Relationship tips : ಪ್ರೀತಿಗೆ ಸೌಂದರ್ಯ ಮುಖ್ಯವಲ್ಲ ಮನಸ್ಸು ಸುಂದರವಾಗಿದ್ದರೆ ಸಾಕು. ಪ್ರೀತಿಸುವ ವ್ಯಕ್ತಿಗೆ ಭಾವನಾತ್ಮಕವಾಗಿ ಹತ್ತಿರವಾಗಿದ್ದರೆ ಪ್ರೀತಿ ಗಟ್ಟಿಯಾಗಿರುತ್ತದೆ. ಸಂಬಂಧದಲ್ಲಿ ಭಾವನಾತ್ಮಕ ಬಾಂಧವ್ಯ ಬಹಳ ಮುಖ್ಯ. ಈ ಭಾವನಾತ್ಮಕ ನಿಕಟತೆಯಲ್ಲಿ, ನಿಮ್ಮ ಆಲೋಚನೆಗಳು, ಭಾವನೆಗಳು ಮತ್ತು ಭವಿಷ್ಯದ ಕನಸುಗಳನ್ನು ಸಂಗಾತಿ ಜೊತೆ ಪರಸ್ಪರ ಹಂಚಿಕೊಳ್ಳುವುದು ಇಬ್ಬರ ದೃಷ್ಟಿಕೋನದಿಂದ ಒಳ್ಳೆಯದು. ಇದು ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬನ್ನಿ ಈ ಕುರಿತು ಹೆಚ್ಚಿನ ವಿಚಾರಗಳನ್ನು ತಿಳಿಯೋಣ..
ಒಟ್ಟಿಗೆ ಸಮಯ ಕಳೆಯುವುದು: ಸಂಗಾತಿ ಜೊತೆ ಸಮಯ ಕಳೆಯುವುದು ಇಬ್ಬರ ನಡುವಿನ ಬಾಂಧವ್ಯವನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ. ಆಗಾಗ ಸಣ್ಣ ಪುಟ್ಟ ಕೆಲಸವಾದರೂ ಸರಿ ಇಬ್ಬರು ಒಟ್ಟಿಗೆ ಮಾಡಲು ಪ್ರಾರಂಭಿಸಿ. ಉದಾರಹಣೆಗೆ, ಲಾಂಗ್ ಡ್ರೈವ್, ಪ್ರವಾಸ, ಒಟ್ಟಿಗೆ ತಿನ್ನುವುದು, ಒಟ್ಟಾಗಿ ಮೆನೆ ಕೆಲಸಗಳನ್ನು ಮಾಡುವುದು ಈ ರೀತಿ ಸಣ್ಣ ಪುಟ್ಟ ಕೆಲಸಗಳು ನಿಮ್ಮ ನಡುವಿನ ಬಂಧನವನ್ನು ಬಿಗಿಯಾಗಿಸುತ್ತವೆ.
ಇದನ್ನೂ ಓದಿ:ಸಚಿನ್ ದಾಖಲೆ ಬ್ರೇಕ್ ಮಾಡಿದ ಪತಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ..! ಕ್ಯೂಟ್ ವಿಡಿಯೋ ವೈರಲ್
ಅಭಿನಂದಿಸಿ, ಪ್ರೀತಿ ತೋರಿ : ಪ್ರೀತಿಯಲ್ಲಿ ಅನೇಕ ವಿಷಯಗಳು ಹೇಳದೆಯೇ ಅರ್ಥವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಈ ಹೇಳಿಕೆ ಯಾವಾಗಲೂ ನಿಜವಲ್ಲ. ಏಕೆಂದರೆ ಲವ್‌ನಲ್ಲಿ ಇರುವ ಜೋಡಿಗಳ ವಿಚಾರಧಾರೆಗಳು ವಿಭಿನ್ನವಾಗಿರಬಹುದು. ಸಂಗಾತಿಯ ಸಣ್ಣ ಪುಟ್ಟ ಕೆಲಸಗಳನ್ನು ಮನಸಾರೆ ಅಭಿನಂದಿಸಿ, ಅವರಿಗೆ ಉತ್ಸಾಹ ನೀಡುವುದು ಬಲು ಮುಖ್ಯ. ಇನ್ನು ಯುವತಿಯ ವಿಚಾರಕ್ಕೆ ಬಂದಾಗ ಅವರ ಸೌಂದರ್ಯ ಮತ್ತು ಉಡುಗೆ ತೊಡುಗೆಗಳ ಬಗ್ಗೆ ಪಾಸಿಟಿವ್ ಆಗಿ ಕಾಮೆಂಟ್ ಮಾಡಿ, ಅವರು ಅದನ್ನು ತುಂಬಾ ಇಷ್ಟ ಪಡುತ್ತಾರೆ. ಅವರು ರೆಡಿಯಾಗುವುದೇ ನಿಮಗಾಗಿ ಅಲ್ಲವೆ..
