Urfi Javed: ಕಿವಿಯಲ್ಲಿ ನಿಂತ ಉರ್ಫಿ ಮಾನ!! “ಹಣ್ಣು ಬೇಕೆಂದು ತಿಂದುಬಿಟ್ಟೀರಾ… ಹುಷಾರ್!”

Urfi Javed Latest Photo: ಉರ್ಫಿ ಜಾವೇದ್ ಹೆಸರು ಕೇಳಿದಾಕ್ಷಣ ನೆನಪಾಗೋದು ಆಕೆಯ ಡ್ರೆಸ್ಸಿಂಗ್ ಸ್ಟೈಲ್. ಇಂದು ಮತ್ತೆ ಅಂಥಹದ್ದೇ ಡ್ರೆಸ್ ನಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಉರ್ಫಿ ಸಖತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Written by - Bhavishya Shetty | Last Updated : Mar 21, 2023, 09:45 PM IST
    • ಕಿವಿ ಹಣ್ಣಿನಲ್ಲಿ ಡ್ರೆಸ್ ತಯಾರಿಸಿಕೊಂಡು ಕ್ಯಾಮರಾ ಕಣ್ಣಿಗೆ ಫೋಸ್ ನೀಡಿದ್ದಾರೆ ಉರ್ಫಿ.
    • ಉರ್ಫಿ ಜಾವೇದ್ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
    • ಕಪ್ಪು ಪ್ಯಾಂಟ್‌ ನೊಂದಿಗೆ ಕಿವಿ ಹಣ್ಣನ್ನು ನೇಯ್ದು ತಯಾರಿಸಿದ ಬಟ್ಟೆಯನ್ನು ಧರಿಸಿದ್ದಾರೆ.
Urfi Javed: ಕಿವಿಯಲ್ಲಿ ನಿಂತ ಉರ್ಫಿ ಮಾನ!! “ಹಣ್ಣು ಬೇಕೆಂದು ತಿಂದುಬಿಟ್ಟೀರಾ… ಹುಷಾರ್!”  title=
Urfi Javed

Urfi Javed Kiwi Fruit Dress: ಉರ್ಫಿ ಜಾವೇದ್ ಅವರ ಕಲ್ಪನೆಯು ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರ ಕ್ರಿಯೆಟಿವಿಟಿಗೆ ಅವರೇ ಸಾಟಿ ಎನ್ನಬಹುದು. ಇದೀಗ ಮತ್ತೆ ಹೊಸ ಅವತಾರದೊಂದಿಗೆ ಫೋಟೋಶೂಟ್ ಮಾಡಿಸಿಕೊಂಡ ಉರ್ಫಿ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

ಇದನ್ನೂ ಓದಿ: Baby Name: ಈ ದಿನ ಜನಿಸಿದ ಮಕ್ಕಳಿಗೆ ಸೂರ್ಯದೇವನ ಈ ಅಪರೂಪದ ಹೆಸರನ್ನು ಇಡಿ: ಅವರ ಭವಿಷ್ಯವೂ ಪ್ರಕಾಶಿಸುತ್ತದೆ!

ಬಿದಿರಿನ ಕೋಲುಗಳಿಂದ ಮಾಡಿದ ಉಡುಪು, ಗೋಣಿಚೀಲದ ತುಂಡುಡುಗೆ, ಪೈಪ್ ನಲ್ಲಿ ತಯಾರಿಸಿದ ಡ್ರೆಸ್ ಹೀಗೆ ಹತ್ತು ಹಲವು ಕ್ರಿಯೇಟಿವ್ ಡ್ರೆಸ್ಸಿಂಗ್ ಮಾಡುತ್ತಿರುತ್ತಾರೆ. ಇದೀಗ ಕಿವಿ ಹಣ್ಣಿನಲ್ಲಿ ಡ್ರೆಸ್ ತಯಾರಿಸಿಕೊಂಡು ಕ್ಯಾಮರಾ ಕಣ್ಣಿಗೆ ಫೋಸ್ ನೀಡಿದ್ದಾರೆ ಉರ್ಫಿ.

