How To Dry Wet Cloths During Monsoon Season : ಬೇಸಿಗೆಯಲ್ಲಿ ಯಾವಾಗ ವರುಣ ದೇವ ಕೃಪೆ ತೋರುತ್ತಾನೋ ಎನ್ನುವ ಯೋಚನೆ. ಅದೇ ಮಳೆಗಾಲ ಆರಂಭವಾಯಿತೆಂದರೆ ಮತ್ತೆ ಸೂರ್ಯ ದೇವ ಯಾವಾಗ ಕಣ್ಣು ಬಿಡುವನೋ ಎನ್ನುವ ಚಿಂತೆ. ಬೇಸಿಗೆಯ ನಂತರ ಮಳೆಯ ಸಿಂಚನವಾಗುತ್ತಿದ್ದಂತೆ ಮೈ ಮನ ತಂಪಾಗುತ್ತದೆ. ಆದರೆ ಬಿಡದೇ ಸುರಿಯುವ ಮಳೆ ಮತ್ತೆ ಕೆಲವು ಸಮಸ್ಯೆಗಳನ್ನು ತಂದು ಬಿಡುತ್ತದೆ. ಅದರಲ್ಲಿ ಬಹಳ ಮುಖ್ಯವಾದ ಸಮಸ್ಯೆ ಎಂದರೆ ಮಳೆಗಾಲದಲ್ಲಿ ಒಗೆದ ಬಟ್ಟೆ ಒಣಗದೇ ಇರುವುದು. ಅದರಲ್ಲೂ ದಪ್ಪ ಬಟ್ಟೆಗಳಿದ್ದರೆ ಮುಗಿದೇ ಹೋಯಿತು. ಒಣಗಲು ವಾರಗಟ್ಟಲೆ ತೆಗೆದುಕೊಳ್ಳುತ್ತದೆ. ಆದರೆ, ನಾವು ಹೇಳುವ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮಳೆಗಾಲದಲ್ಲಿ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬಹುದು.
ಮಳೆಗಾಲದಲ್ಲಿ ಒದ್ದೆ ಬಟ್ಟೆಯನ್ನು ಒಣಗಿಸುವುದು ಹೇಗೆ? :
1. ಫ್ಯಾನ್ ಕೆಳಗೆ ಬಟ್ಟೆಗಳನ್ನು ಹಾಕಿ ಒಣಗಿಸಿ :
ಇದು ಅತ್ಯಂತ ಸಾಮಾನ್ಯ ಮತ್ತು ಸುಲಭವಾದ ವಿಧಾನವಾಗಿದೆ. ಆದ್ದರಿಂದ ಇದನ್ನು ಪ್ರತಿಯೊಂದು ಮನೆಯಲ್ಲೂ ಪ್ರಯತ್ನಿಸಲಾಗುತ್ತದೆ. ಮೊದಲನೆಯದಾಗಿ, ಒದ್ದೆಯಾದ ಬಟ್ಟೆಗಳನ್ನು ಹಿಂಡಿ ಮತ್ತು ಸ್ವಲ್ಪ ಹೊತ್ತು ನೇತು ಹಾಕಿ. ಆ ಬಟ್ಟೆಯಲ್ಲಿರುವ ಹೆಚ್ಚಿನ ನೀರು ಕೆಳಗೆ ಹರಿದು ಹೋಗಲು ಬಿಡಿ. ಬಟ್ಟೆಯಲ್ಲಿನ ತೇವಾಂಶ ಕಡಿಮೆಯಾಯಿತು ಎನ್ನುವಾಗ ಅದನ್ನು ಸೀಲಿಂಗ್ ಅಥವಾ ಟೇಬಲ್ ಫ್ಯಾನ್ ಕೆಳಗೆ ಹಾಕಿ. ಫುಲ್ ಸ್ಪೀಡ್ ನಲ್ಲಿ ಫ್ಯಾನ್ ರನ್ ಮಾಡಿ. ಫ್ಯಾನ್ ಗಾಳಿಗೆ ಬಟ್ಟೆ ಬೇಗನೆ ಒಣಗುತ್ತದೆ.
