Vastu Tips: ಮನೆಯಲ್ಲಿನ ಗಣೇಶನ ವಿಗ್ರಹಕ್ಕೆ ಸಂಬಂಧಿಸಿದ ಈ ಸಂಗತಿ ನಿಮಗೆ ತಿಳಿದಿದೆಯೇ?

Vastu Tips: ಶ್ರೀಗಣೇಶನನ್ನು ವಿಘ್ನವಿನಾಶಕ ಎಂದು ಸುಮ್ಮನೆ ಯಾರು ಹೇಳುವುದಿಲ್ಲ. ಎಲ್ಲಾ ರೀತಿಯ ಸಂಕಷ್ಟಗಳ ನಿವಾರಕನಾಗಿರುವ ಶ್ರೀಗಣೇಶ ಮನೆಯಲ್ಲಿ ವಾಸ್ತುದೋಷವನ್ನು ಕೂಡ ಪರಿಹರಿಸುತ್ತಾನೆ.

Written by - Nitin Tabib | Last Updated : Sep 8, 2021, 09:42 PM IST
  • ಮನೆಯಲ್ಲಿನ ವಾಸ್ತುದೋಷ ಪರಿಹರಿಸುತ್ತಾರೆ ಶ್ರೀಗಣೇಶ.
  • ಯಾವ ದಿಕ್ಕಿನಲ್ಲಿ ಶ್ರೀಗಣೇಶನ ಭಾವಚಿತ್ರ ಲಗತ್ತಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
  • ಗಣೇಶನ ಸೊಂಡಿ ಎಡಭಾಗಕ್ಕೆ ಇರುವ ಗಣೇಶನ ವಿಗ್ರಹವನ್ನು ಮಾತ್ರ ಮನೆಯಲ್ಲಿ ಪ್ರತಿಷ್ಠಾಪಿಸಿ.
Vastu Tips: ಮನೆಯಲ್ಲಿನ ಗಣೇಶನ ವಿಗ್ರಹಕ್ಕೆ ಸಂಬಂಧಿಸಿದ ಈ ಸಂಗತಿ ನಿಮಗೆ ತಿಳಿದಿದೆಯೇ? title=
Vastu Shastra Tips(File Photo)

ನವದೆಹಲಿ: Vastu Tips - ನಮ್ಮಲ್ಲಿ ಹಲವರು ಮನೆ ನಿರ್ಮಿಸುವಾಗ ಅಥವಾ ಅದನ್ನು ನವೀಕರಿಸುವಾಗ ಅಲಂಕಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ, ಆದರೆ ವಾಸ್ತುವನ್ನು ನಿರ್ಲಕ್ಷಿಸುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ವಾಸ್ತು ಶಾಸ್ತ್ರವನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಪರಬ್ರಹ್ಮ ಸೃಷ್ಟಿಸಿದ್ದಾನೆ ಮತ್ತು ಅದನ್ನು ಮಾನವ ಕಲ್ಯಾಣಕ್ಕಾಗಿ ಮಾತ್ರ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮನೆಯ ಸದಸ್ಯರು ವಾಸ್ತುವನ್ನು ನಿರ್ಲಕ್ಷಿಸಿದರೆ ದೈಹಿಕ, ಮಾನಸಿಕ ಮತ್ತು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಶ್ರೀಗಣೇಶನನ್ನು ವಿಘ್ನವಿನಾಶಕ ಎಂದು ಹೇಳಲಾಗುತ್ತದೆ. ಅವರು ವಾಸ್ತು ದೋಶ್ ಸೇರಿದಂತೆ ಎಲ್ಲಾ ರೀತಿಯ ಅಡೆತಡೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮನೆಯೊಂದಿಗೆ ಸಂಬಂಧಿಸಿದ ವಾಸ್ತು ದೋಷಗಳನ್ನು ತೆಗೆದುಹಾಕಲು, ಗಣೇಶನ (Ganesh) ಪ್ರತಿಮೆ ಅಥವಾ ಚಿತ್ರವನ್ನು ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ದಿಕ್ಕಿನಲ್ಲಿರಲಿ ಶ್ರೀಗಣೇಶನ ಭಾವಚಿತ್ರ ಅಥವಾ ವಿಗ್ರಹ
- ವಾಸ್ತು ಶಾಸ್ತ್ರದ ಪ್ರಕಾರ, ಒಂದು ವೇಳೆ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಅದನ್ನು ತೆಗೆದುಹಾಕಲು ನೀವು ಶ್ರೀಗಣೇಶನ ವಿಗ್ರಹ ಅಥವಾ ಫೋಟೋವನ್ನು ಯಾವುದೇ ಭಾಗದಲ್ಲಿ ಹಾಕಬಹುದು.

