Surya Grahan 2021: ಡಿಸೆಂಬರ್ . 4ರಂದು ನಡೆಯಲಿದೆ ವರ್ಷದ ಕೊನೆಯ ಸೂರ್ಯಗ್ರಹಣ, ಯಾರ ಮೇಲೆ ಬೀರಲಿದೆ ಪ್ರಭಾವ

ಈ ವರ್ಷ ಎರಡು ಸೂರ್ಯಗ್ರಹಣ ಯೋಗ. ಮೊದಲ ಸೂರ್ಯಗ್ರಹಣವು ಜೂನ್ 10, 2021 ರಂದು ಸಂಭವಿಸಿದೆ. ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4 ರಂದು ಸಂಭವಿಸಲಿದೆ.

Written by - Ranjitha R K | Last Updated : Aug 18, 2021, 05:04 PM IST
  • ಇದು ವರ್ಷದ ಕೊನೆಯ ಗ್ರಹಣ
  • ಹಿಮ್ಮುಖ ಚಲನೆಯಲ್ಲಿ ರಾಹು-ಕೇತು ಗ್ರಹಗಳು
  • ಸೂತಕ ಅವಧಿ ಮಾನ್ಯವಾಗಿರುವುದಿಲ್ಲ
Surya Grahan 2021: ಡಿಸೆಂಬರ್ . 4ರಂದು ನಡೆಯಲಿದೆ ವರ್ಷದ ಕೊನೆಯ ಸೂರ್ಯಗ್ರಹಣ, ಯಾರ ಮೇಲೆ ಬೀರಲಿದೆ ಪ್ರಭಾವ   title=
ಇದು ವರ್ಷದ ಕೊನೆಯ ಗ್ರಹಣ (file photo)

ನವದೆಹಲಿ : ಸೂರ್ಯ ಗ್ರಹಣ (Solar eclipse) ಅಂದರೆ ಅದೊಂದು ಖಗೋಳ ಘಟನೆ. ಆದರೆ ಜ್ಯೋತಿಷ್ಯದಲ್ಲಿ ಇದಕ್ಕೆ ಭಾರೀ ಮಹತ್ವವಿದೆ.  ಗ್ರಹಣಗಳಾದಾಗ ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತದೆ.

ಈ ವರ್ಷದ ಕೊನೆಯ ಸೂರ್ಯ ಗ್ರಹಣ : 
ಈ ವರ್ಷ ಎರಡು ಸೂರ್ಯಗ್ರಹಣ (Solar eclipse) ಯೋಗ. ಮೊದಲ ಸೂರ್ಯಗ್ರಹಣವು ಜೂನ್ 10, 2021 ರಂದು ಸಂಭವಿಸಿದೆ. ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು (Surya Grahana) ಡಿಸೆಂಬರ್ 4 ರಂದು ಸಂಭವಿಸಲಿದೆ. ಆ ದಿನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನವಾಗಿರುತ್ತದೆ. ಇನ್ನೂ ಪ್ರಮುಖ ವಿಷಯವೆಂದರೆ, ಈ ಸೂರ್ಯಗ್ರಹಣದ ಸಮಯದಲ್ಲಿ, ದೊಡ್ಡ ಎರಡು ಗ್ರಹಗಳು ಅಸ್ತಂಗತವಾಗಿರುತ್ತದೆ. 

ಇದನ್ನೂ ಓದಿ : Raksha Bandhan: ನಿಮ್ಮ ಸಹೋದರನ ರಾಶಿಗೆ ಅನುಗುಣವಾಗಿ ಯಾವ ಬಣ್ಣದ ರಾಖಿ ಕಟ್ಟಿದರೆ ಶುಭ!

ಹಿಮ್ಮುಖ ಚಲನೆಯಲ್ಲಿ ರಾಹು-ಕೇತು ಗ್ರಹಗಳು : 
ಸೂರ್ಯ ಗ್ರಹಣದ ಸಮಯದಲ್ಲಿ ಚಂದ್ರ ಮತ್ತು ಬುಧ ಗ್ರಹಗಳು ಅಸ್ತಂಗತವಾಗಿರುತ್ತದೆ. ಇನ್ನೊಂದೆಡೆ , ರಾಹು ಮತ್ತು ಕೇತು ಹಿಮ್ಮುಖ ಚಲನೆಯಲ್ಲಿರುತ್ತವೆ. ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವು ಕೂಡಾ ಎಲ್ಲಾ 12 ರಾಶಿಚಕ್ರ (Zodiac sign) ಮೇಲೆ ಪರಿಣಾಮ ಬೀರುತ್ತದೆ. ಸನಾತನ ಸಂಸ್ಕೃತಿಯಲ್ಲಿ, ಯಾವುದೇ ಗ್ರಹಣವನ್ನು ಅಹಿತಕರ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳು ಮತ್ತು ಪೂಜೆ (pooje) ಇತ್ಯಾದಿಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಗ್ರಹಣದ ಸಮಯದಲ್ಲಿ ದೇವಾಲಯದ ಬಾಗಿಲು ಮುಚ್ಚಿರುತ್ತದೆ.

ಸೂತಕ ಅವಧಿ ಮಾನ್ಯವಾಗಿರುವುದಿಲ್ಲ :
ಜ್ಯೋತಿಷ್ಯದ ಪ್ರಕಾರ (Astrology), ಸಂಪೂರ್ಣ ಗ್ರಹಣವಿದ್ದಾಗ ಮಾತ್ರ ಸೂತಕ ಅವಧಿ ಮಾನ್ಯವಾಗಿರುತ್ತದೆ. ಅದೇ ಸಮಯದಲ್ಲಿ, ಈ ವರ್ಷ ಡಿಸೆಂಬರ್ 4 ರಂದು ಸೂರ್ಯ ಗ್ರಹಣ ಉಪಚಾಯ ಗ್ರಹಣವಾಗಿರಲಿದೆ. ಆದ್ದರಿಂದ, ಸೂತಕ ಅವಧಿ ಇಲ್ಲಿ ಮಾನ್ಯವಾಗಿರುವುದಿಲ್ಲ. ಈ ಕಾರಣದಿಂದಾಗಿ, ಗ್ರಹಣದ ದಿನದಂದು ಸೂತಕದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಲ್ಲ. 

ಇದನ್ನೂ ಓದಿ : Swapna Shastra : ನಿಮಗೂ ಬೀಳುತ್ತದೆಯೇ ಇಂಥಹ ಕನಸು, ಹಾಗಿದ್ದರೆ ನೆರೆವೇರಲಿದೆ ಎಲ್ಲಾ ಇಷ್ಟಾರ್ಥ

ಕೊನೆಯ ಸೂರ್ಯಗ್ರಹಣ :
ಈ ವರ್ಷದ ಕೊನೆಯ ಸೂರ್ಯಗ್ರಹಣವು ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸುತ್ತದೆ. ಈ ಸೂರ್ಯಗ್ರಹಣವನ್ನು ಭಾರತದಲ್ಲಿ ನೋಡಲು ಸಾಧ್ಯವಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News