Char Dham Yatra: ಕರೋನಾ ಹಿನ್ನಲೆಯಲ್ಲಿ ಉತ್ತರಾಖಂಡ ಸರ್ಕಾರದ ಮಹತ್ವದ ನಿರ್ಧಾರ

Char Dham Yatra: ಕೊರೊನಾವೈರಸ್ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ಉತ್ತರಾಖಂಡ ಸರ್ಕಾರವು ಚಾರ್ ಧಾಮ್ ಯಾತ್ರೆಯನ್ನು ರದ್ದುಗೊಳಿಸಿದೆ. ಆದರೂ ಎಲ್ಲಾ ಧಾಮಗಳ ಬಾಗಿಲುಗಳು ನಿಗದಿತ ಸಮಯದಲ್ಲಿ ತೆರೆಯಲಿದ್ದು ಪುರೋಹಿತರಿಗೆ ಮಾತ್ರ ಪೂಜೆ ಮತ್ತು ಇತರ ಧಾರ್ಮಿಕ ವಿಧಿಗಳನ್ನು ಮಾಡಲು ಅವಕಾಶವಿರುತ್ತದೆ.

Written by - Yashaswini V | Last Updated : Apr 29, 2021, 02:25 PM IST
  • ಚಾರ್ ಧಾಮ್ ಯಾತ್ರೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ
  • ಸಾಂಕ್ರಾಮಿಕ ಸಂದರ್ಭದಲ್ಲಿ ಯಾತ್ರೆ ನಡೆಸಲು ಸಾಧ್ಯವಿಲ್ಲ- ಉತ್ತರಾಖಂಡ ಸಿಎಂ
  • ಉತ್ತರಾಖಂಡದಲ್ಲಿ 24 ಗಂಟೆಗಳಲ್ಲಿ 6054 ಹೊಸ ಪ್ರಕರಣ ದಾಖಲು
Char Dham Yatra: ಕರೋನಾ ಹಿನ್ನಲೆಯಲ್ಲಿ ಉತ್ತರಾಖಂಡ ಸರ್ಕಾರದ ಮಹತ್ವದ ನಿರ್ಧಾರ title=
Chardham Yatra

ಡೆಹ್ರಾಡೂನ್: ದೇಶಾದ್ಯಂತ ಕರೋನವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ ಮತ್ತು ದೈನಂದಿನ ದಾಖಲೆ ಮಟ್ಟದಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳು ಪ್ರಾರಂಭವಾಗುವ ಚಾರ್ ಧಾಮ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ನಿಗದಿತ ಸಮಯದಲ್ಲಿ ತೆರೆಯಲಿವೆ ಚಾರ್ ಧಾಮ್:
ಗುರುವಾರ ಡೆಹ್ರಾಡೂನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರಾಖಂಡ (Uttarkhand) ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್, 'ಸಾಂಕ್ರಾಮಿಕ ಸಂದರ್ಭದಲ್ಲಿ ಯಾತ್ರೆ ನಡೆಸಲು ಸಾಧ್ಯವಿಲ್ಲ. ಚಾರ್ ಧಾಮ್ ಎಂದು ಕರೆಯಲ್ಪಡುವ ನಾಲ್ಕು ಹಿಮಾಲಯನ್ ದೇಗುಲಗಳ ಬಾಗಿಲುಗಳು ತಮ್ಮ ನಿಗದಿತ ಸಮಯದಲ್ಲಿ ತೆರೆಯಲ್ಪಡುತ್ತವೆ, ಆದರೆ ಪುರೋಹಿತರಿಗೆ ಮಾತ್ರ ಪೂಜೆ ಮತ್ತು ಇತರ ಧಾರ್ಮಿಕ ವಿಧಿಗಳನ್ನು ಮಾಡಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- Corona Patient Diet: Corona ರೋಗಿಗಳು ಅಪ್ಪಿ-ತಪ್ಪಿಯೂ ಇಂತಹ ಆಹಾರ ಸೇವಿಸಬೇಡಿ, ನಿಮ್ಮ ಡಯಟ್ ಹೀಗಿರಲಿ

ಜನಸಾಮಾನ್ಯರಿಗೆ ಪ್ರಯಾಣ ನಿಷೇಧ:
ಈ ಕುರಿತಂತೆ ಇನ್ನಷ್ಟು ಮಾಹಿತಿ ನೀಡಿರುವ ಸಿಎಂ ತಿರತ್ ಸಿಂಗ್ ರಾವತ್, 'ವೇಗವಾಗಿ ಬೆಳೆಯುತ್ತಿರುವ ಕೋವಿಡ್-19 (Covid 19) ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಚಾರ್ ಧಾಮ್ ಯಾತ್ರೆಯನ್ನು ಪ್ರಸ್ತುತ ರದ್ದುಗೊಳಿಸಲಾಗುತ್ತಿದೆ. ಚಾರ್ ಧಾಮ್ ಗಳಲ್ಲಿ ಪುರೋಹಿತರು ಮಾತ್ರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಅವಕಾಶ ಕಲ್ಪಿಸಲಾಗಿದ್ದು ಜನಸಾಮಾನ್ಯರಿಗೆ ಇಲ್ಲಿಗೆ ಭೇಟಿ ನೀಡಲು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಉತ್ತರಾಖಂಡದಲ್ಲಿ 24 ಗಂಟೆಗಳಲ್ಲಿ 6054 ಹೊಸ ಪ್ರಕರಣಗಳು:
ದೇಶದ ಇತರ ಭಾಗಗಳಂತೆ, ಉತ್ತರಾಖಂಡದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ ಮತ್ತು ಬುಧವಾರ ಸಹ ಉತ್ತರಾಖಂಡದಲ್ಲಿ 6054 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಕಳೆದ 24 ಗಂಟೆಗಳಲ್ಲಿ 108 ಜನರು ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ- Thursday Remedies: ನೀವು ಗುರುವಾರ ಉಪವಾಸ ಮಾಡುತ್ತಿದ್ದರೆ ಈ ನಿಯಮಗಳನ್ನು ಅನುಸರಿಸಿ

ನಾಲ್ಕು ಧಾಮದ ಬಾಗಿಲು ಯಾವಾಗ ತೆರೆಯುತ್ತದೆ:
ಮೇ 14 ರಂದು ಅಕ್ಷಯ ತೃತೀಯ ಪವಿತ್ರ ಹಬ್ಬದಂದು ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿ ಮತ್ತು ಯಮುನೋತ್ರಿ ಕಣಿವೆಗಳು ತೆರೆದುಕೊಳ್ಳಲಿವೆ. ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ಕೇದಾರನಾಥದ ಬಾಗಿಲು ಮೇ 17 ರಂದು ತೆರೆಯಲಾಗುವುದು, ಚಮೋಲಿ ಜಿಲ್ಲೆಯ ಬದ್ರಿನಾಥ್ ಅವರ ಬಾಗಿಲುಗಳನ್ನು ಮೇ 18 ರಂದು ತೆರೆಯಲಾಗುವುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News