Somvati Amavasya 2022 Muhurat: ಮೇ 30, 2022 ರಂದು ಸೋಮವಾರ ಏಕಕಾಲಕ್ಕೆ ಮೂರು ಉತ್ಸವಗಳು ಬಂದ ಕಾರಣ ಈ ದಿನದ ಮಹತ್ವ ಭಾರಿ ಹೆಚ್ಚಾಗಿದೆ. ಈ ದಿನ ಸುಮಂಗಲಿ ಮಹಿಳೆಯರು ತಮ್ಮ ಅಖಂಡ ಸೌಭಾಗ್ಯಕ್ಕಾಗಿ ವಟ ಸಾವಿತ್ರಿ ವೃತವನ್ನು ಕೈಗೊಳ್ಳುತ್ತಾರೆ. ಇದಲ್ಲದೆ, ಶನಿ ದೋಷದಿಂದ ಪೀಡಿತ ಜಾತಕದವರು ಶನಿಯ ಕೃಪೆಯನ್ನು ಪಡೆಯಲು ಶನಿ ಜಯಂತಿಯ ದಿನ ವಿಶೇಷ ಉಪಾಯಗಳನ್ನು ಕೈಗೊಳ್ಳುತ್ತಾರೆ. ಇದೇ ದಿನ ಸೋಮವತಿ ಅಮಾವಾಸ್ಯೆಯ ಶುಭ ಕಾಕತಾಳೀಯ ಕೂಡ ಸೃಷ್ಟಿಯಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಸೋಮವತಿ ಅಮಾವಾಸ್ಯೆಯ ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನ ದೀನ ಬಡವರಿಗೆ ದಾನಗಳನ್ನು ಮಾಡಿದರೆ, ಪಿತೃದೇವರ ಆಶೀರ್ವಾದ ಲಭಿಸುತ್ತದೆ. ಒಂದೇ ದಿನದಲ್ಲಿ ಹಲವು ದೇವ-ದೇವತೆಗಳ ಅನುಗ್ರಹಕ್ಕೆ ಪಾತ್ರರಾಗಲು ನಾಳಿನ ದಿನ ತುಂಬಾ ವಿಶೇಷವಾಗಿದೆ.
ಸೋಮವತಿ ಅಮಾವಾಸ್ಯೆಯ ದಿನ ಗ್ರಹ-ನಕ್ಷತ್ರಗಳ ಶುಭ ಸಂಯೋಜನೆ
ಜೋತಿಷ್ಯಾಚಾರ್ಯರ ಪ್ರಕಾರ, ಸೋಮವಾರದ ದಿನ ಸರ್ವಾರ್ಥ ಸಿದ್ಧಿ ಯೋಗದಲ್ಲಿ ಅಮಾವಾಸ್ಯೆಯ ತಿಥಿ ಆರಂಭಗೊಳ್ಳುತ್ತಿದೆ. ಇದಲ್ಲದೆ, ಇದೇ ದಿನ ಬುಧಾದಿತ್ಯ, ವರ್ಧಮಾನ, ಸುಕರ್ಮಾ ಹಾಗೂ ಕೇದಾರ ಹೆಸರಿನ ಶುಭ ಯೋಗಗಳು ಕೂಡ ಸೃಷ್ಟಿಯಾಗುತ್ತಿವೆ. ಈ ದಿನ ವೃಷಭ ರಾಶಿಯಲ್ಲಿ ಸೂರ್ಯ ಹಾಗೂ ಬುಧನ ಸಂಯೋಜನೆಯ ಕಾರಣ ಬುಧಾದಿತ್ಯಯೋಗ ನಿರ್ಮಾಣಗೊಳ್ಳುತ್ತಿದೆ. ಸಾಮಾನ್ಯವಾಗಿ ಇದನ್ನು ರಾಜಯೋಗ ಎಂದು ಕರೆಯಲಾಗುತ್ತದೆ. ಮೇ 30 ರಂದು ಏಕಕಾಲಕ್ಕೆ ಒಟ್ಟು 6 ಶುಭಯೋಗಗಳು ನಿರ್ಮಾಣಗೊಳ್ಳುತ್ತಿವೆ. ಈ ದಿನ ಶನಿದೇವ ತನ್ನ ಸ್ವಂತ ರಾಶಿಯಗಿರುವ ಕುಂಭ ರಾಶಿಯಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ದೇವಗುರು ಬೃಹಸ್ಪತಿ ಕೂಡ ತನ್ನ ಮೂಲ ಮನೆಯಾಗಿರುವ ಮೀನ ರಾಶಿಯಲ್ಲಿಯೇ ಇರಲಿದ್ದಾನೆ. ಈ ಎರಡೂ ಗ್ರಹಗಳು ತನ್ನ ತನ್ನ ರಾಶಿಯಲ್ಲಿಯೇ ಇರುವ ಕಾರಣ ಕುಂಭ ಹಾಗೂ ಮೀನ ರಾಶಿಯ ಜಾತಕದವರಿಗೆ ಶುಭಫಲಗಳು ಪ್ರಾಪ್ತಿಯಾಗಲಿವೆ.