ಪ್ರೀತಿಯನ್ನು ಜೀವಂತವಾಗಿಡಿ: ಆರಂಭದಲ್ಲಿ ನಿಮ್ಮಲ್ಲಿ ಹೊತ್ತಿಕೊಂಡ ಪ್ರೀತಿಯ ಬೆಂಕಿಯನ್ನು ನೀವು ಜೀವಂತವಾಗಿಡಬೇಕು. ನಿಮ್ಮ ಪ್ರೇಮಿಯನ್ನು ಅಚ್ಚರಿಗೊಳಿಸಲು ಸರ್ಪ್ರೈಜ್ ನೀಡಿ. ಅವರಿಗೆ ಗೊತ್ತಿರದಂತೆ ಅವರಿಗೆ ಇಷ್ಟವಾದ ಸ್ಥಳ, ತಿಂಡಿ, ಹೊಟೇಲ್, ಹೀಗೆ ಏನಾದರೂ ವಿಚಾರಗಳಿಂದ ಅವರಿಗೆ ಸರ್ಪ್ರೈಸ್ ನೀಡುವುದು ಬಳಹ ಒಳ್ಳೆಯದು. ನಿಮ್ಮ ಲವ್ ಆನಿವರ್ಸರಿ, ವಿವಾಹ ವಾರ್ಷಿಕೋತ್ಸವಕ್ಕೆ ಅವರಿಗೆ ಗೊತ್ತಿರದಂತೆ ವಿಶ್ ಮಾಡಿ. ಇದರಿಂದ ಅವರು ತುಂಬಾ ಖುಷಿಯಾಗುತ್ತಾರೆ.
ಇದನ್ನೂ ಓದಿ:ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿಂದರೆ ಏನಾಗುತ್ತದೆ ? 90 ಶೇ. ದಷ್ಟು ಜನರಿಗೆ ತಿಳಿದಿಲ್ಲ ಈ ಸತ್ಯ
ಸ್ವಾತಂತ್ರ್ಯ.. ನೀಡಿ : ಪ್ರೀತಿಯಲ್ಲಿ ಇಬ್ಬರ ಸ್ವಾತಂತ್ರ ಬಹಳ ಮುಖ್ಯ, ಪ್ರತಿಯೊಂದು ಸಣ್ಣ ವಿಷಯದ ಕುರಿತು ಹಂಚಿಕೊಳ್ಳುವ ಅಗತ್ಯವಿಲ್ಲ. ಅಲ್ಲದೆ, ಅದ್ಯಾಕೆ ಮಾಡಿದೆ, ಹೀಗ್ಯಾಕೆ ಮಾಡಿದೆ, ಅಂತ ಪ್ರತಿ ಕೆಲಸಕ್ಕೂ ಅವರನ್ನು ಪ್ರಶ್ನೆ ಮಾಡುವುದನ್ನು ಬಿಡಿ. ಅವರಿಗೂ ಸ್ವಾತಂತ್ರ ನೀಡಿ, ಅವರಿಷ್ಟದ ಕೆಲಸ ಮಾಡಲು ಬಿಡಿ. ಇದು ನಿಮ್ಮ ಸಂಬಂಧವನ್ನು ಜೀವಂತವಾಗಿರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಪರಸ್ಪರ ಗೌರವವನ್ನು ಬೆಳೆಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.