ಶನಿಯ ರಾಶಿಯಲ್ಲಿ ರೂಪುಗೊಳ್ಳಲಿದೆ ವಿನಾಶಕಾರಿ ಯೋಗ, ಜಾಗರೂಕರಾಗಿರಬೇಕು ಈ 4 ರಾಶಿಯವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2022ರಲ್ಲಿ ಈ ರಾಶಿಯಲ್ಲಿ ಮೂರು ಗ್ರಹಗಳು ಸೇರುತ್ತವೆ. ಮಕರ ರಾಶಿಗೆ ಸೂರ್ಯ, ಶನಿ, ಬುಧ ಗ್ರಹದ ಆಗಮನವಾಗುವುದರಿಂದ ಇಲ್ಲಿ ತ್ರಿಗ್ರಾಹಿ ಯೋಗ ಉಂಟಾಗುತ್ತದೆ.  

Written by - Ranjitha R K | Last Updated : Dec 22, 2021, 05:12 PM IST
  • ಮಕರ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ
  • ಸೂರ್ಯ, ಶನಿ ಮತ್ತು ಬುಧರಿಂದ ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ
  • ತ್ರಿಗ್ರಾಹಿ ಯೋಗದಲ್ಲಿ ಮೂರು ಗ್ರಹಗಳು ಒಟ್ಟಿಗೆ ಸೇರುತ್ತವೆ
ಶನಿಯ ರಾಶಿಯಲ್ಲಿ ರೂಪುಗೊಳ್ಳಲಿದೆ ವಿನಾಶಕಾರಿ ಯೋಗ, ಜಾಗರೂಕರಾಗಿರಬೇಕು ಈ 4 ರಾಶಿಯವರು  title=
ಮಕರ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ (file photo)

ನವದೆಹಲಿ : ಈ ಸಮಯದಲ್ಲಿ ಮಕರ ರಾಶಿಯಲ್ಲಿ ಶನಿಯ ಸಾಡೇಸಾತಿ (Shani sadesati)ನಡೆಯುತ್ತಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 2022ರಲ್ಲಿ ಈ ರಾಶಿಯಲ್ಲಿ ಮೂರು ಗ್ರಹಗಳು ಸೇರುತ್ತವೆ. ಮಕರ ರಾಶಿಗೆ ಸೂರ್ಯ, ಶನಿ, ಬುಧ ಗ್ರಹದ ಆಗಮನವಾಗುವುದರಿಂದ ಇಲ್ಲಿ ತ್ರಿಗ್ರಾಹಿ ಯೋಗ (Trigrahi Yoga) ಉಂಟಾಗುತ್ತದೆ. ಈಗಾಗಲೇ ಮಕರ ರಾಶಿಯಲ್ಲಿ ಶನಿದೇವನಿದ್ದಾನೆ. ಜನವರಿ 5 ರಂದು ಬುಧ ಮತ್ತು ಜನವರಿ 14 ರಂದು ಸೂರ್ಯನೂ ಈ ರಾಶಿಗೆ ಪ್ರವೇಶಿಸಲಿದ್ದಾನೆ. ಈ ತ್ರಿಗ್ರಾಹಿ ಯೋಗವು 4 ರಾಶಿಚಕ್ರದ (Zodiac sign) ಚಿಹ್ನೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದಾಗಿ ಈ ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ವಿಶೇಷ ಬದಲಾವಣೆಯು ಸಂಭವಿಸಲಿದೆ. ಇನ್ನು ಕೆಲವು ರಾಶಿಯವರು ತ್ರಿಗ್ರಾಹಿ ಯೋಗದಿಂದ ಜಾಗರೂಕರಾಗಿರಬೇಕು

ಕನ್ಯಾರಾಶಿ :
ಕನ್ಯಾ ರಾಶಿಯ (Vigro) ಜನರು ತಮ್ಮ ಆಹಾರದಲ್ಲಿ ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಇದಲ್ಲದೇ ಹಣದ ವ್ಯವಹಾರದಲ್ಲಿಯೂ ಜಾಗರೂಕರಾಗಿರಬೇಕು. ಅಲ್ಲದೆ, ಚಾಲನೆ ಮಾಡುವಾಗ ವಿಶೇಷ ಗಮನ ಬೇಕಾಗುತ್ತದೆ. ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಅದೇ ಸಮಯದಲ್ಲಿ, ಕುಟುಂಬದಲ್ಲಿನ ಪೋಷಕರ ಆರೋಗ್ಯದ (Health) ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ.  

ಇದನ್ನೂ ಓದಿ : ಶನಿ ಸಾಡೇಸಾತಿ ಮುಕ್ತಿಯಿಂದ ಯಾವಾಗ ಬದಲಾಗಲಿದೆ ಈ ರಾಶಿಯ ಅದೃಷ್ಟ

ತುಲಾ ರಾಶಿ :
ಈ ತ್ರಿಗ್ರಾಹಿ ಯೋಗವು ತುಲಾ ರಾಶಿಯವರಿಗೆ (Libra) ಕಷ್ಟವನ್ನು ತರುತ್ತದೆ. ಈ ತ್ರಿಗ್ರಾಹಿ ಯೋಗದ (trigrahi yoga) ಅಶುಭ ಪರಿಣಾಮದಿಂದ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಸಂಗಾತಿಯಿಂದ ದೂರವಿರಬೇಕಾಗಬಹುದು. ಬಹಳ ಎಚ್ಚರಿಕೆಯಿಂದ ಇರಬೇಕು. ಪ್ರೀತಿಯ ಜೀವನದಲ್ಲೂ ಸಮಸ್ಯೆಗಳಿರಬಹುದು. 

ಧನು ರಾಶಿ :
ಈ ತ್ರಿಗ್ರಾಹಿ ಯೋಗದಿಂದ ಧನು ರಾಶಿಯವರ (Sagitarius) ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆದರೂ, ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿರುತ್ತದೆ. ಮತ್ತೊಂದೆಡೆ, ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಕುಟುಂಬದಲ್ಲಿನ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು. 

ಇದನ್ನೂ ಓದಿ : ಹೊಸ ವರ್ಷದಲ್ಲಿ ಈ ರಾಶಿಯವರ ಪ್ರತೀ ಕನಸು ನನಸಾಗಲಿದೆ, ಎಲ್ಲಾ ಕ್ಷೇತ್ರದಲ್ಲೂ ಸಿಗಲಿದೆ ಯಶಸ್ಸು

ಮಕರ ರಾಶಿ :
ತ್ರಿಗ್ರಾಹಿ ಯೋಗದಿಂದಾಗಿ ಮಕರ ರಾಶಿಯವರ (capricorn) ಜೀವನದಲ್ಲಿ ಕಷ್ಟದ ಸಮಯಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು, ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ವಿದ್ಯಾರ್ಥಿ ವರ್ಗ ಕಲಿಕೆಯಿಂದ ವಿಚಲಿತರಾಗಬಹುದು. ಈ ತ್ರಿಗ್ರಾಹಿ ಯೋಗದ ಸಮಯದಲ್ಲಿ,ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಇದಲ್ಲದೆ, ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News