿಯ ಸ್ವಚ್ಛತೆಯಲ್ಲಿ ಮನೆಯಿಂದ ಕೆಲವು ವಸ್ತುಗಳನ್ನು ತೆಗೆಯುವುದು ಬಹಳ ಮುಖ್ಯ ಎಂದು ನಿಮಗೆ ತಿಳಿದಿದೆಯೇ. 

ವಾಸ್ತವವಾಗಿ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ (Goddess Lakshmi) ಮನೆಯಲ್ಲಿನ ಅಶುಭ ವಸ್ತುಗಳು ಇಷ್ಟವಾಗುವುದಿಲ್ಲ. ಅಶುಭಗಳಿರುವ ಮನೆಯಲ್ಲಿ ಅವಳು ವಾಸಿಸುವುದಿಲ್ಲ, ಆ ಮನೆಯಲ್ಲಿ ಹಣದ ಕೊರತೆ ಮತ್ತು ಬಡತನ ಮನೆ ಮಾಡುತ್ತದೆ. ಅದಕ್ಕಾಗಿಯೇ ನೀವು ಮರೆತರೂ ಅಂತಹ ತಪ್ಪನ್ನು ಮಾಡಬಾರದು. ದೀಪಾವಳಿಯ ಮೊದಲು ಮನೆಯಿಂದ ಯಾವ ಅಶುಭ ವಸ್ತುಗಳನ್ನು ತೆಗೆದುಹಾಕಬೇಕು ಎಂದು ತಿಳಿಯೋಣ.

ಇದನ್ನೂ ಓದಿ- Wall Clock Vastu: ಗೋಡೆ ಗಡಿಯಾರದ ಬಗ್ಗೆ ಎಂದಿಗೂ ಈ ತಪ್ಪುಗಳು ಆಗದಂತೆ ನಿಗಾವಹಿಸಿ

ಕೆಲಸ ಮಾಡದ ಗಡಿಯಾರವನ್ನು ಮನೆಯಿಂದ ಹೊರಹಾಕಿ:
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ನಿಲ್ಲಿಸಿದ ಗಡಿಯಾರವನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಚಾಲನೆಯಲ್ಲಿರುವ ಗಡಿಯಾರವು ಸಂತೋಷ ಮತ್ತು ಪ್ರಗತಿಯ ಸಂಕೇತವಾಗಿದೆ. ನಿಮ್ಮ ಮನೆಯಲ್ಲಿ ಕೆಲಸ ಮಾಡದ ಅಥವಾ ಮುರಿದ ಗಡಿಯಾರವಿದ್ದರೆ, ದೀಪಾವಳಿಯ ಮೊದಲು ಅದನ್ನು ಮನೆಯಿಂದ ತೆಗೆದುಹಾಕಿ.

ಮುರಿದ ಪೀಠೋಪಕರಣಗಳನ್ನು ಮನೆಯಲ್ಲಿ ಇಡಬೇಡಿ:
ವಾಸ್ತು (Vastu) ಪ್ರಕಾರ ಮುರಿದ ಪೀಠೋಪಕರಣಗಳನ್ನು ಮನೆಯಲ್ಲಿ ಇಡುವುದು ಅಶುಭ. ಇದು ಮನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ಟೇಬಲ್, ಕುರ್ಚಿ ಅಥವಾ ಹಾಸಿಗೆ ಮುರಿದಿದ್ದರೆ, ಅದನ್ನು ಮನೆಯಿಂದ ಹೊರಗೆ ಎಸೆಯಿರಿ. ಇದಲ್ಲದೆ, ಮನೆಯ ಪೀಠೋಪಕರಣಗಳು ಯಾವಾಗಲೂ ಪರಿಪೂರ್ಣ ಸ್ಥಿತಿಯಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ.

ತೂತಾದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ಅಶುಭ:
ಒಡೆದ ಅಥವಾ ತೂತಾದ ಪಾತ್ರೆಗಳನ್ನು ಮನೆಯಲ್ಲಿ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ತುಂಬಾ ಅಶುಭ. ನಿಮ್ಮ ಮನೆಯಲ್ಲಿಯೂ ಇಂತಹ ಪಾತ್ರೆಗಳಿದ್ದರೆ ದೀಪಾವಳಿಯ ಮೊದಲು ಅವುಗಳನ್ನು ತೆಗೆದುಹಾಕಿ. 

ಇದನ್ನೂ ಓದಿ- Vastu Tips for Unmarried People: ಅವಿವಾಹಿತರು ಅಪ್ಪಿತಪ್ಪಿಯೂ ತಮ್ಮ ಕೋಣೆಯಲ್ಲಿ ಈ ವಸ್ತುವನ್ನು ಇಡಲೇಬಾರದು

ಒಡೆದ ವಿಗ್ರಹಗಳನ್ನು ಮನೆಯಲ್ಲಿ ಇಡಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ ಒಡೆದ ವಿಗ್ರಹವನ್ನು ಮನೆಯಲ್ಲಿ ಇಡಬೇಡಿ. ದೀಪಾವಳಿಗೂ ಮುನ್ನ ನಿಮ್ಮ ಮನೆಯಲ್ಲಿ ಇಟ್ಟಿರುವ ದೇವರ ವಿಗ್ರಹ ಒಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಯಾವುದಾದರೂ ವಿಗ್ರಹ ಬಿನ್ನವಾಗಿದ್ದರೆ ಅದನ್ನು ತೆಗೆದು ಹೊಸ ದೇವರ ಮೂರ್ತಿಯನ್ನು ಮನೆಯಲ್ಲಿ ಸ್ಥಾಪಿಸಿ. ಇದರಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ.

ಒಡೆದ ಗಾಜನ್ನು ಮನೆಯಲ್ಲಿ ಇಡಬೇಡಿ:
ಒಡೆದ ಗಾಜನ್ನು ಮನೆಯಲ್ಲಿ ಇಡುವುದು ಕೂಡ ತುಂಬಾ ಅಶುಭ. ನಿಮ್ಮ ಮನೆಯಲ್ಲಿ ಒಡೆದ ಬಲ್ಬ್, ಒಡೆದ ಕನ್ನಡಿ ಮತ್ತು ಯಾವುದೇ ಒಡೆದ ಗಾಜಿನ ವಸ್ತುಗಳು ಇದ್ದರೆ, ತಕ್ಷಣ ಅದನ್ನು ತೆಗೆದುಹಾಕಿ. ಒಡೆದ ಗಾಜು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ.

ಹರಿದ ಶೂ ಮತ್ತು ಚಪ್ಪಲಿಗಳನ್ನು ಮನೆಯಲ್ಲಿ ಇಡಬೇಡಿ:
ಈ ಬಾರಿ ದೀಪಾವಳಿಯ ಸ್ವಚ್ಛತೆಯಲ್ಲಿ ಮನೆಯಲ್ಲಿ ಇಟ್ಟಿರುವ ಹರಿದ ಶೂ ಮತ್ತು ಚಪ್ಪಲಿಗಳನ್ನು ಹೊರಗೆ ಎಸೆಯಿರಿ. ಹರಿದ ಚಪ್ಪಲಿ ಮತ್ತು ಬೂಟುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News