Kalki 2898 AD: ಆರನೇ ದಿನಕ್ಕೆ ಸಪ್ಪೆಯಾಯ್ತು ಕಲ್ಕಿ ಬಾಕ್ಸ್‌ ಆಫೀಸ್‌ ಕಲೆಕ್ಷನ್..!

Kalki 2898: ರಿಲೀಸ್‌ ಆದಾಗಿನಿಂದಲೂ ತನ್ನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಮೂಲಕ ಸದ್ದು ಮಾಡುತ್ತಿರುವ ಕಲ್ಕಿ ಸಿನಿಮಾ ಆರನೇ ದಿನದ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ.   

Written by - Zee Kannada News Desk | Last Updated : Jul 3, 2024, 10:16 AM IST
  • ಕಲ್ಕಿ 2898 AD ಚಿತ್ರದ ಆರನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತಷ್ಟು ಕಡಿಮೆಯಾಗಿದೆ.
  • ಕಲ್ಕಿ 2898 ಎಡಿ ಚಲನಚಿತ್ರವು ಆರು ದಿನಗಳೊಳಗೆ ಸಿನಿಮಾದ ಒಟ್ಟು ಬಜೆಟ್ ರೂ.600 ಕೋಟಿಗಳನ್ನು ದಾಟಿ ಸೌಂಡ್‌ ಮಾಡುತ್ತಿದೆ.
  • ಸೋಮವಾರ, ಕಲೆಕ್ಷನ್‌ನಲ್ಲಿ ಅರ್ಧದಷ್ಟು ಕಡಿಮೆಯಾಗಿದ್ದು, ಮಂಗಳವಾರ ಶೇಕಡಾ 18.5 %ಕಡಿಮೆಯಾಗಿದೆ.
Kalki 2898 AD: ಆರನೇ ದಿನಕ್ಕೆ ಸಪ್ಪೆಯಾಯ್ತು ಕಲ್ಕಿ ಬಾಕ್ಸ್‌ ಆಫೀಸ್‌ ಕಲೆಕ್ಷನ್..! title=

Kalki 2898: ರಿಲೀಸ್‌ ಆದಾಗಿನಿಂದಲೂ ತನ್ನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಮೂಲಕ ಸದ್ದು ಮಾಡುತ್ತಿರುವ ಕಲ್ಕಿ ಸಿನಿಮಾ ಆರನೇ ದಿನದ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ. 

ಕಲ್ಕಿ 2898 AD ಚಿತ್ರದ ಆರನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತಷ್ಟು ಕಡಿಮೆಯಾಗಿದೆ.  ವಾರದ ದಿನಗಳಲ್ಲಿಯೂ ಚಿತ್ರ ಗಮನಾರ್ಹ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು, ಈಗಾಗಲೇ ಬಜೆಟ್‌ಗಿಂತಲೂ ಹೆಚ್ಚು ದುಡ್ಡು ಬಾಚಿಕೊಂಡಿದೆ.

ಕಲ್ಕಿ 2898 ಎಡಿ ಚಲನಚಿತ್ರವು ಆರು ದಿನಗಳೊಳಗೆ ಸಿನಿಮಾದ ಒಟ್ಟು ಬಜೆಟ್ ರೂ.600 ಕೋಟಿಗಳನ್ನು ದಾಟಿ ಸೌಂಡ್‌ ಮಾಡುತ್ತಿದೆ. ಪ್ರಭಾಸ್ , ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಈ ಚಿತ್ರ ಕಳೆದ ಗುರುವಾರ, ಜೂನ್ 2 27 ರಂದು ಬಿಡುಗಡೆಯಾಗಿದೆ. ಆರನೇ ದಿನದಂದು ಭಾರತದಲ್ಲಿ ಕೇವಲ 27.85 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿ ಸಂಸ್ಥೆಯೊಂದು ಬಹಿರಂಗಪಡಿಸಿದೆ.

ಇದನ್ನೂ ಓದಿ: 

ಸೋಮವಾರ, ಕಲೆಕ್ಷನ್‌ನಲ್ಲಿ ಅರ್ಧದಷ್ಟು ಕಡಿಮೆಯಾಗಿದ್ದು,  ಮಂಗಳವಾರ ಶೇಕಡಾ  18.5 %ಕಡಿಮೆಯಾಗಿದೆ. ಇನ್ನೂ ಆರು ದಿನಗಳಲ್ಲಿ ಕೇವಲ ಭಾರತದಲ್ಲಿ ಕಲೆಕ್ಷನ್‌ ರೂ.371 ಕೋಟಿಗೆ ತಲುಪಿದೆ. ತೆಲುಗಿನಲ್ಲಿ ರೂ.11.2 ಕೋಟಿ, ಹಿಂದಿಯಲ್ಲಿ ರೂ.14 ಕೋಟಿ, ತಮಿಳಿನಲ್ಲಿ ರೂ.1.4 ಕೋಟಿ, ಮಲಯಾಳಂನಲ್ಲಿ ರೂ.1.2 ಕೋಟಿ ಹಾಗೂ ಕನ್ನಡದಲ್ಲಿ ರೂ.0.25 ಕೋಟಿ ಕಲೆಕ್ಷನ್ ಮಾಡಿದೆ. 

ಕಲ್ಕಿ 2898 ಎಡಿ ಚಿತ್ರದ ಪ್ರಚಾರದೊಂದಿಗೆ, ಈ ಚಿತ್ರವು ಭಾರತದಲ್ಲಿ ಮೊದಲ ದಿನದ ಕಲೆಕ್ಷನ್ ರೂ.95.3 ಕೋಟಿಗಳೊಂದಿಗೆ ಸಂಚಲನವನ್ನು ಸೃಷ್ಟಿಸಿತು. ಆ ನಂತರ ಎರಡನೇ ದಿನ 59.3 ಕೋಟಿ ರೂ. ಮೂರನೇ ದಿನದಲ್ಲಿ 66.2 ಕೋಟಿ ರೂಗಳನ್ನು ಸಿನಿಮಾ ತನ್ನ ಬೊಗಸೆಗೆ ಹಾಕಿಕೊಂಡಿತ್ತು. ಐದನೇ ದಿನ ಅಂದರೆ ಸೋಮವಾರ, ಜುಲೈ 02ರಂದು ಸಿನಿಮಾ ಕೇವಲ 34.15 ಕೋಟಿ ರೂ ಕಲೆಕ್ಷನ್‌ ಮಾಡಿತ್ತು. 

ಇನ್ನೂ, ಈ ಚಿತ್ರವು ಐದು ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು 625 ಕೋಟಿಯನ್ನು  ಕಲೆಕ್ಷನ್‌ ಮಾಡಿದೆ ಎಂಬುದು ಗಮನಾರ್ಹ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News