ಇದನ್ನೂ ಓದಿ : ಮನೆಯಲ್ಲಿ ಈ ಸಸಿ ನೆಟ್ಟರೆ ನಿಲ್ಲುವುದೇ ಇಲ್ಲ ಹಣದ ಹರಿವು ! ಮನಿ ಪ್ಲಾಂಟ್ ಕೂಡಾ ಇದರೆದುರು ಫೈಲ್
2. ಟವೆಲ್ ಬಳಸಿ :
ಒದ್ದೆ ಬಟ್ಟೆಗಳನ್ನು ಒಣಗಿಸಲು ನೀವು ಟವೆಲ್ ಅನ್ನು ಕೂಡಾ ಬಳಸಬಹುದು. ಇದಕ್ಕಾಗಿ, ಮೊದಲು ಒದ್ದೆಯಾದ ಬಟ್ಟೆಯನ್ನು ಚೆನ್ನಾಗಿ ಹಿಸುಕಿಕೊಳ್ಳಿ. ನಂತರ ಅದನ್ನು ಒಣ ಟವೆಲ್ ಮಧ್ಯದಲ್ಲಿ ಕಟ್ಟಿಕೊಳ್ಳಿ. ಈಗ ಬಟ್ಟೆಯನ್ನು ಮತ್ತೆ ಹಿಂಡಿ ಕೊಳ್ಳಿ. ಹೀಗೆ ಮಾಡುವುದರಿಂದ, ಟವೆಲ್ ನಲ್ಲಿರುವ ಹೆಚ್ಚಿನ ತೇವಾಂಶವು ಹೋಗುತ್ತದೆ. ನಂತರ ಬಟ್ಟೆಯನ್ನು ಫ್ಯಾನ್ ಅಡಿಯಲ್ಲಿ ಹಾಕಿದರೆ ಸುಲಭವಾಗಿ ಒಣಗಿಸಲು ಸಾಧ್ಯವಾಗುತ್ತದೆ.
3. ನ್ಯೂಸ್ ಪೇಪರ್ ಬಳಸಿ :
ದಪ್ಪ ಬಟ್ಟೆಗಳನ್ನು ಒಣಗಿಸಬೇಕಾದರೆ ನ್ಯೂಸ್ ಪೇಪರ್ ಅನ್ನು ಬಳಸಬಹುದು. ಇದಕ್ಕಾಗಿ, ಒದ್ದೆಯಾದ ಬಟ್ಟೆಯನ್ನು ನ್ಯೂಸ್ ಪೇಪರ್ ನಲ್ಲಿ ಇರಿಸಿ ಚೆನ್ನಾಗಿ ಪ್ರೆಸ್ ಮಾಡಿ. ಬಟ್ಟೆ ಒಂದೇ ಸಮಯದಲ್ಲಿ ಒಣಗದಿದ್ದರೆ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ತಿಳಿ ಬಣ್ಣದ ಬಟ್ಟೆಗಳಿಗೆ ಈ ಟ್ರಿಕ್ ಅನ್ನು ಬಳಸಬೇಡಿ. ಏಕೆಂದರೆ ಪತ್ರಿಕೆಯಲ್ಲಿ ಮುದ್ರಿಸಲಾದ ಶಾಯಿ ನಿಮ್ಮ ನೆಚ್ಚಿನ ಬಟ್ಟೆಗಳನ್ನು ಹಾಳುಮಾಡಿ ಬಿಡಬಹುದು.
ಇದನ್ನೂ ಓದಿ : Dark circles: ಒಂದೇ ವಾರದಲ್ಲಿ ಡಾರ್ಕ್ ಸರ್ಕಲ್ ತೊಲಗಿಸುತ್ತೆ ಈ ಹಿಟ್ಟಿನ ಮಾಸ್ಕ್.!
4.ಇಸ್ತ್ರಿ ಮಾಡಿ :
ಎಲ್ಲಾ ಪ್ರಯತ್ನಗಳ ನಂತರವೂ ಬಟ್ಟೆಗಳಲ್ಲಿ ತೇವಾಂಶವು ಉಳಿದಿರುವಾಗ, ಅದನ್ನು ಒಣಗಿಸಲು ವಿದ್ಯುತ್ ಪ್ರೆಸ್ ಅನ್ನು ಬಳಸಿ. ಮೊದಲು ಬಟ್ಟೆಯನ್ನು ಟೇಬಲ್ ಮೇಲೆ ಇರಿಸಿ ಅದರ ಮೇಲೆ ನಿಧಾನವಾಗಿ ಪ್ರೆಸ್ ಮಾಡಿ. ಇದು ಬಟ್ಟೆಗಳನ್ನು ತ್ವರಿತವಾಗಿ ಒಣಗಿಸಳು ಸಹಾಯ ಮಾಡುತ್ತದೆ. ನೀವು ತಕ್ಷಣ ಅವುಗಳನ್ನು ಧರಿಸಿ ಹೊರಗೆ ಹೋಗಬಹುದು.
5. ಹೇರ್ ಡ್ರೈಯರ್ ಬಳಸಿ :
ಕೆಲವೊಮ್ಮೆ ಇಸ್ತ್ರಿ ನಮ್ಮ ಬಟ್ಟೆಗಳನ್ನು ಹಾನಿಗೊಳಿಸುತ್ತದೆ. ಬಟ್ಟೆ ಹಾನಿಯಾಗಬಹುದು ಎನ್ನುವ ಭಯವಿದ್ದರೆ, ಹೇರ್ ಡ್ರೈಯರ್ ಅನ್ನು ಬಳಸಬಹುದು. ಅದರ ಬಿಸಿ ಗಾಳಿಯ ಸಹಾಯದಿಂದ ಬಟ್ಟೆಗಳು ಬೇಗನೆ ಒಣಗುತ್ತವೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.