- ಪ್ರತಿಮೆ ಅಥವಾ ಫೋಟೋವನ್ನು ಹಚ್ಚುವಾಗ ಗಣೇಶನ ಮುಖವು ದಕ್ಷಿಣ ದಿಕ್ಕಿನಲ್ಲಿ ಅಥವಾ ನೈಋತ್ಯ ಕೋನದೆಡೆ  ಇರಬಾರದು. ಹೀಗಿದ್ದರೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ-ಪ್ರಮೋಶನ್, ಹಣ ಎಲ್ಲವೂ ಸಿಗಲಿದೆ, ಈ ರಾಶಿಗಳ ಭಾಗ್ಯದ ಬಾಗಿಲು ತೆರೆಯಲಿದೆ

- ಬೇಕಾದರೆ ನೀವು ನಿಮ್ಮ ಮನೆಯಲ್ಲಿ ವಿರಾಜಮಾನನಾಗಿರುವ ಹಾಗೂ ಕಚೇರಿಯಲ್ಲಿ ನಿಂತುಕೊಂಡಿರುವ ಗಣೇಶನ ವಿಗ್ರಹ ಅಥವಾ ಭಾವಚಿತ್ರ ಬಳಸಬಹುದು.

- ಗಣೇಶನ ಪ್ರತಿಮೆ ಅಥವಾ ಚಿತ್ರವನ್ನು ಮನೆಯ ಮಧ್ಯದಲ್ಲಿ, ಈಶಾನ್ಯ ಕೋನದಲ್ಲಿ ಮತ್ತು ಪೂರ್ವದಲ್ಲಿ ಇಡುವುದು ಶುಭ. ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ಬಿಳಿ ಬಣ್ಣದ ವಿನಾಯಕನ ಪ್ರತಿಮೆಯನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ-Lal Kitab Remedies: ಗ್ರಹದೋಷ ಅಥವಾ ಅಸಾಧ್ಯ ರೋಗಗಳೆ ಆಗಿರಲಿ, ಈ ಉಪಾಯ ಅನುಸರಿಸಿದರೆ ಸಂಕಷ್ಟ ಪರಿಹಾರ

- ಗಣೇಶನ ವಿಗ್ರಹ ಅಥವಾ ಭಾವಚಿತ್ರ ಮನೆಯಲ್ಲಿ ಪ್ರತಿಷ್ಠಾಪಿಸುವಾಗ ಅವನ ಸೊಂಡಿ ಎಡಭಾಗಕ್ಕೆ ತಿರುಗಿರಲಿ ಹಾಗೂ ಅವನ ಭಾವಚಿತ್ರದಲ್ಲಿ ಮೋದಕ ಅಥವಾ ಲಾಡುಗಳ ಜೊತೆಗೆ ಮೂಷಕ ಕೂಡ ಇರಲಿ.

- ಹಾಗೆ ನೋಡಿದರೆ ಮನೆಯಲ್ಲಿ ಗಣೇಶನ ಒಂದಕ್ಕಿಂತ ಹೆಚ್ಚು ವಿಗ್ರಹಗಳಿರುವುದು ತಪ್ಪಲ್ಲ, ಆದರೆ, ಗಣೇಶನ ಪ್ರತಿಮೆ ಪ್ರತಿಷ್ಠಾಪಿಸುವಾಗ ಒಂದೇ ಜಾಗದಲ್ಲಿ ಮೂರು ಮೂರ್ತಿಗಳಿರಬಾರದು ಎಂಬುದರ ಎಚ್ಚರಿಕೆ ವಹಿಸಿ.

- ಮನೆಯ ಮುಖ್ಯದ್ವಾರದ ಮೇಲೆ ವಿನಾಹಕನ ಪ್ರತಿಮೆ ಅಥವಾ ಭಾವಚಿತ್ರ ಮನೆಯಲ್ಲಿ ಸಕಾರಾತ್ಮಕ ಉರ್ಜೆಗೆ ಕಾರಣ ಹಾಗೂ ನಕಾರಾತ್ಮಕ ಊರ್ಜೆಯನ್ನು ಮನೆಯಿಂದ ತೊಲಗಿಸುತ್ತದೆ. ಆದರೆ ಇದನ್ನು ಮಾಡುವಾಗ ಗಣೇಶನ ಮುಖ ಮನೆಯ ಹೊರಗೆ ನೋಡುವಂತೆ ಇರಬಾರದು ಎಂಬುದರ ಬಗ್ಗೆ ಗಮನಹರಿಸಿ. ಅವರ ಮುಖ ಯಾವಾಗಲು ಮನೆಯತ್ತ ನೋಡುತ್ತಿರುವಂತಿರಬೇಕು.

ಇದನ್ನೂ ಓದಿ-Clove For Skin: ಲವಂಗವನ್ನು ಈ ರೀತಿ ಬಳಸಿ ಮುಖದ ಸುಕ್ಕಿನ ಸಮಸ್ಯೆ ನಿವಾರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News