ಇದನ್ನೂ ಓದಿ-Weekly Horoscope : ವಾರದ ರಾಶಿ ಭವಿಷ್ಯ, ಈ ರಾಶಿಯವರಿಗೆ ಅದೃಷ್ಟ ಜೊತೆಗೆ ಆರ್ಥಿಕ ಲಾಭ!
ಈ ವರ್ಷ ಮೇ 30 2022 ಸೋಮವಾರದಂದು ಸೋಮವತಿ ಅಮಾವಾಸ್ಯೆ ಬೀಳುತ್ತಿದೆ. ಸಾಮಾನ್ಯವಾಗಿ ಸೋಮವಾರದ ದಿನ ಚಂದ್ರನಿಗೆ ಸಮರ್ಪಿತವಾದ ದಿನವಾಗಿದೆ. ಚಂದ್ರನನ್ನು ಔಷಧಿ, ಧನ ಹಾಗೂ ಮನಸ್ಸಿನ ಕಾರಕ ಎಂದು ಭಾವಿಸಲಾಗುತ್ತದೆ. ಇನ್ನೊಂದೆಡೆ ಅಮಾವಾಸ್ಯೆಯ ತಿಥಿ ಪಿತೃರಿಗೆ ಸಮರ್ಪಿತವಾಗಿರುತ್ತದೆ. ಶಾಸ್ತ್ರಗಳ ಪ್ರಕಾರ ಚಂದ್ರನ ಹಿಂಭಾಗ ಪಿತೃಗಳ ವಾಸಸ್ಥಾನ ಎನ್ನಲಾಗುತ್ತದೆ. ಹೀಗಾಗಿ ಈ ದಿನ ಪಿತೃಗಳ ಆತ್ಮಶಾಂತಿಗಾಗಿ ತರ್ಪಣ, ಶ್ರಾದ್ಧ ಇತ್ಯಾದಿ ವಿಧಿಗಳನ್ನು ಕೈಗೊಳ್ಳಬೇಕು. ಈ ದಿನ ಚಂದ್ರ ತನ್ನ ಉಚ್ಛ ರಾಶಿಯಗಿರುವ ವೃಷಭದಲ್ಲಿರುವ ಕಾರಣ ಶುಭಫಲಗಳನ್ನು ನೀಡುತ್ತಾನೆ. ವೃಷಭ ರಾಶಿಯ ರಾಷ್ಯಾಧಿಪ ಶುಕ್ರನಾಗಿದ್ದಾನೆ. ಶುಕ್ರ, ಸೂರ್ಯ ಹಾಗೂ ಚಂದ್ರನ ಜೊತೆಗೆ ಸ್ನೇಹ ಭಾವದ ಸಂಬಂಧವಿದೆ. ಗ್ರಹಗಳ ಈ ಸ್ಥಿತಿಯ ಕಾರಣ ಮನ ಬಯಸುವ ಯಶಸ್ಸು ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ-Today Horoscope : ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ಜಾಗರೂಕರಾಗಿರಬೇಕು!
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.