ಉರ್ಫಿ ಜಾವೇದ್ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಕಿವಿ ಹಣ್ಣಿನಿಂದ ಮಾಡಿದ ಟಾಪ್‌ ಧರಿಸಿದ್ದಾರೆ. ಕಪ್ಪು ಪ್ಯಾಂಟ್‌ ನೊಂದಿಗೆ ಕಿವಿ ಹಣ್ಣನ್ನು ನೇಯ್ದು ತಯಾರಿಸಿದ ಬಟ್ಟೆಯನ್ನು ಧರಿಸಿದ್ದಾರೆ. ಈ ಟಾಪ್ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ಕೆಲವು ನೆಟಿಜನ್‌ ಗಳು ಉರ್ಫಿ ಕ್ರಿಯೇಟಿವ್ ಬಗ್ಗೆ ಶ್ಲಾಘಿಸಿದರೆ, ಇನ್ನೂ ಕೆಲವರು ಈ ಹೊಸ ಪ್ರಯತ್ನಕ್ಕಾಗಿ ಆಕೆಯನ್ನು ಟ್ರೋಲ್ ಮಾಡಿದ್ದಾರೆ. ಕೇವಲ ಒಂದು ಫ್ಯಾಶನ್ ಗಾಗಿ ಉರ್ಫಿ ಆಹಾರವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Uorfi (@urf7i)

 

ಒಬ್ಬರು ಹೀಗೆ ಬರೆದಿದ್ದಾರೆ, "ಇದು ಕ್ರಿಯೆಟಿವಿಟಿ ಎಂದು ನೀವು ಭಾವಿಸುತ್ತೀರಾ? ಇಲ್ಲ… ಇದು ಅತ್ಯಂತ ಕೆಟ್ಟ ಪ್ರವೃತ್ತಿ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ‘ಕ್ರಿಯೆಟಿವಿಟಿ ಕ್ವೀನ್’ ಎಂದು ಕರೆದಿದ್ದಾರೆ. ಇನ್ನು ಉರ್ಫಿ ತನ್ನ ಕ್ರಿಯೇಟಿವ್ ಉಡುಪಿನಿಂದ ಎಲ್ಲರನ್ನೂ ಬೆರಗುಗೊಳಿಸಿದ್ದು ಇದೇ ಮೊದಲಲ್ಲ.

ಮತ್ತೊಬ್ಬರು “ದೇವಿ ನಿನ್ನಿಂದ ಏನನ್ನೂ ಮಾಡಲು ಸಾಧ್ಯ” ಎಂದು ಬರೆದುಕೊಂಡರೆ, ಹಣ್ಣು ಬೇಕುಂತಾ ಕೈ ಹಾಕಿ ತಿಂದೀರಾ ಹುಷಾರ್ ಅಂತ ತಮಾಷೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: KBKJ ಯ 3 ನೇ ಹಾಡು ರಿಲೀಸ್.. ಹೇಗಿದೆ ನೋಡಿ ಸಲ್ಲು ಭಾಯ್‌ ರೋಮ್ಯಾಂಟಿಕ್‌ ಆಕ್ಟಿಂಗ್‌ ...!

ಈ ತಿಂಗಳ ಆರಂಭದಲ್ಲಿ ಬಿದಿರಿನ ಕಡ್ಡಿಗಳಿಂದ ಮಾಡಿದ ಡ್ರೆಸ್ ಧರಿಸಿ ಫೋಟೋ ತೆಗೆಸಿಕೊಂಡಿದ್ದರು. ಉರ್ಫಿಯ ಟೋಕ್ರಿ ಉಡುಗೆಯು ಬಿರುಗಾಳಿಯಂತೆ ಇಂಟರ್ನೆಟ್ನಲ್ಲಿ ಹರಿದಾಡಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News