ಮುಂದಿನ ಒಂದು ವರ್ಷದವರೆಗೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಗುರು ಹರಿಸಲಿದ್ದಾನೆ ಕೃಪಾ ದೃಷ್ಟಿ

ಮುಂದಿನ ಒಂದು ವರ್ಷ ಅಂದರೆ ಏಪ್ರಿಲ್ 2023 ರವರೆಗೆ ಗುರು ಮತ್ತೆ ರಾಶಿ ಪರಿವರ್ತನೆ ಮಾಡಿಕೊಳ್ಳುವುದಿಲ್ಲ. ಇನ್ನು ಗುರು ಸ್ಥಾನ ಪಲ್ಲಟವಾಗುವುದು 2023 ಏಪ್ರಿಲ್ ನಲ್ಲಿ. ಈ ಒಂದು ವರ್ಷ ಗುರು ಐದು  ರಾಶಿಯವರ ಜೀವನವನ್ನು ಬೆಳಗಲಿದ್ದಾನೆ.

Written by - Ranjitha R K | Last Updated : May 20, 2022, 08:40 AM IST
  • ನವಗ್ರಹಗಳ ಪೈಕಿ ಗುರುವಿಗೆ ವಿಶೇಷ ಸ್ಥಾನವಿದೆ.
  • ಧನು ರಾಶಿ ಮತ್ತು ಮೀನ ರಾಶಿಗಳ ಅಧಿಪತಿ ಗುರು.
  • ಈ ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಗುರು
ಮುಂದಿನ ಒಂದು ವರ್ಷದವರೆಗೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಗುರು ಹರಿಸಲಿದ್ದಾನೆ ಕೃಪಾ ದೃಷ್ಟಿ    title=
Guru transit effect (file photo)

ಬೆಂಗಳೂರು : ನವಗ್ರಹಗಳ ಪೈಕಿ ಗುರುವಿಗೆ ವಿಶೇಷ ಸ್ಥಾನವಿದೆ. ಧನು ರಾಶಿ ಮತ್ತು ಮೀನ ರಾಶಿಗಳ ಅಧಿಪತಿ ಗುರು. ಗುರುವನ್ನು ಕರ್ಕಾಟಕದಲ್ಲಿ ಉತ್ಕೃಷ್ಟ ಎಂದು ಹೇಳಲಾಗುತ್ತದೆ. ಇನ್ನು ಮಕರ ರಾಶಿಯಲ್ಲಿ ದುರ್ಬಲವಾಗಿರುತ್ತಾನೆ. ಗುರುವು ಯಾರ ಜಾತಕದಲ್ಲಿ  ಚಂದ್ರನೊಂದಿಗೆ ಇರುತ್ತಾನೆಯೋ ಆ ಸಂದರ್ಭದಲ್ಲಿ ಗುರುವಿನ ಬಲ ಹೆಚ್ಚುತ್ತದೆ.  ಇದಲ್ಲದೇ ಗುರುವು ಮಂಗಳನೊಂದಿಗೆ ಸೇರಿದರೆ ಅವರ ಶಕ್ತಿ ದ್ವಿಗುಣವಾಗುತ್ತದೆ. ದೇವಗುರು ಬೃಹಸ್ಪತಿ ಏಪ್ರಿಲ್ 23 ರಂದು ತನ್ನ ರಾಶಿಚಕ್ರವನ್ನು ಬದಲಾಯಿಸಿದ್ದಾರೆ. ಮುಂದಿನ ಒಂದು ವರ್ಷ ಅಂದರೆ ಏಪ್ರಿಲ್ 2023 ರವರೆಗೆ ಗುರು ಮತ್ತೆ ರಾಶಿ ಪರಿವರ್ತನೆ ಮಾಡಿಕೊಳ್ಳುವುದಿಲ್ಲ. ಇನ್ನು ಗುರು  ಸ್ಥಾನ ಪಲ್ಲಟವಾಗುವುದು 2023 ಏಪ್ರಿಲ್ ನಲ್ಲಿ. ಈ ಒಂದು ವರ್ಷ ಗುರು ಐದು  ರಾಶಿಯವರ ಜೀವನವನ್ನು ಬೆಳಗಲಿದ್ದಾನೆ. ಈ ರಾಶಿಯವರು ಹಿಡಿದ ಎಲ್ಲ ಕೆಲಸ ಕಾರ್ಯಗಳಲ್ಲಿ ಜಯ ತಂದು ಕೊಡುತ್ತಾನೆ. 

ಮುಂದಿನ ಒಂದು ವರ್ಷದವರೆಗೆ ಅಂದರೆ 2023ರವರೆಗೆ ಈ ಐದು ರಾಶಿಯವರ ಮೇಲೆ ಗುರು ತನ್ನ ಕೃಪಾ ದೃಷ್ಟಿ ಹರಿಸಲಿದ್ದಾನೆ. 
ವೃಷಭ ರಾಶಿ : ಗುರುವು ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಬಹಳಷ್ಟು ಲಾಭಗಳನ್ನು ನೀಡಲಿದ್ದಾನೆ. ಈ ಸಮಯದಲ್ಲಿ, ಯಾವುದೇ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು, ಯಶಸ್ಸು ಪಡೆಯುತ್ತಾರೆ. ಆದರೆ ನೆನಪಿರಲಿ ಇಲ್ಲಿ ನಿಮ್ಮ ಶ್ರಮದ ಅಗತ್ಯವೂ ಇರುತ್ತದೆ. ಯಾವುದೇ ಕೆಲಸ ಮಾಡುವಾಗ ನಮ್ಮ ಗ್ರಹ ಬಲ ಚೆನ್ನಾಗಿದ್ದು, ಅದರಲ್ಲಿ ನಮ್ಮ ಪರಿಶ್ರಮವೂ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ. 

ಇದನ್ನೂ ಓದಿ : Friday Remedies: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಶುಕ್ರವಾರ ಪೂಜೆಯಲ್ಲಿ ಈ ಕೆಲಸ ಮಾಡಿ

ಮಿಥುನ ರಾಶಿ : ಈ ರಾಶಿಯವರಿಗೆ ಗುರು ಗ್ರಹವು ತುಂಬಾ ಶುಭ ಸೂಚನೆಗಳನ್ನು ನೀಡುತ್ತಿದೆ. ಈ ರಾಶಿಯವರೂ ವ್ಯವಹಾರ ನಡೆಸುತ್ತಿದ್ದರೆ ಭಾರೀ ಲಾಭವಾಗಲಿದೆ. ಯಾವುದೇ ಹೊಸ ಯೋಜನೆ ಇದ್ದರೆ ಅದರಲ್ಲಿ ಹೂಡಿಕೆ ಮಾಡಬಹುದು.  

ಕನ್ಯಾ ರಾಶಿ : ಗುರುವು ಈ ಸಂದರ್ಭದಲ್ಲಿ ಕನ್ಯಾ ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತಾನೆ. ಮುಂದಿನ ಒಂದು ವರ್ಷದವರೆಗೆ, ಈ ರಾಶಿಚಕ್ರ ಚಿಹ್ನೆಯು ಶುಭ ಸುದ್ದಿಗಳನ್ನು ಪಡೆಯುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಆ ಕೆಲಸದಲ್ಲಿ ಜಯ ಸಿಗುತ್ತದೆ. 

ಇನ್ನು ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಕೂಡಾ ಮುಂದಿನ ಏಪ್ರಿಲ್ ವರೆಗಿನ ಸಮಯ ಬಹಳ ಅದ್ಭುತವಾಗಿರುತ್ತದೆ. ಈ ರಾಶಿಯವರು ಭಾರೀ ಪ್ರಗತಿ ಸಾಧಿಸುತ್ತಾರೆ. ಗುರುವಿನ ಕೃಪೆಯಿಂದ ಇವರು ಯಾವುದೇ ಕೆಲಸ ಮಾಡಬೇಕು ಎಂದಿದ್ದರೂ ಅದು ಕೈಗೂಡುತ್ತದೆ.  

ಇದನ್ನೂ ಓದಿ : Shani Dev : ಈ ರಾಶಿಯವರಿಗೆ ಶೀಘ್ರವೇ ಶನಿದೇವನಿಂದ ಪರಿಹಾರ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News